Game Changer Box Office Day 1:ಬಾಕ್ಸಾಫೀಸ್‌ನಲ್ಲಿ 'ಗೇಮ್ ಚೇಂಜರ್' ಆಗುತ್ತಾ? ಫಸ್ಟ್ ಡೇ ಲೆಕ್ಕಾಚಾರವೇನು?

ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ RRR ರಾಮ್ ಚರಣ್‌ಗೆ ವಿಶ್ವ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಆ ಜನಪ್ರಿಯತೆಯನ್ನು ಈಗ ಉಳಿಸಿಕೊಳ್ಳಬೇಕಿದೆ. ಶಂಕರ್ ಅಂತಹ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ ಸಿನಿಮಾ 'ಗೇಮ್ ಚೇಂಜರ್‌' ರಾಮ್ ಚರಣ್‌ಗೆ ಯಶಸ್ಸು ಕೊಡುತ್ತಾ ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಹುಟ್ಟಿಕೊಂಡಿದೆ.

ಶಂಕರ್ ನಿರ್ದೇಶಿಸುವ ಸಿನಿಮಾಗಳು ವಿಭಿನ್ನವಾಗಿರುತ್ತೆ. ಈ ಹಿಂದೆ ಅವರು ನಿರ್ದೇಶಿಸಿದ ಸಿನಿಮಾಗಳು ಟ್ರೆಂಡ್ ಹುಟ್ಟಾಕಿವೆ. ಅವರ ಸಿನಿಮಾಗಳನ್ನು ನೋಡಿ ಅದೆಷ್ಟೋ ಸಿನಿಮಾಗಳು ಬಂದು ಹೋಗಿವೆ. ಈಗ ಅವರ ಬತ್ತಳಿಕೆಯಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ 'ಗೇಮ್ ಚೇಂಜರ್' ಇಂದು (ಜನವರಿ 10) ರಿಲೀಸ್ ಆಗಿದೆ. ರಾಮ್‌ ಚರಣ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Ram Charan Shankar film Game Changer Day 1 box office prediction report

'ಗೇಮ್ ಚೇಂಜರ್' ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಯುಎಸ್‌ಎನಲ್ಲಿ ಸಿನಿಮಾದ ಪ್ರೀಮಿಯರ್ ಕೂಡ ನಡೆದಿದೆ. ದೊಡ್ಡ ಸ್ಟಾರ್ ಕಾಸ್ಟ್‌ ಇರುವ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋದು ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರುವ ಲೆಕ್ಕವೇನು?

'ಗೇಮ್ ಚೇಂಜರ್' ಕ್ರೇಜ್ ಹೇಗಿದೆ?

ಒಂದ್ಕಡೆ ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್. ಇನ್ನೊಂದು ಕಡೆ ಶಂಕರ್. ಈ ಸಿನಿಮಾ ಮೂಲಕ ಇಬ್ಬರು ದಿಗ್ಗಜರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ತಮಿಳು ನಟಿ ಅಂಜಲಿ, ಸಮುಥಿರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್ ಸುನೀಲ್, ಜಯರಾಮ್ ಅಂತ ದಿಗ್ಗಜರೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ತೆರೆಮೇಲೆ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

Ram Charan Shankar film Game Changer Day 1 box office prediction report

ಭಾರತದಲ್ಲಿ ಫಸ್ಟ್ ಕಲೆಕ್ಷನ್ ಲೆಕ್ಕಾಚಾರವೇನು?

ಈ ವಾರ 'ಗೇಮ್ ಚೇಂಬರ್'ಗೆ ಟಕ್ಕರ್ ಕೊಡುವಂತಹ ಸಿನಿಮಾ ಇಲ್ಲ. ಹೀಗಾಗಿ ಭಾರತದ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ಈಗಾಗಲೇ 'ಗೇಮ್ ಚೇಂಜರ್' 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ, 50 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ವಿಶ್ವದಾದ್ಯಂತ ಹೇಗಿರುತ್ತೆ ಕಲೆಕ್ಷನ್?

ರಾಮ್‌ ಚರಣ್‌ಗೆ ವಿದೇಶದಲ್ಲಿಯೂ ಉತ್ತಮ ಫ್ಯಾನ್ ಫಾಲೋಯಿಂಗ್ ಇದೆ. ಅದರಲ್ಲೂ RRR ಸಿನಿಮಾ ಬಳಿಕ ಅಭಿಮಾನಿಗಳ ಸಂಖ್ಯೆನೂ ಹೆಚ್ಚಾಗಿದೆ. ಹೀಗಾಗಿ ವಿದೇಶದ ಮಾರುಕಟ್ಟೆಯಲ್ಲಿ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರುವ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ 40 ರಿಂದ 45 ಕೋಟಿ ರೂಪಾಯಿ ವಿದೇಶದಿಂದನೇ ಹರಿದು ಬರಲಿದೆ. ಹೀಗಾಗಿ ಮೊದಲ ದಿನ ವಿಶ್ವದಾದ್ಯಂತ 90 ರಿಂದ 100 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

ಜಾದು ಮಾಡಬಹುದೇ ಶಂಕರ್?

ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಶಂಕರ್ ನಿರ್ದೇಶಿಸಿದ ಸಿನಿಮಾ 'ಇಂಡಿಯನ್ 2' ಹೀನಾಯವಾಗಿ ಸೋಲುಂಡಿತ್ತು. ಈ ಕಾರಣಕ್ಕೆ ಶಂಕರ್ 'ಗೇಮ್ ಚೇಂಜರ್' ಮೂಲಕ ಕಮ್‌ಬ್ಯಾಕ್ ಮಾಡುತ್ತಾರಾ? ಅನ್ನೋದನ್ನು ಚಿತ್ರರಂಗ ಎದುರು ನೋಡುತ್ತಿದೆ. ರಾಮ್ ಚರಣ್‌ಗೆ ಡಬಲ್ ರೋಲ್ ಕೊಟ್ಟು ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚಿಸುತ್ತಾರಾ? ಅನ್ನೋದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Ram Charan, Shankar movie Game Changer Day 1 box office prediction report;
Read more about: ram charan shankar box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X