"ನಿಮ್ಮ ಹೀರೋಗೆ ಸಿಂಗಲ್ ಆಗಿ ಬರುವ ಸಾಮರ್ಥ್ಯ ಇಲ್ಲ"; ಎನ್‌ಟಿಆರ್ ಫ್ಯಾನ್ಸ್ ಕಾಡಿದ ರಾಮ್ ಚರಣ್ ಫ್ಯಾನ್ಸ್
ಟಾಲಿವುಡ್‌ನಲ್ಲಿ 'ದೇವರ' ಸಿನಿಮಾ ಜ್ವರ ಜೋರಾಗಿದೆ. ತೆಲುಗಿನ ಎರಡೂ ರಾಜ್ಯಗಳಲ್ಲೂ ಎಲ್ಲಿ ನೋಡಿದರೂ 'ದೇವರ' ಸಿನಿಮಾ ಬಗ್ಗೆ ಟಾಕ್ ಶುರುವಾಗಿದೆ. ಈ ಮಧ್ಯೆ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳ ಮಧ್ಯೆ ವಾರ್ ಶುರುವಾಗಿದೆ. ಇಂತಹ ಸನ್ನಿವೇಶದಲ್ಲೇ ರಾಮ್ ಚರಣ್ ಎಕ್ಸ್ (ಟ್ವೀಟ್) ಪೋಸ್ಟ್ ಸಂಚಲನ ಸೃಷ್ಟಿಸಿದೆ.
ಫ್ಯಾನ್ಸ್ ವಾರ್ ಅನ್ನೋದು ದಕ್ಷಿಣ ಭಾರತದಲ್ಲಿ ಹೊಸತೇನು ಅಲ್ಲ. ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಈ ಫ್ಯಾನ್ಸ್ ವಾರ್ ಅನ್ನೋದು ಇದ್ದೇ ಇರುತ್ತೆ. ಇಬ್ಬರೂ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಿತ್ತಾಡುತ್ತಲೇ ಇರುತ್ತಾರೆ. ಇದನ್ನು ಎಲ್ಲಾ ಚಿತ್ರರಂಗದಲ್ಲೂ ನೋಡಬಹುದು.

ನಾಳೆ (ಸೆಪ್ಟೆಂಬರ್ 27) ಜೂ.ಎನ್‌ಟಿಆರ್ ಸಿನಿಮಾ 'ದೇವರ' ಬಿಡುಗಡೆಯಾಗುತ್ತಿದೆ. ಈ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ರಾಮ್ ಚರಣ್ ಅಭಿಮಾನಿಗಳಿಗೂ, ಜೂ.ಎನ್‌ಟಿಆರ್ ಅಭಿಮಾನಿಗಳಿಗೂ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ಶುರುವಾಗಿತ್ತು. ಒಮ್ಮೆ ಜೂ.ಎನ್‌ಟಿಆರ್ ಅನ್ನು ರಾಮ್ ಚರಣ್ ಕೆಣಕಿದರೆ, ಇನ್ನೊಂದು ಕಡೆ ರಾಮ್ ಚರಣ್ ಅನ್ನು ಜೂ.ಎನ್‌ಟಿಆರ್ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಇದೇ ವೇಳೆ ರಾಮ್ ಚರಣ್ ಮಾಡಿದ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಜೂ. ಎನ್‌ಟಿಆರ್ ಆರು ವರ್ಷಗಳ ಬಳಿಕ ಸೋಲೋ ನಾಯಕನಾಗಿ ನಟಿಸಿದ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಜೂ.ಎನ್‌ಟಿಆರ್ ಅಭಿಮಾನಿಗಳು ಈ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಈ ಸಿನಿಮಾವನ್ನು ನೋಡಲೇಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ. 'ದೇವರ' ಸಿನಿಮಾ ಗ್ಲಿಂಪ್ಸ್, ಟೀಸರ್, ಟ್ರೈಲರ್‌ಗಳು ಕೂಡ ಕಿಕ್ ಕೊಟ್ಟಿದೆ.
ಕೆಲವು ದಿನಗಳಿಂದ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ಶುರುವಾಗಿದೆ. ಇಬ್ಬರೂ ಹೀರೋಗಳ ಅಭಿಮಾನಿಗಳು ನಮ್ಮ ಹೀರೋ ಗ್ರೇಟ್ ಅಂತ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ. ಈ ಫ್ಯಾನ್ಸ್ ವಾರ್ ಇದೇ ಮೊದಲೇನಲ್ಲ ಈ ಹಿಂದೆ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಿಡುಗಡೆ ವೇಳೆನೂ ಹೀಗೆ ಕಿತ್ತಾಡಿದ್ದರು. ಈಗ ಮತ್ತೆ 'ದೇವರ' ಸಿನಿಮಾ ವೇಳೆನೂ ಅದೇ ಫ್ಯಾನ್ಸ್ ವಾರ್ ಶುರುವಾಗಿದೆ.
ಇದೀಗ ಮತ್ತೆ ಹಳೇ ಕಾಮೆಂಟ್‌ಗಳು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ರಾಮ್ ಚರಣ್ ಅಭಿಮಾನಿಗಳು ಎನ್‌ಟಿಆರ್ ಫ್ಯಾನ್ಸ್ ಅನ್ನು ಲೇವಡಿ ಮಾಡಿದ್ದಾರೆ. "ನಿಮ್ಮ ಹೀರೋಗೆ ಸಿಂಗಲ್ ಆಗಿ ಬರುವ ಸಾಮರ್ಥ್ಯವಿಲ್ಲ. ದೇವರ ಸಿನಿಮಾ ಟೋಟಲ್ ಫ್ಲಾಪ್" ಎಂದು ಕಾಮೆಂಟ್‌ಗಳನ್ನು ಮಾಡಿದ್ದರು. ಇದು ಎನ್‌ಟಿಆರ್ ಅಭಿಮಾನಿಗಳನ್ನು ಕೆರಳಿಸಿತ್ತು. ಇತ್ತ ಎನ್‌ಟಿಆರ್ ಫ್ಯಾನ್ಸ್ 'ಗೇಮ್ ಚೇಂಜರ್' ಪೋಸ್ಟರ್ ಹಾಗೂ 'ದೇವರ' ಪೋಸ್ಟರ್ ಅನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಆರಂಭಿಸಿದ್ದರು.
ಇವರ ಕಿತ್ತಾಟವನ್ನು ನೋಡಿದ ಸಿನಿಮಾ ಮಂದಿ ರಾಮ್ ಚರಣ್ ಇಲ್ಲವೇ ಜೂ.ಎನ್‌ಟಿಆರ್ ಯಾರಾದರೂ ಕಡಿವಾಣ ಹಾಕಬಾರದೇ ಎಂದು ಎದುರು ನೋಡುತ್ತಿದ್ದರು. ಇದೇ ವೇಳೆ ರಾಮ್ ಚರಣ್ ತನ್ನ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ಸಂಚಲನ ಸೃಷ್ಟಿಸಿದೆ. "ದೇವರ ರಿಲೀಸ್ ಸಂದರ್ಭದಲ್ಲಿ ನನ್ನ ಸಹೋದರ ತಾರಕ್ ಮತ್ತು ಅವರ ತಂಡಕ್ಕೆ ಆಲ್ ದಿ ಬೆಸ್ಟ್" ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ.
ಈ ಟ್ವೀಟ್ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳ ನಡುವಿನ ಯುದ್ಧಕ್ಕೆ ಫುಲ್‌ಸ್ಟಾಪ್ ಇಡುತ್ತಾ? ಅನ್ನೋದನ್ನು ಟಾಲಿವುಡ್ ಎದುರು ನೋಡುತ್ತಿದೆ. ಸದ್ಯ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











