ಯೂಟ್ಯೂಬ್‌ನಲ್ಲೂ ದಾಖಲೆ ಬರೆದ ರಾಮ್‌ ಚರಣ್–ಉಪಾಸನಾ: ಆಸ್ಕರ್ ವಿಡಿಯೋಗೆ ಸಿಕ್ಕಿದ್ದೆಷ್ಟು?

ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್ ಈಗ ಗ್ಲೋಬಲ್ ಸ್ಟಾರ್. RRR ಸಿನಿಮಾ ರಿಲೀಸ್ ಆದಲ್ಲಿಂದ ರಾಮ್‌ ಚರಣ್ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಆಸ್ಕರ್ ರೇಸ್‌ನಲ್ಲಿ "ನಾಟು ನಾಟು" ಹಾಡಿನ ಪ್ರಚಾರಕ್ಕಾಗಿ ರಾಮ್‌ಚರಣ್ ಅಮೆರಿಕದ ಪ್ರಮುಖ ಶೋಗಳಲ್ಲಿ ಭಾಗವಹಿಸಿದ್ದರು.

ಅಲ್ಲಿಂದ ರಾಮ್‌ ಚರಣ್‌ ಬಗ್ಗೆ ಅಮೆರಿಕದಲ್ಲೂ ಕ್ರೇಜ್ ಹೆಚ್ಚಾಗಿದೆ. RRR ಬಳಿಕ ರಾಮ್‌ ಚರಣ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ರಾಮ್ ಚರಣ್ ಆಕ್ಟಿಂಗ್‌, ಮ್ಯಾನರಿಸಂ ಎಲ್ಲವೂ ವಿದೇಶಿಗರಿಗೂ ಇಷ್ಟ ಆಗಿದೆ. ಹೀಗಾಗಿ ವಿದೇಶದಲ್ಲೂ ರಾಮ್ ಚರಣ್ ಫೇಮಸ್. ಇದಕ್ಕೆ ಸಾಕ್ಷಿನೇ ಆಸ್ಕರ್ ವೇಳೆ ರಾಮ್ ಚರಣ್ ಹಾಗೂ ಉಪಾಸನಾಗೆ ವಿಡಿಯೋಗೆ ಸಿಕ್ಕ ರೆಸ್ಪಾನ್ಸ್.

Ram Charan Upasana Oscars Video in Vanity Fair You Tube Channel has record breaking views

ಆಸ್ಕರ್ ಅಂಗಳದಲ್ಲಿ ರಾಮ್ ಹಾಗೂ ಪತ್ನಿ ಉಪಾಸನಾ ನಡೆದುಕೊಂಡ ರೀತಿ, ಡ್ರೆಸ್ಟಿಂಗ್ ಸ್ಟೈಲ್ ನೋಡುಗರ ಗಮನ ಸೆಳೆದಿತ್ತು. ಈ ಜೋಡಿಯ ಭಾರತೀಯ ಸಂಸ್ಕೃತಿ ಉಡುಗೆಯಲ್ಲಿ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಕಾಲಿಟ್ಟಿತ್ತು. ಅದೇ ವಿಡಿಯೋ ಈಗ ಬೇಜಾನ್ ಸದ್ದು ಮಾಡುತ್ತಿದೆ.

ವಿದೇಶಿ ನೆಲದಲ್ಲಿ ಉಪಾಸನಾ ಸೀರೆಯುಟ್ಟ ಕಂಗೊಳಿಸಿದ್ದರು. ರಾಜಮೌಳಿ ಪತ್ನಿ ರಾಮಾ ಕೂಡ ಸೀರೆ ಉಟ್ಟು ಮಿಂಚಿದ್ದರು. ಪ್ರತಿಷ್ಠಿತ ಆಸ್ಕರ್ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ರಾಮ್ ಚರಣ್ ಹಾಗೂ ಉಪಾಸನಾ ಜೋಡಿ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದರು. ಅದೇ ವಿಡಿಯೋವನ್ನು ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿತ್ತು.

ವ್ಯಾನಿಟಿ ಫೇರ್ ಯೂಟ್ಯೂಬ್‌ನಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಆಸ್ಕರ್‌ ಸಮಾರಂಭಕ್ಕೆ ತೆರಳುವುದಕ್ಕೂ ಮುನ್ನ ಹೇಗೆ ತಯಾರಾದರು? ಕಾಸ್ಟ್ಯೂಮ್‌ಗಳನ್ನು ಹೇಗೆ ಆಯ್ಕೆ ಮಾಡಿಕೊಂಡರು? ರಾಮ್ ಚರಣ್ ಬಟ್ಟೆಗಳನ್ನು ತಯಾರಿಸಿದ್ದು ಹೇಗೆ? ಬಟ್ಟೆಯ ಗುಣಮಟ್ಟ, ಅದರ ವಿನ್ಯಾಸದಿಂದ ಹಿಡಿದು ರೆಡಿಯಾಗಿ ದೇವರಿಗೆ ನಮಸ್ಕರಿಸುವ ಪದ್ದತಿ ಎಲ್ಲವನ್ನೂ ವಿಡಿಯೋದಲ್ಲಿ ತೋರಿಸಲಾಗಿತ್ತು.

Ram Charan Upasana Oscars Video in Vanity Fair You Tube Channel has record breaking views

ರಾಮ್ ಚರಣ್ ಹಾಗೂ ಉಪಾಸನಾ ಅವರ ಇದೇ ವಿಡಿಯೋ ವ್ಯಾನಿಟಿ ಫೇರ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿತ್ತು. ಈ ವಿಡಿಯೋಗೆ 6.5 ಮಿಲಿಯನ್ಸ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಈ ಯೂಟ್ಯೂಬ್ ಚಾನೆಲ್‌ನಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ವಿಡಿಯೋನೇ ಅತಿ ಹೆಚ್ಚು ವೀವ್ಸ್ ಪಡೆದಿದೆ ಅನ್ನೋದೇ ವಿಶೇಷ.

ಆಸ್ಕರ್ ಸಮಾರಂಭದಲ್ಲಿ ರಾಮ್ ಚರಣ್ ಕಪ್ಪು ಬಣ್ಣದ ಉಡುಗೆ ತೊಟ್ಟು ಮಿಂಚಿದ್ದರು. ಉಪಾಸನಾ ಬಿಳಿ ಬಣ್ಣದ ಸಿಲ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ವಿದೇಶಿ ನೆಲದಲ್ಲಿ ಈ ಜೋಡಿ ದೇಶಿ ಸಂಸ್ಕೃತಿಯನ್ನು ಪಸರಿಸಿದ್ದರು. ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ರಾಮ್ ಚರಣ್-ಉಪಾಸನಾ ದಂಪತಿಯ ಆಸ್ಕರ್ ವಿಡಿಯೋ ದಾಖಲೆ ಬರೆದಿದೆ. ಈ ವಿಡಿಯೋ ರಾಮ್ ಚರಣ್ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಬಹುದು. ಕಲೆ ಕಲಾವಿದನಿಗೆ ಯಾವುದೇ ಬೌಂಡರಿ ಇರೋದಿಲ್ಲ. ಒಬ್ಬ ಕಲಾವಿದನ ಕಲೆ ಆತ ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗಬಹುದು ಎಂಬುದಕ್ಕೆ ಈ ವಿಡಿಯೋ ತಾಜ ಉದಾಹರಣೆ.

More from Filmibeat

English summary
Ram Charan Upasana Oscars Video in Vanity Fair Youtube Channel has record breaking views, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X