Game Changer Box Office Day 2: 2ನೇ ದಿನಕ್ಕೆ 'ಗೇಮ್ ಚೇಂಜರ್' ಕಥೆ ಮುಗೀತಾ? ಕರ್ನಾಟಕದಲ್ಲೆಷ್ಟು ಕಲೆಕ್ಷನ್'?
RRR ಸಿನಿಮಾದಿಂದ ಸಿಕ್ಕ ಹೆಸರು ರಾಮ್ ಚರಣ್ ಹೊಸ ಸಿನಿಮಾಗೆ ವರ್ಕ್‌ಔಟ್ ಆಗುತ್ತಿಲ್ಲ. ಶಂಕರ್ ನಿರ್ದೇಶಿಸಿದ 'ಗೇಮ್ ಚೇಂಜರ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಹಾಗೆ ಕಾಣಿಸುತ್ತಿಲ್ಲ. ಮೊದಲ ದಿನವೇ ಬಾಕ್ಸಾಫೀಸ್ ವಿಚಾರದಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿದೆ. ಇನ್ನು ಮೊದಲ ದಿನವೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಅದು ಎರಡನೇ ದಿನ ಮೇಲೂ ಪರಿಣಾಮ ಬೀರಿದೆ.
'ಗೇಮ್ ಚೇಂಜರ್' ತೆಲುಗು ಬಾಕ್ಸಾಫೀಸ್‌ನಲ್ಲಿ ಗೇಮ್ ಚೇಂಜ್ ಮಾಡಬಹುದೆಂಬ ನಿರೀಕ್ಷೆಯಿತ್ತು. ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಬಹುದು. ಶಂಕರ್ ಈ ಹಿಂದೆ ನಿರ್ದೇಶಿಸಿದ 'ಇಂಡಿಯನ್', 'ಮುದಲ್‌ವನ್', 'ಶಿವಾಜಿ' ಅಂತ ಸಿನಿಮಾಗಳು ಸೃಷ್ಟಿದ ಕ್ರೇಜ್ ಮತ್ತೆ ಮರುಕಳಿಸುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು.

ಸದ್ಯ ಆ ಲೆಕ್ಕಾಚಾರ ಎಲ್ಲ ತಲೆಕೆಳಗಾಗುವಂತಿದೆ. ರಾಮ್ ಚರಣ್ ಜೊತೆ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿದೆ. ದೊಡ್ಡ ಮಟ್ಟದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಆದರೂ, ಎರಡನೇ ದಿನ ಕಲೆಕ್ಷನ್‌ನಲ್ಲಿ ಶೇ.50ರಷ್ಟು ಡ್ರಾಪ್ ಆಗಿದೆ ಎಂದು ಹೇಳಲಾಗುತ್ತಿದೆ. ಬಾಕ್ಸಾಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್.ಕಾಮ್ ವರದಿ ಏನು ಹೇಳುತ್ತಿದೆ ಅನ್ನೋದನ್ನು ನೋಡುವುದಾರೆ..
2ನೇ ದಿನದ ಕಲೆಕ್ಷನ್ ಎಷ್ಟು?
'ಗೇಮ್ ಚೇಂಜರ್' ಬಾಕ್ಸಾಫೀಸ್ ಕಲೆಕ್ಷನ್‌ಗೆ ಮೊದಲನೇ ದಿನ ಎಫೆಕ್ಟ್ ಎರಡನೇ ದಿನದ ಮೇಲೆ ಬಿದ್ದಿದೆ. ಫಸ್ಟ್ ಡೇ ಫಸ್ಟ್ ಶೋನಲ್ಲಿಯೇ ಸಿನಿಮಾ ನೋಡಿ ಪ್ರೇಕ್ಷಕರು ನಿರಾಸೆಯನ್ನು ವ್ಯಕ್ತಪಡಿಸಿದ್ದರು. ಹೀಗಿದ್ದರೂ ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಆಗಿದ್ದರಿಂದ ಉತ್ತಮ ಗಳಿಕೆ ಮಾಡಿತ್ತು. ಆದರೆ, ಎರಡನೇ ದಿನ ಗಣನೀಯರವಾಗಿ ಕಡಿಮೆ ಆಗಿದೆ. ಸ್ಯಾಕ್ನಿಲ್ಕ್.ಕಾಮ್ ವರದಿ ಪ್ರಕಾರ, 2ನೇ ದಿನ ಭಾರತದಲ್ಲಿ ಈ ಸಿನಿಮಾ 21.5 ಕೋಟಿ ರೂಪಾಯಿ ಕಲೆಕ್ಷನ್ ಅಷ್ಟೇ ಮಾಡಿದೆ.

2 ದಿನದಲ್ಲಿ ₹100 ಕೋಟಿನೂ ದಾಟಿಲ್ಲ
ರಾಮ್ ಚರಣ್‌ಗೆ 'ಗೇಮ್ ಚೇಂಜರ್' ಸಿನಿಮಾ ದೊಡ್ಡ ನಿರಾಸೆ. ಮೊದಲನೇ ದಿನವೇ ₹100 ಕೋಟಿ ಕಲೆಕ್ಷನ್ ಮಾಡುವಂತೆ ಈ ಕಾಲದಲ್ಲಿ ಎರಡು ದಿನವಾದರೂ 100 ಕೋಟಿ ಕ್ಲಬ್ ಸೇರಿಲ್ಲ. ಮೊದಲ ದಿನ ಭಾರತದಲ್ಲಿ 51 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಎರಡನೇ ದಿನ 21.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಎರಡು ದಿನಗಳ ಕಲೆಕ್ಷನ್ 72.5 ಕೋಟಿ ರೂ. ಕಲೆಕ್ಷನ್ ಮಾಡುವುದಕ್ಕೆ ಮಾತ್ರ ಸಾಧ್ಯವಾಗಿದೆ. ಇನ್ನು ವೀಕೆಂಡ್‌ನಲ್ಲಿ ಕೆಲಕ್ಷನ್ ಹೇಗಿರುತ್ತೆ ಅನ್ನೋದು ನೋಡಬೇಕಿದೆ.
ಕರ್ನಾಟಕದ ಪರಿಸ್ಥಿತಿ ಏನು?
ಇನ್ನು 'ಗೇಮ್ ಚೇಂಜರ್' ಕರ್ನಾಟಕದಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲನೇ ದಿನ ಈ ಸಿನಿಮಾ ಕರ್ನಾಟಕದಾದ್ಯಂತ 3.1 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ಕೇವಲ 1.3 ರಿಂದ 1.5 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಆಗಿರಬಹುದೆಂದು ವಿತರಕರ ವಲಯ ಅಂದಾಜಿಸಿದೆ. ತೆಲುಗು ಸಿನಿಮಾ ಸೆಂಟರ್‌ನಲ್ಲೇ ರೆಸ್ಪಾನ್ಸ್ ಡಲ್ ಇದೆ. ಊರ್ವಶಿ ಅಂತಹ ಚಿತ್ರಮಂದಿರಲ್ಲಿ ಎರಡು ದಿನದ ಕಲೆಕ್ಷನ್ 6.72 ಲಕ್ಷ ರೂಪಾಯಿ ಅಷ್ಟೇ.
ಡಾಕು ಮಹಾರಾಜ್ ಎಂಟ್ರಿ
ಇನ್ನು ಇಂದಿನಿಂದ ಬಾಲಕೃಷ್ಣ ಸಿನಿಮಾ 'ಡಾಲು ಮಹಾರಾಜ್' ಥಿಯೇಟರ್‌ಗಳಿಗೆ ಎಂಟ್ರಿ ಆಗಿದೆ. ಬಾಲಕೃಷ್ಣ ನಟಿಸಿದ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕರೆ, 'ಗೇಮ್ ಚೇಂಜರ್'ಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಯಿದೆ. ಡಾಕೂ ಮಹಾರಾಜ್ ಬಳಿಕ ವಿಕ್ಟರಿ ವೆಂಕಟೇಶ್ ನಟನೆಯ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾ' ಬಿಡುಗಡೆಯಾಗಲಿದೆ. ಹೀಗಾಗಿ 'ಗೇಮ್ ಚೇಂಜರ್' ಗೇಮ್ ಮುಗಿದ ಹಾಗೆ ಎಂದು ಸಿನಿಮಾ ಮಂದಿಯಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











