ರಾಮ್ ಚರಣ್, ಶಂಕರ್ 'ಗೇಮ್ ಚೇಂಜರ್' ಸಿನಿಮಾನಾ ಕೇಳೋರಿಲ್ಲ; ಅಡ್ವಾನ್ಸ್ ಬುಕಿಂಗ್‌ಗೆ ಕ್ರೇಜ್ ಇಲ್ಲ
ಅಲ್ಲು ಅರ್ಜುನ್ 'ಪುಷ್ಪ 2' ಬಳಿಕ ರಾಮ್ ಚರಣ್ ಅಖಾಡಕ್ಕೆ ಇಳಿಯುವುದಕ್ಕೆ ರೆಡಿಯಾಗಿದ್ದಾರೆ. RRR ಸಿನಿಮಾ ಬಳಿಕ ಗ್ಲೋಬಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ರಿಲೀಸ್‌ಗೆ ರೆಡಿಯಾಗಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶನದ ಸಿನಿಮಾ ಅಂದರೆ ಅದರ ಕ್ರೇಜ್ ಬೇರೆನೇ ಇದೆ. ಈ ಸಿನಿಮಾ ಯಾಕೋ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಾಕುವಲ್ಲಿ ವಿಫಲವಾಗಿದೆ.
ತೆಲುಗು ಸಿನಿಮಾಗಳಿಗೆ ಅಮೆರಿಕ ಬಿಗ್ ಮಾರ್ಕೆಟ್. ತೆಲುಗು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಮೊದಲು ಅಲ್ಲಿ ಪ್ರೀಮಿಯರ್ ಆಗುತ್ತವೆ. ಅಮೆರಿಕದಲ್ಲಿ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ ಅಂತಾದರೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ನಂಬಿಕೆ. ಅದರಲ್ಲೂ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗುವ ತೆಲುಗು ಸಿನಿಮಾಗಳು ಬ್ಲಾಕ್ ಬಸ್ಟರ್ ಲಿಸ್ಟ್ ಸೇರುತ್ತವೆ.

ರಾಮ್ ಚರಣ್ ಹಾಗೂ ಶಂಕರ್ ನಟಿಸುತ್ತಿರುವ ಬ್ಲಾಕ್ ಬಸ್ಟರ್ ಸಿನಿಮಾ 'ಗೇಮ್ ಚೇಂಜರ್' ಸಿನಿಮಾಗೆ ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಆದರೆ, ಪೇಯ್ಡ್ ಪ್ರೀಮಿಯರ್‌ಗೆ ಮೊದಲ 48 ಗಂಟೆಗಳಲ್ಲಿ ಪ್ರತಿಕ್ರಿಯೆ ಕೆಟ್ಟದಾಗಿದ ಎಂದು ವರದಿಯಾಗಿದೆ. ರಾಮ್ ಚರಣ್ ಸಿನಿಮಾಗೆ ಅಮೆರಿಕದಲ್ಲಿರುವ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶನದ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಕ್ರೇಜ್ ಹುಟ್ಟಾಕುತ್ತಿದ್ದವು. ಆದರೆ, 'ಗೇಮ್ ಚೇಂಜರ್' ಸಿನಿಮಾ ಆ ಬಜ್ ಕ್ರಿಯೇಟ್ ಮಾಡುವಲ್ಲಿ ಸೋತಿದೆ. ಪೇಯ್ಡ್ ಪ್ರೀಮಿಯರ್‌ಗೆ ಮೊದಲ 48 ಗಂಟೆಗಳಲ್ಲಿ ಕೇವಲ 1315 ಟಿಕೆಟ್‌ಗಳು ಮಾತ್ರ ಸೇಲ್ ಆಗಿತ್ತು ಅಂತ ಕೊಯ್‌ಮೊಯ್ ವರದಿ ಮಾಡಿದೆ. ಹಾಗೇ ಮೇಲ್ನೋಟಕ್ಕೆ ಭಾರತದಲ್ಲೂ ಈ ಸಿನಿಮಾ ದೊಡ್ಡ ಕ್ರೇಜ್ ಏನೂ ಕಾಣಿಸುತ್ತಿಲ್ಲ.

ರಾಮ್ ಚರಣ್ ಹಾಗೂ ಶಂಕರ್ ಇಬ್ಬರೂ ಭಾರತಿಯ ಚಿತ್ರರಂಗದ ಬಿಗ್ ಬ್ರ್ಯಾಂಡ್‌ಗಳು. RRR ಸಿನಿಮಾದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ರಾಮ್ ಚರಣ್ ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಸಿನಿಮಾಗಳ ಸರದಾರ ಶಂಕರ್ ಇನ್ನೊಂದು ಕಡೆ. ಇಬ್ಬರೂ ಜೊತೆಯಾಗಿ ಸೇರಿದರೂ ಕ್ರೇಜ್ ಕ್ರಿಯೇಟ್ ಮಾಡುವಲ್ಲಿ ಸೋತಿದ್ದಾರೆ.
ಇತ್ತೀಚೆಗೆ ಶಂಕರ್ ಸಿನಿಮಾಗಳು ಯಾಕೋ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಕಳೆದ ವರ್ಷ ರಿಲೀಸ್ ಆದ 'ಇಂಡಿಯನ್ 2' ಶಂಕರ್ ಕರಿಯರ್‌ನ ಬಿಗ್ ಫ್ಲಾಪ್ ಅಂತ ಸಾಬೀತಾಗಿತ್ತು. ಈ ಬೆನ್ನಲ್ಲೇ ರಾಮ್ ಚರಣ್ ಜೊತೆ 'ಗೇಮ್ ಚೇಂಜರ್' ಸಿನಿಮಾಗೆ ಕೈ ಹಾಕಿದ್ದರು. ಆದರೆ, ಈ ಸಿನಿಮಾಗೆ ಆರಂಭದಲ್ಲಿ ಪ್ರೇಕ್ಷಕರು ಯಾಕೋ ಆಸಕ್ತಿ ತೋರಿಸುತ್ತಿಲ್ಲ. ಅಡ್ವಾನ್ಸ್ ಬುಕಿಂಗ್‌ನಲ್ಲಿ ರಾಮ್ ಚರಣ್ ಅಭಿಮಾನಿಗಳು ದಾಖಲೆಯನ್ನು ಸೃಷ್ಟಿಸಿಬಿಡುತ್ತಿದ್ದರು. ಆದರೆ, ಈಗ ಟಿಕೆಟ್ ಖರೀದಿಗೆ ಯಾಕೋ ಹಿಂದೇಟು ಹಾಕುತ್ತಿದ್ದಾರೆ ಎನಿಸುತ್ತದೆ.
ಇನ್ನೊಂದು ಕಡೆ 'ಪುಷ್ಪ 2 ಎದುರು ರಾಮ್ ಚರಣ್ 'ಗೇಮ್ ಚೇಂಜರ್' ಗೆಲ್ಲಬೇಕಿದೆ. ಈಗಾಗಲೇ ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಒಂದ್ಕಡೆ ಟಿಕೆಟ್ ಖರೀದಿಗೆ ಸಿಗುತ್ತಿರುವ ರೆಸ್ಪಾನ್ಸ್. ಇನ್ನೊಂದು ಕಡೆ ಫ್ಯಾನ್ಸ್ ವಾರ್‌ನಿಂದ 'ಗೇಮ್ ಚೇಂಜರ್' ಎಲ್ಲಿ ಬಾಕ್ಸಾಫೀಸ್‌ನಲ್ಲಿ ಸಪ್ಪೆಯಾಗುತ್ತೋ ಅನ್ನುವ ಆತಂಕ ನಿರ್ಮಾಪಕರಿಗೆ ಶುರುವಾಗಿದ್ದಂತೂ ನಿಜ. ಸಿನಿಮಾ ಬಿಡುಗಡೆಗೆ ಇನ್ನೂ ಸಮಯವಿರುವುದರಿಂದ ಅಡ್ವಾನ್ಸ್ ಬುಕಿಂಗ್ ಮುಂದಿನ ದಿನಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ. ಹಾಗೇ ಬಾಕ್ಸಾಫೀಸ್ ದಾಖಲೆ ಮಾಡುತ್ತಾ ಅಂತಾನೂ ಎದುರು ನೋಡುತ್ತಿದ್ದಾರೆ.


Click it and Unblock the Notifications











