ರಾಮ್ ಚರಣ್ 'ಪೆದ್ದಿ' ರಿಲೀಸ್ 2 ಬಾರಿ ಪೋಸ್ಟ್‌ಪೋನ್; 'ಟಾಕ್ಸಿಕ್' ಹಿಂದೆ ಬಿದ್ದಿತೇ ಮೆಗಾ ಸಿನಿಮಾ?

ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ಪೋಸ್ಟ್‌ಪೋನ್ ಆಗುತ್ತಿವೆ. ಇದಕ್ಕೆ ಅಸಲಿ ಕಾರಣ ಏನು ಅನ್ನೋದನ್ನು ಹುಡುಕುವುದಕ್ಕೆ ನಿನಿಮಾ ಮಂದಿ ಪ್ರಯತ್ನ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್‌ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ ಅನ್ನು ಪೋಸ್ಟ್‌ಪೋನ್ ಮಾಡಲಾಗಿದೆ.

ಇದರ ಬೆನ್ನಲೇ ರಾಮ್ ಚರಣ್ ಸಿನಿಮಾ 'ಪೆದ್ದಿ' ಕೂಡ ರಿಲೀಸ್ ಆಗುತ್ತಿದೆ. ಹಾಗಂತ ಇದು ಮೊದಲ ಬಾರಿಯೇನು ಅಲ್ಲ. ಈಗ ಎರಡನೇ ಬಾರಿ ಪೋಸ್ಟ್‌ಪೋನ್ ಆಗಿದೆ. 'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಅವರ ಶಿಷ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಮ್ ಚರಣ್ ಹಾಗೂ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ ಸಿನಿಮಾ ಟಾಲಿವುಡ್‌ನಲ್ಲಿ ಈ ಕಾರಣಕ್ಕೆ ಕುತೂಹಲವನ್ನು ಕೆರಳಿಸಿದೆ.

Ram Charan starrer Peddi movie release postponed to June official confirmation

'ಪೆದ್ದಿ' ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸನಾ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಸಿನಿಮಾ. ಉತ್ತರ ಆಂಧ್ರದ ಗ್ರಾಮೀಣ ಕ್ರೀಡೆಗಳ ಹಿನ್ನೆಲೆಯನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ರಗಡ್ ಮಾಸ್ ಲುಕ್‌‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ಗ್ಲಿಂಪ್ಸ್, ಭಾರಿ ಆಕ್ಷನ್, ಭಾವನಾತ್ಮಕ ದೃಶ್ಯಗಳು ಹಾಗೂ ಹಾಡುಗಳು 'ಪೆದ್ದಿ'ಯನ್ನು ಎಂಟರ್‌ಟೈನಿಂಗ್ ಸಿನಿಮಾ ಮಾಡಲಿವೆ ಎಂದು ಭವಿಷ್ಯ ನುಡಿಯಾಗುತ್ತಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 'ಪೆದ್ದಿ' ಸಿನಿಮಾ ಇದೇ ಏಪ್ರಿಲ್ 30ಕ್ಕೆ ರಿಲೀಸ್ ಆಗಬೇಕಿತ್ತು. ಹೀಗಾಗಿ ರಾಮ್ ಚರಣ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಸಿನಿಮಾ ನೋಡುವ ಖುಷಿಯಲ್ಲಿದ್ದ ಅಭಿಮಾನಿಗಳಿಗೆ 'ಪೆದ್ದಿ' ಚಿತ್ರತಂಡದಿಂದ ನಿರಾಸೆಯ ಸುದ್ದಿಯೊಂದು ಸಿಕ್ಕಿದೆ. ಮೊದಲು ಮಾರ್ಚ್ 27 (ರಾಮ್ ಚರಣ್ ಹುಟ್ಟುಹಬ್ಬ)ದಂದು ರಿಲೀಸ್ ಎಂದು ಹೇಳಲಾಗಿತ್ತು. ಶೂಟಿಂಗ್ ತಡವಾಗಿದ್ದರಿಂದ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡಲು ಮುಂದಾಗಿತ್ತು.

ಈಗ ಎರಡೂ ದಿನಾಂಕಗಳಲ್ಲಿ ರಿಲೀಸ್ ಮಾಡುವುದಕ್ಕೆ 'ಪೆದ್ದಿ' ತಂಡಕ್ಕೆ ಸಾಧ್ಯವಾಗಿಲ್ಲ. ಏಪ್ರಿಲ್ 30ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಮತ್ತೆ ಮುಂದೂಡಲ್ಪಟ್ಟಿದೆ. ವೃದ್ಧಿ ಸಿನಿಮಾಸ್, 'ಪೆದ್ದಿ' ಮುಂದೂಡಿಕೆಗೆ ಕಾರಣಗಳನ್ನು ತಿಳಿಸಿದೆ. ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ಬಂದ ಪ್ರತಿಕ್ರಿಯೆಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಸಿನಿಮಾದ ಟಾಕಿ ಭಾಗ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಸಿನಿಮಾ ಫೈನಲ್ ಔಟ್‌ಪುಲ್ ನೋಡಿ ನಿರ್ಮಾಪಕರು ತೃಪ್ತಿ ಹೊಂದಿದ್ದಾರೆ ಎಂದು ಪ್ರಕರಣೆಯಲ್ಲಿ ತಿಳಿಸಲಾಘಿದೆ.

Ram Charan starrer Peddi movie release postponed to June official confirmation

ಸಿನಿಮಾದ ಕಂಟೆಂಟ್ ಅನ್ನು ಎಫೆಕ್ಟಿವ್ ಆಗಿ ಪ್ರೇಕ್ಷಕರಿಗೆ ತಲುಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ತಂತ್ರಜ್ಞರು ಮತ್ತು ಪೋಸ್ಟ್-ಪ್ರೊಡಕ್ಷನ್ ತಂಡಕ್ಕೆ ಉತ್ತಮ ಕೆಲಸಕ್ಕೆ ಸಾಕಷ್ಟು ಸಮಯ ನೀಡುವುದು ಅಗತ್ಯವಿದೆ ಎಂದು ನಿರ್ಮಾಪಕರು ಸಮಧಾನ ಹೊರ ಪಡಿಸಿದ್ದಾರೆ. "ಉತ್ತಮ ಚಿತ್ರಮಂದಿರದ ಅನುಭವ ನೀಡುವುದು ನಮ್ಮ ಜವಾಬ್ದಾರಿ" ಎಂದಿರುವ ನಿರ್ಮಾಪಕರು, ಹೊಸ ರಿಲೀಸ್ ಡೇಟ್ ಅನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

'ಪೆದ್ದಿ' ಸಿನಿಮಾ ಮುಂದೂಡಿಕೆ ಅಭಿಮಾನಿಗಳಲ್ಲಿ ನಿರಾಶೆ ಉಂಟುಮಾಡಿದರೂ, ಗುಣಮಟ್ಟಕ್ಕಾಗಿ ತೆಗೆದುಕೊಂಡ ಈ ನಿರ್ಧಾರವನ್ನು ಹಲವರು ಒಪ್ಪಿಕೊಂಡಿದ್ದಾರೆ. ಜೂನ್‌ನಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಚರ್ಚೆಗಳಿದ್ದು, ಅಂದೇ ಇತರೆ ದೊಡ್ಡ ಚಿತ್ರಗಳೊಂದಿಗೆ ಪೈಪೋಟಿ ಸಾಧ್ಯತೆಗಳ ಬಗ್ಗೆ ಪ್ರಶ್ನೆ ಮೂಡಿದೆ. ನಿರ್ಮಾಪಕರು ಇನ್ನೂ ಖಚಿತ ದಿನಾಂಕ ಪ್ರಕಟಿಸಿಲ್ಲ, ಊಹಾಪೋಹಗಳು ಮುಂದುವರಿದಿವೆ.

'ಪೆದ್ದಿ' 1980ರ ದಶಕದ ಗ್ರಾಮೀಣ ಆಂಧ್ರ ಪ್ರದೇಶದ ಕಥೆಯನ್ನು ತೆಗೆದುಕೊಳ್ಳಲಾಗಿದೆ. ಇದೊಂದು ಕಂಪ್ಲೀಟ್ ಕ್ರೀಡಾ ಆಕ್ಷನ್ ಡ್ರಾಮಾ. ರಾಮ್ ಚರಣ್ 'ಪೆದ್ದಿ ಪಹಲ್ವಾನ್' ಪಾತ್ರಕ್ಕಾಗಿ ಉತ್ತರ ಆಂಧ್ರದ ತೆಲುಗಿನ ಭಾಷಾ ಶೈಲಿಯನ್ನು ಕಲಿತಿದ್ದಾರೆ. ನಾಯಕಿ ಜಾನ್ವಿ ಕಪೂರ್ 'ಅಚ್ಚಿಯಮ್ಮ' ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಸಾಯಿ ಕುಮಾರ್ ರಂತಹ ಪ್ರಮುಖರು ಪೋಷಕ ಪಾತ್ರಗಳಲ್ಲಿ ನಡಿಸಿದ್ದಾರೆ. ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ಈ ಭಾರಿ ಪ್ರಾಜೆಕ್ಟ್ ನಿರ್ಮಿಸುತ್ತಿವೆ. ಮುಂದೂಡಲ್ಪಟ್ಟರೂ, ಅಂತಿಮ ಔಟ್‌ಪುಟ್ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಗುಣಮಟ್ಟಕ್ಕಾಗಿ ತೆಗೆದುಕೊಂಡ ಈ ನಿರ್ಧಾರ ಜೂನ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಫಲ ನೀಡುತ್ತದೆಂಬುದು ಕಾದು ನೋಡಬೇಕಿದೆ.

English summary
Ram Charan starrer Peddi movie release postponed to June official confirmation.
Read more about: ram charan telugu movie tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X