ಯಾರೀ ಕೊಡಾಲಿ ನಾನಿ.. ನನಗೆ ನ್ಯಾಚುರಲ್ ಸ್ಟಾರ್ ನಾನಿ ಮಾತ್ರ ಗೊತ್ತು: ಆಂಧ್ರ ಸರ್ಕಾರಕ್ಕೆ RGV ಪಂಚ್
ಟಾಲಿವುಡ್‌ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವುದಾದರೂ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇರ್ತಾರೆ. ಯಾವುದೇ ಸರ್ಕಾರ ಇರಲಿ, ಯಾವುದೇ ನಟನಿರಲಿ, ರಾಮ್ ಗೋಪಾಲ್ ವರ್ಮಾ ಹಿಂದೆ ಮುಂದೆ ನೋಡದೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಸದ್ಯ ಟಿಕೆಟ್ ಬೆಲೆ ವಿಚಾರಕ್ಕೆ ಆಂಧ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಆರ್‌ಜಿವಿ ತಣ್ಣಗಾಗುವ ಲಕ್ಷಣ ಕಾಣಿಸುತ್ತಿರಲಿಲ್ಲ.
ಕೆಲವು ದಿನಗಳ ಹಿಂದೆ ರಾಮ್ ಗೋಪಾಲ್ ವರ್ಮಾ ಆಂಧ್ರ ಸರ್ಕಾರ ಸಿನಿಮಾ ಟಿಕೆಟ್ ಬೆಲೆಯನ್ನು ಖಂಡಿಸಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ನೋಡಿದ ಆಂಧ್ರದ ಫೈಯರ್ ಬ್ರ್ಯಾಂಡ್ ಮಿನಿಸ್ಟರ್ ಕೊಡಾಲಿ ನಾನಿ ಪ್ರತಿಕ್ರಿಯೆ ನೀಡಿದ್ದರು. ಈ ವಿಡಿಯೋ ಪ್ರಕ್ರಿಯೆ ನೀಡಿದ ಬಳಿಕ ರಾಮ್ ಗೋಪಾಲ್ ವರ್ಮಾ ಪಂಚಿಂಗ್ ಡೈಲಾಗ್ ಬಿಟ್ಟಿದ್ದಾರೆ. ಈ ಪ್ರತಿಕ್ರಿಯೆ ಬಗ್ಗೆ ಆಂಧ್ರದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಆರ್‌ಜಿವಿ ಪ್ರತಿಕ್ರಿಯೆ ಅಷ್ಟೊಂದು ಚರ್ಚೆ ಆಗುತ್ತಿರುವುದು ಯಾಕೆ? ಅಂತ ತಿಳಿಯಲು ಮುಂದೆ ಓದಿ.

ಟಿಕೆಟ್ ಬೆಲೆ ಇಳಿಕೆಯಿಂದ ಜನರಿಗೆ ಅನುಕೂಲ
ಆಂಧ್ರದ ಮಂತ್ರಿ ಕೊಡಾಲಿ ನಾನಿ ಕೆಲ ದಿನಗಳ ಹಿಂದೆ ಆರ್‌ಜಿವಿ ಟೀಕೆಗೆ ಪ್ರತಿಕ್ರಿಯಿಸಿದ್ದರು. "ಹೀರೊ, ನಿರ್ಮಾಪಕ, ನಿರ್ದೇಶಕ ಎನಿಸಿಕೊಂಡವರು ನಮ್ಮ ಅಕ್ಕ-ಪಕ್ಕದ ರಾಜ್ಯಗಳಿಗೆ ಹೋಗಿ ಸಿನಿಮಾ ಮಾಡುತ್ತಿದ್ದಾರೆ. ಅವರೆಲ್ಲರೂ ಹೈದರಾಬಾದಿನಲ್ಲಿಇದ್ದುಕೊಂಡು ಟೀಕೆ ಮಾಡುತ್ತಿದ್ದಾರೆ. ಇದು ನಮಗೆ ಸಂಬಂಧ ಪಟ್ಟ ವಿಷಯವಲ್ಲ. ಆಂಧ್ರ ಪ್ರದೇಶದ ಜನರು ಅವರ ಸೇವೆ ಮಾಡುಲು ವೈಸಿಪಿಗೆ ವೋಟ್ ಹಾಕಿದ್ದಾರೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ಸಿನಿಮಾ ಟಿಕೆಟ್ ದರವನ್ನು ನಮ್ಮ ಸಿಎಂ ಇಳಿಸಿದ್ದಾರೆ" ಎಂದು ಕೊಡಾಲಿ ನಾನಿ ಹೇಳಿಕೆ ನೀಡಿದ್ದರು.

ಯಾರೀ ಕೊಡಾಲಿ ನಾನಿ? ಆರ್‌ಜಿವಿ ಪ್ರಶ್ನೆ
ಆಂಧ್ರ ಮಂತ್ರಿ ಕೊಡಾಲಿ ನಾನಿ ಕೊಟ್ಟ ಹೇಳಿಕೆಗೆ ಆರ್‌ಜಿವಿ ತಿರುಗೇಟು ನೀಡಿದ್ದಾರೆ. " ಯಾರೋ ಕೊಡಾಲಿ ನಾನಿ ಎಂಬುವವರು ನಾನು ಮಾಡಿದ ಟಿಕೆಟ್ ದರ ಇಳಿಕೆ ವಿಡಿಯೋಗೆ ಕೌಂಟರ್ ಕೊಟ್ಟಿದ್ದಾರಂತೆ. ಅದಕ್ಕೆ ಆಂಧ್ರದ ಜನರು ಪ್ರತಿಕ್ರಿಯೆ ನೀಡುವಂತೆ ಕೇಳಿಕೊಂಡಿದ್ದಾರೆ. ನನಗೆ ಕೊಡಾಲಿ ನಾನಿ ಯಾರು ಅನ್ನುವುದೇ ಗೊತ್ತಿಲ್ಲ. ನನಗೆ ನ್ಯಾಚುರಲ್ ಸ್ಟಾರ್ ನಾನಿ ಮಾತ್ರ ಗೊತ್ತು. ನಿಜವಾಗಲೂ ನನಗೆ ಕೊಡಾಲಿ ನಾನಿ ಯಾರು ಅಂತಾನೇ ಗೊತ್ತಿಲ್ಲ." ಎಂದು ಆರ್‌ಜಿವಿ ಪಂಚ್ ಕೊಟ್ಟಿದ್ದಾರೆ.

ಆರ್‌ಜಿವಿ ಪ್ರಶ್ನೆಗಳಿಗೆ ಉತ್ತರಿಸಲ್ಲ
ಆಂಧ್ರ ಟಿಕೆಟ್ ದರ ಇಳಿಕೆ ಬಗ್ಗೆ ಆರ್‌ಜಿವಿ ವಿಡಿಯೋ ಮಾಡಿ ಪ್ರಶ್ನೆ ಮಾಡಿದ್ದರು. ಆ ವಿಡಿಯೋ ನೋಡಿ ಫೈಯರ್ ಬ್ರ್ಯಾಂಡ್ ಮಿನಿಸ್ಟರ್ ಕೊಡಾಲಿ ನಾನಿ ತಿರುಗೇಟು ನೀಡಿದ್ದರು. " ಆರ್‌ಜಿವಿ ವಿಡಿಯೋಗೆ ನಾನಾಗಲಿ ಅಥವಾ ನನ್ನ ಸರ್ಕಾರವಾಗಲಿ ಪ್ರತಿಕ್ರಿಯೆ ನೀಡುವುದಿಲ್ಲ " ಎಂದು ಕೊಡಾಲಿ ನಾನಿ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಗರಂ ಆದ ಆರ್‌ಜಿವಿ ಆಂಧ್ರ ಮಂತ್ರಿಗೆ ಕೌಂಟರ್ ನೀಡಿದ್ದರು.

ನ್ಯಾಚುರಲ್ ಸ್ಟಾರ್ ನಾನಿ ಗೊತ್ತಿಲ್ಲಎಂದಿದ್ದ ಮಂತ್ರಿ
'ಶ್ಯಾಮ್ ಸಿಂಗ ರಾಯ್' ಸಿನಿಮಾ ಬಿಡುಗಡೆ ವೇಳೆ ಆಂಧ್ರದ ಮಂತ್ರಿ ಅನಿಲ್ ಕುಮಾರ್ ಯಾದವ್ ನ್ಯಾಚುರಲ್ ಸ್ಟಾರ್ ನಾನಿಯನ್ನು ಅಣುಕು ಮಾಡಿದ್ದರು. " ತೆಲುಗು ಹೀರೊ ಅಂತ ಗೊತ್ತಿರುವುದು ಕೊಡಾಲಿ ನಾನಿ. ನ್ಯಾಚುರಲ್ ಸ್ಟಾರ್ ನಾನಿ ಯಾರು ಅಂತಾನೇ ಗೊತ್ತಿಲ್ಲ" ಎಂದು ಅನಿಲ್ ಕುಮಾರ್ ಯಾದವ್ ತಿಳಿಸಿದ್ದರು. ಅದಕ್ಕೆ ಆರ್‌ಜಿವಿ "ನನಗೆ ಕೊಡಾಲಿ ನಾನಿ ಯಾರು ಅನ್ನುವುದೇ ಗೊತ್ತಿಲ್ಲ. ನನಗೆ ನ್ಯಾಚುರಲ್ ಸ್ಟಾರ್ ನಾನಿ ಮಾತ್ರ ಗೊತ್ತು ಅಂತ ಕೌಂಟರ್ ಕೊಟ್ಟಿದ್ದಾರೆ.


Click it and Unblock the Notifications











