ಮಹೇಶ್ ಬಾಬು ಸಿನಿಮಾದಲ್ಲಿ ರಾಮ್ ಚರಣ್?: ಟಾಲಿವುಡ್‌ನಿಂದ ಹೊರಬಂದ ಹೊಸ ಸುದ್ದಿ

ಚಿರಂಜೀವಿ ನಟನೆಯ 'ಆಚಾರ್ಯ' ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್ ಟಾಲಿವುಡ್‌ನಲ್ಲಿ ಹರಿದಾಡಿತ್ತು. ಆದರೆ ಆ ಪಾತ್ರಕ್ಕೆ ಚಿರಂಜೀವಿ ಮಗ ರಾಮ್ ಚರಣ್ ಅವರೇ ಬರುತ್ತಾರೆ ಎಂದು ಹೇಳಲಾಯಿತು. ನಿರ್ದೇಶಕ ಕೊರತಲಾ ಶಿವ ಕೂಡ 'ಆಚಾರ್ಯ'ದಲ್ಲಿ ಮಹೇಶ್ ಬಾಬು ಭಾಗಿಯಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

Recommended Video

ಪೊಲೀಸ್ ಇಲಾಖೆಗೆ ಕನ್ನಡ ಚಿತ್ರರಂಗ ಸಲ್ಲಿಸಿದ ವಿಶೇಷ ಸಲಾಂ | SV Production | Sai Kumar

ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ಖಚಿತವಾಗಿದೆ. ಆದರೆ ಟಾಲಿವುಡ್‌ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇದು ರಾಮ್ ಚರಣ್ ಮತ್ತು ಮಹೇಶ್ ಬಾಬು ಅವರ ಕುರಿತಾದ ಕುತೂಹಲಕಾರಿ ರೂಮರ್. ಮುಂದೆ ಓದಿ...

ಮಹೇಶ್ ಬಾಬು ಬ್ಯಾನರ್‌ನಲ್ಲಿ ಚರಣ್

ಮಹೇಶ್ ಬಾಬು ಬ್ಯಾನರ್‌ನಲ್ಲಿ ಚರಣ್

ಮೂಲಗಳ ಪ್ರಕಾರ, ಮಹೇಶ್ ಬಾಬು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರದಲ್ಲಿ ರಾಮ್ ಚರಣ್ ನಾಯಕರಾಗಿ ನಟಿಸಲಿದ್ದಾರೆ. ನಿರ್ದೇಶಕ ವಂಶಿ ಪೈದಿಪಳ್ಳಿ ಕಥೆಯೊಂದನ್ನು ಮಹೇಶ್ ಬಾಬು ಅವರಿಗೆ ವಿವರಿಸಿದ್ದಾರೆ. ಇದನ್ನು ಅವರು ಇಷ್ಟಪಟ್ಟಿದ್ದಾರೆ ಕೂಡ. ಆದರೆ ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪರಶುರಾಮ್ ಜತೆ ಮಹೇಶ್ ಬಾಬು ಸಿನಿಮಾ

ಪರಶುರಾಮ್ ಜತೆ ಮಹೇಶ್ ಬಾಬು ಸಿನಿಮಾ

ಮಹೇಶ್ ಬಾಬು 'ಗೀತಾ ಗೋವಿಂದಂ' ಚಿತ್ರದ ನಿರ್ದೇಶಕ ಪರಶುರಾಮ್ ಜತೆಗೆ ಹೊಸ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ವಂಶಿ ಅವರ ಕಥೆಯೊಂದಿಗೆ ರಾಮ್ ಚರಣ್ ಅವರನ್ನು ಸಂಪರ್ಕಿಸಿದ್ದಾರೆ.

ಕಥೆ ಮೆಚ್ಚಿಕೊಂಡ ರಾಮ್ ಚರಣ್

ಕಥೆ ಮೆಚ್ಚಿಕೊಂಡ ರಾಮ್ ಚರಣ್

ಸ್ಕ್ರಿಪ್ಟ್ ಓದಿ ಮೆಚ್ಚಿಕೊಂಡ ರಾಮ್ ಚರಣ್, ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರಂತೆ. ಈ ಚಿತ್ರದಲ್ಲಿ ಮಹೇಶ್ ಬಾಬು ನಟಿಸದೆ ಇದ್ದರೂ ತಾವೇ ನಿರ್ಮಾಣ ಮಾಡುವುದಾಗಿ ನಿರ್ದೇಶಕರಿಗೆ ಭರವಸೆ ನೀಡಿದ್ದಾರಂತೆ. ಅದಕ್ಕೆ ರಾಮ್ ಚರಣ್ ಹೆಸರನ್ನು ಅವರೇ ಸೂಚಿಸಿದ್ದಾರೆ ಎನ್ನಲಾಗಿದೆ.

ಮೂವರ ಕಾಂಬಿನೇಷನ್

ಮೂವರ ಕಾಂಬಿನೇಷನ್

ರಾಮ್ ಚರಣ್ ಮತ್ತು ವಂಶಿ ಈ ಹಿಂದೆ 'ಯೆವಡು' ಚಿತ್ರದಲ್ಲಿ ಜತೆಯಾಗಿದ್ದರು. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಹಾಗೆಯೇ ರಾಮ್ ಚರಣ್ ಹಾಗೂ ಮಹೇಶ್ ಬಾಬು ಗೆಳೆತನವೂ ಚೆನ್ನಾಗಿದೆ. ಹೀಗಾಗಿ ಈ ಮೂವರೂ ಸೇರಿ ಸಿನಿಮಾ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬರಬೇಕಿದೆ.

More from Filmibeat

English summary
Rumours says Ram Charan to act in Mahesh Babu's banner movie directed by Vamshi Paidipally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X