Game Changer Box Office Day 1: ಮೊದಲ ದಿನ ಅಬ್ಬರಿಸಿತೇ ರಾಮ್ ಚರಣ್-ಶಂಕರ್ ಸಿನಿಮಾ 'ಗೇಮ್ ಚೇಂಜರ್'?

ಈ ವರ್ಷದ ಮೊದಲ ಬಹು ನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್' ನಿನ್ನೆ (ಜನವರಿ 10) ವಿಶ್ವದಾದ್ಯಂತ ರಿಲೀಸ್ ಆಗಿದೆ. ತೆಲುಗಿನ ಮೆಗಾ ಪವರ್‌ ರಾಮ್ ಚರಣ್ ಹಾಗೂ ದುಬಾರಿ ಸಿನಿಮಾಗಳ ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ತೆರೆಕಂಡಿದ್ದ ಸಿನಿಮಾವಿದು. ದೊಡ್ಡ ಸ್ಟಾರ್‌ ಕಾಸ್ಟ್ ಇದ್ದರೂ ಅದ್ಯಾಕೋ 'ಗೇಮ್ ಚೇಂಜರ್' ಹೈಪ್ ಕ್ರಿಯೇಟ್ ಮಾಡುವಲ್ಲಿ ಸೋತಿತ್ತು.

ರಾಮ್ ಚರಣ್, ಕಿಯಾರಾ ಅಡ್ವಾಣಿ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜರೇ ನಟಿಸಿದರೂ ಫ್ಯಾನ್ಸ್ ಮುಗಿಬಿದ್ದು ಈ ಸಿನಿಮಾ ನೋಡುವ ಮನಸ್ಸು ಮಾಡಿರಲಿಲ್ಲ. ಅಡ್ವಾನ್ಸ್ ಬುಕಿಂಗ್ ಕೂಡ ದಾಖಲೆ ಮಾಡಿಲ್ಲ. ಸಾಲದ್ದಕ್ಕೆ ಮೊದಲ ದಿನವೇ 'ಗೇಮ್ ಚೇಂಜರ್‌'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Ram Charan Shankar film Game Changer Day 1 Karnataka box office report

RRR ಸಿನಿಮಾ ಬಳಿಕ ರಾಮ್‌ ಚರಣ್ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಿತ್ತು. ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡುತ್ತೆ ಅನ್ನೋ ಲೆಕ್ಕಾಚಾರಗಳು ತಲೆಕೆಳಗಾಗುವಂತಿದೆ. ಹಾಗಿದ್ದರೆ, 'ಗೇಮ್ ಚೇಂಜರ್' ಮೊದಲು ದಿನ ಭಾರತದಲ್ಲಿ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಹೇಗಿದೆ ಕಲೆಕ್ಷನ್? ತಿಳಿಯಲು ಮುಂದೆ ಓದಿ.

'ಗೇಮ್ ಚೇಂಜರ್' ಮೊದಲ ದಿನದ ಗಳಿಕೆ

ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಗೇಮ್ ಚೇಂಜರ್' ಕಲೆಕ್ಷನ್ ಉತ್ತಮವಾಗಿದೆ. ಮೊದಲ ಭಾರತದಾದ್ಯಂತ ಸುಮಾರು 51. 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಟ್ರ್ಯಾಕ್ ಮಾಡುವ ಪೋರ್ಟಲ್ ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ರಾಮ್‌ ಚರಣ್ ಕ್ರೇಜ್‌ಗೆ ಇದು ಕಡಿಮೆನೇ ಅಂತ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಯಾವ್ಯಾವ ಭಾಷೆಯಲ್ಲಿ ಹೇಗಿದೆ ರೆಸ್ಪಾನ್ಸ್?

'ಗೇಮ್ ಚೇಂಜರ್' ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲಿ ಈ ಸಿನಿಮಾ ಮ್ಯಾಕ್ಸಿಮಮ್ ಕಲೆಕ್ಷನ್ ಆಗಿದೆ. 42 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಹಿಂದಿ ಬೆಲ್ಟ್‌ನಲ್ಲಿ 7 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಕನ್ನಡ ವರ್ಷನ್ 10 ಲಕ್ಷ ರೂ., ತಮಿಳು 2.1 ಕೋಟಿ ರೂ. ಹಾಗೂ ಮಲಯಾಳಂನಲ್ಲಿ ಕೇವಲ 5 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.

Ram Charan Shankar film Game Changer Day 1 Karnataka box office report

ಕರ್ನಾಟಕದ ಎಷ್ಟು?

ತೆಲುಗು ಸಿನಿಮಾಗಳಿಗೆ ಆಂಧ್ರ ಪ್ರದೇಶ, ತೆಲಂಗಾಣ ಬಿಟ್ಟರೆ ಕರ್ನಾಟಕದಿಂದ ಹೆಚ್ಚು ಹಣ ಹರಿದು ಬರುತ್ತೆ. ಈ ಕಾರಣಕ್ಕೆ ಕರ್ನಾಟಕದ ಕಲೆಕ್ಷನ್ ಕೂಡ ಅವರಿಗೆ ಮುಖ್ಯ ಆಗುತ್ತೆ. ಆದರೆ, 'ಪುಷ್ಪ 2'ನಷ್ಟು ಕಲೆಕ್ಷನ್ ಕರ್ನಾಟಕದಲ್ಲಿ ಆಗಿಲ್ಲ. ಕರ್ನಾಟಕದ ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕಾಚಾರದ ಪ್ರಕಾರ ಮೊದಲ ದಿನ ಕರ್ನಾಟಕದಲ್ಲಿ ಐದೂ ಭಾಷೆಗಳಿಂದ 3.1 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಕನ್ನಡ ವರ್ಷನ್‌ ಇಲ್ಲ ರೆಸ್ಪಾನ್ಸ್

'ಪುಷ್ಪ 2' ಸಿನಿಮಾದ ಕನ್ನಡ ವರ್ಷನ್ ಸುಮಾರು 3 ಕೋಟಿ ರೂಪಾಯಿ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ, ಗೇಮ್‌ ಚೇಂಜರ್‌ಗೆ ಆ ಪ್ರತಿಕ್ರಿಯೆ ಸಿಗುತ್ತಿಲ್ಲ. ಗೇಮ್ ಚೇಂಜರ್ ಅನ್ನು ಕನ್ನಡದಲ್ಲಿ ನೋಡುವ ಸಾಹಸಕ್ಕೆ ಕನ್ನಡಿಗರು ಕೈ ಹಾಕಿಲ್ಲ. ಮೊದಲ ದಿನ ಕೇವಲ 10 ಲಕ್ಷ ರೂ. ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.

Disclaimer: ಈ ಸಿನಿಮಾ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಅನ್ನೋದನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

More from Filmibeat

English summary
Ram Charan, Shankar movie Game Changer Day 1 Karnataka box office report;
Read more about: ram charan shankar box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X