ರಾಮ್‌ ಚರಣ್ ಶಂಕರ್ ಸಿನಿಮಾ ಟಿಕೆಟ್ ಖರೀದಿಯಲ್ಲಿ ಏರಿಕೆ? ಅದ್ರೂ ಅದು ಎಲ್ಲಿಗೂ ಸಾಕಾಗಲ್ಲ

ಟಾಲಿವುಡ್‌ನಲ್ಲಿ 'ಪುಷ್ಪ 2' ದೊಡ್ಡ ಮಟ್ಟಿಗೆ ಹವಾವನ್ನೇ ಸೃಷ್ಟಿಸಿದೆ. ಇನ್ನೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಸಾವಿರ ಕೋಟಿ ಕ್ಲಬ್ ಸೇರಿದ್ದಷ್ಟೇ ಅಲ್ಲದೆ, ಪ್ಯಾನ್ ಇಂಡಿಯಾ ದಾಖಲೆಗಳನ್ನೆಲ್ಲಾ ಒಂದೊಂದಾಗೇ ಉಡೀಸ್ ಮಾಡಿಕೊಂಡು ಹೋಗುತ್ತಿದೆ. ಈ ಬೆನ್ನಲ್ಲೇ ಮೆಗಾ ಪವರ್‌ಸ್ಟಾರ್ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅದುವೇ

'ಗೇಮ್ ಚೇಂಜರ್' ಯಾಕಿಷ್ಟು ಚರ್ಚೆಯಾಗುತ್ತಿದೆ ಅಂದ್ರೆ, ಅದಕ್ಕೆ ಕಾಂಬಿನೇಷನ್. ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ಹಾಗೂ ಗ್ಲೋಬಲ್ ಸ್ಟಾರ್ ರಾಮ್‌ ಚರಣ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕ್ರೇಜ್ ಇದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಡ್ವಾನ್ಸ್ ಬುಕಿಂಗ್ ಯಾಕೋ ಡಲ್ ಹೊಡೆಯುತ್ತಿದೆ.

Ram Charan Shankar combination movie Game Changer advance tickets booking in USA jumps 58 percent

ಅಮೆರಿಕದಲ್ಲಿ ಪೇಯ್ಡ್‌ ಪ್ರೀಮಿಯರ್‌ಗೆ ಈಗಾಗಲೇ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ಮೊದಲ 48 ಗಂಟೆಗಳಲ್ಲಿ ಟಿಕೆಟ್ ಖರೀದಿಗೆ ಯಾಕೋ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದ್ರೀಗ ದಿಢೀರನೇ 58% ಏರಿಕೆಯಾಗಿದೆ ಎಂದು ವರದಿಯಾಗಿದೆ. ಆದರೂ ಇದು ಶಂಕರ್ ಹಾಗೂ ರಾಮ್‌ ಚರಣ್ ಇಮೇಜ್‌ಗೆ ಸರಿಹೊಂದುವಂತಹ ನಂಬರ್ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ.

ಟಾಲಿವುಡ್‌ ಸ್ಟಾರ್‌ಗಳಿಗೆ ಅಮೆರಿಕದ ಪ್ರತಿಷ್ಠೆಯ ಏರಿಯಾವಾಗಿದೆ. ಇಲ್ಲಿ ಪೇಯ್ಡ್ ಪ್ರೀಮಿಯರ್‌ಗೆ ಸಿಗುವ ರೆಸ್ಪಾನ್ಸ್‌ ಮೇಲೆ ಸಿನಿಮಾದ ಭವಿಷ್ಯವನ್ನು ಅಳೆಯಲಾಗುತ್ತಿದೆ. ರಾಮ್‌ ಚರಣ್, ಜೂ.ಎನ್‌ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್‌ ಅಂತಹ ನಟರಿಗೆ ಇಲ್ಲಿ ಭಾರೀ ಬೇಡಿಕೆಯಿದೆ. ಪ್ರೀಮಿಯರ್‌ ಶೋಗಳಿಗೆ ಹೇಗೆ ಬುಕಿಂಗ್ ಆಗುತ್ತೆ ಅನ್ನೋದರ ಮೇಲೆ ಕ್ರೇಜ್ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ.

ರಾಮ್‌ ಚರಣ್ ಸಿನಿಮಾ 'ಗೇಮ್ ಚೇಂಜರ್' ಅಮೆರಿಕದಲ್ಲಿ ಸದ್ದು ಮಾಡುತ್ತಿಲ್ಲ. ಅಲ್ಲಿ ನೆಲೆಸಿರುವ ತೆಲುಗು ಮಂದಿಗೆ ಈ ಸಿನಿಮಾ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತಿದ್ದಾರೆ. ಉತ್ತರ ಅಮೆರಿಕದಲ್ಲಿ ಕೇವಲ 537 ಶೋಗಳನ್ನು ಹಾಕಲಾಗಿದೆ. ಸುಮಾರು 197 ಲೋಕೇಶ್‌ಗಳಿಂದ ಕೇವಲ 2143 ಟಿಕೆಟ್‌ಗಳು ಮಾತ್ರ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಜನವರಿ 9 ರಂದು ಅಮೆರಿಕದಲ್ಲಿ ಪೇಯ್ಡ್ ಪ್ರೀಮಿಯರ್ ಇದ್ದು ಇಲ್ಲಿವರೆಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೊಯ್‌ಮೊಯ್ ವರದಿ ಮಾಡಿದೆ.

ನಿನ್ನೆ (ಡಿಸೆಂಬರ್ 17) ವರೆಗೆ 'ಗೇಮ್ ಚೇಂಜರ್' ಸಿನಿಮಾ ಟಿಕೆಟ್ ಬುಕಿಂಗ್‌ನಲ್ಲಿ ಏರಿಕೆ ಕಂಡಿದ್ದರೂ ಅದು ಟ್ರೇಡ್‌ ಎಕ್ಸ್‌ಪರ್ಟ್‌ಗಳಿಗೆ ಅದ್ಭುತ ಎನಿಸಿಲ್ಲ. ಇಲಿವರೆಗೂ ಸುಮಾರು 51 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಪ್ರೀಮಿಯರ್ ಬುಕಿಂಗ್‌ನಿಂದ ಗಳಿಸಿದೆ ಎನ್ನಲಾಗಿದೆ. ಇದು ಎರಡು ದಿನಗಳ ಹಿಂದೆ ಕೇವಲ 19 ಲಕ್ಷ ರೂಪಾಯಿ ಇತ್ತು. ಹೀಗಾಗಿ ಕೊಂಚ ಸಮಾಧಾನಗೊಂಡಂತೆ.

ಇತ್ತೀಚೆಗೆ ಶಂಕರ್ ಸಿನಿಮಾ ಯಾಕೋ ಮೋಡಿ ಮಾಡುತ್ತಿಲ್ಲ. ಇತ್ತೀಚೆಗೆ ತೆರೆಕಂಡಿದ್ದ 'ಇಂಡಿಯನ್ 2' ಕೂಡ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಈಗ 'ಗೇಮ್ ಚೇಂಜರ್' ಕೂಡ ಶಂಕರ್ ವೃತ್ತಿ ಬದುಕಿನಲ್ಲೇ ಅತೀ ಕಡಿಮೆ ಆಸಕ್ತಿ ತೋರುತ್ತಿರುವ ಸಿನಿಮಾ ಎನ್ನಲಾಗಿದೆ. ಜನವರಿ 10 ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ, ಜನವರಿ 9ರಂದು ಯುಎಸ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಇನ್ನು ಸಮಯ ಇರುವುದರಿಂದ ಬುಕಿಂಗ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ. ರಾಮ್ ಚರಣ್, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಹಾಡುಗಳು ಹಾಗೂ ತುಣುಕುಗಳು ರಿಲೀಸ್ ಆಗಿದೆ. ಅವುಗಳು ಕೂಡ ಏನೂ ಸದ್ದು ಮಾಡಿಲ್ಲ.

More from Filmibeat

English summary
Ram Charan and Shankar combination movie Game Changer advance tickets booking in USA jumps 58 percent;
Read more about: ram charan shankar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X