ನಮ್ಮ ಸಾವೂ ಮೇಡ್ ಇನ್ ಚೀನಾ ಆಗುತ್ತದೆ ಎಂದುಕೊಂಡಿರಲಿಲ್ಲ: ರಾಮ್ ಗೋಪಾಲ್ ವರ್ಮಾ

ವಿವಾದಾತ್ಮಕ, ಮತ್ತೊಬ್ಬರ ಕಾಲೆಳೆಯುವ ಹಾಗೂ ವಿಡಂಬನಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಟ್ವಿಟ್ಟರ್‌ನಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರದ ಪೋಸ್ಟರ್‌ಅನ್ನೇ ಹೋಲುವ ಚಿತ್ರವನ್ನು ಹಂಚಿಕೊಂಡು ಅದಕ್ಕೆ 'ಡೈರೆಕ್ಟರ್ ಸಾಬ್' ಎಂಬ ಶೀರ್ಷಿಕೆ ಹಾಕಿದ್ದಾರೆ. ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆಗಿರುವ 'ವಕೀಲ್ ಸಾಬ್' ಚಿತ್ರವನ್ನು ದಿಲ್ ರಾಜು ಮತ್ತು ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ.

ರಾಮ್ ಗೋಪಾಲ್ ವರ್ಮಾ ಹಾಕಿರುವ ಚಿತ್ರಕ್ಕೆ ಮಜವಾಗಿರುವ ಮೀಮ್‌ಗಳು ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ನಿರ್ದೇಶಕರಾಗಿ ಒಳ್ಳೆಯ ಸಿನಿಮಾ ಮಾಡುವುದರತ್ತ ಗಮನ ಹರಿಸುವುದನ್ನು ಬಿಟ್ಟು ಬೇರೆಯವರ ಬಗ್ಗೆ ಅನಗತ್ಯ ಕಾಮೆಂಟ್ ಹಾಕುವುದರಲ್ಲಿಯೇ ಕಾಲ ಕಳೆಯುತ್ತೀರಿ ಎಂದು ಜಾಡಿಸಿದ್ದಾರೆ.

'ಮೂರ್ಖತನದ ಕೆಲಸ...'

ಪವನ್ ಕಲ್ಯಾಣ್ ಕಾಲುಚಾಚಿ ಕುಳಿತು ಪುಸ್ತಕ ಓದುತ್ತಿರುವ ಪೋಸ್ಟರ್ ರೀತಿಯಲ್ಲಿಯೇ ತಮ್ಮ ನಿರ್ದೇಶಕನ ಕುರ್ಚಿಯ ಮೇಲೆ ಕುಳಿತು ಕಾಲು ಚಾಚಿರುವ ರಾಮ್ ಗೋಪಾಲ್ ವರ್ಮಾ ವಿಚಿತ್ರವಾದ ಕ್ಯಾಪ್ಷನ್ ಹಾಕಿದ್ದಾರೆ. 'ಕೆಲವು ಈಡಿಯಟ್‌ಗಳು ಈ ಮೂರ್ಖತನವಲ್ಲದ ಕೆಲಸವನ್ನು ಮಾಡಿರುತ್ತಾರೆ ಎಂದು ನಾನು ಅಂದುಕೊಂಡಿಲ್ಲ' ಎಂದು ಹೇಳಿದ್ದಾರೆ.

ಮೇಡ್ ಇನ್ ಚೀನಾ ಸಾವು

ಮೇಡ್ ಇನ್ ಚೀನಾ ಸಾವು

ಈಗ ಕೊರೊನಾ ಭೀತಿ ಆವರಿಸಿರುವುದನ್ನೂ ರಾಮ್ ಗೋಪಾಲ್ ವರ್ಮಾ ತಮಾಷೆ ಮಾಡಿದ್ದಾರೆ. 'ನಮ್ಮ ಸಾವೂ ಮೇಡ್ ಇನ್ ಚೀನಾ ಆಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ' ಎಂದು ವರ್ಮಾ ಹೇಳಿದ್ದಾರೆ. ನಮ್ಮ ದೈನಂದಿನ ಬಳಕೆಯಲ್ಲಿನ ಬಹುತೇಕ ವಸ್ತುಗಳು ಮೇಡ್ ಇನ್ ಚೀನಾವೇ ಆಗಿದೆ. ಈ ನಡುವೆ ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಎಲ್ಲೆಡೆ ದಾಳಿ ಇಡುತ್ತಿದೆ. ಹೀಗಾಗಿ ನಮ್ಮ ಸಾವು ಕೂಡ ಚೀನಾ ಮೂಲದಿಂದಲೇ ಆಗುವಂತಾಗಿದೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ಚೀನಾದಲ್ಲಿ ಚಿತ್ರೀಕರಣವಿಲ್ಲ

ಚೀನಾದಲ್ಲಿ ಚಿತ್ರೀಕರಣವಿಲ್ಲ

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಕೆಲವು ಆಕ್ಷನ್ ಸನ್ನಿವೇಶಗಳು ಚೀನಾದಲ್ಲಿ ಚಿತ್ರೀಕರಿಸಲು ಉದ್ದೇಶಿಸಲಾಗಿತ್ತು. ಆದರೆ ಚೀನಾದಲ್ಲಿ ಕೊರೊನಾ ಹಾವಳಿ ತೀವ್ರವಾಗಿರುವುದರಿಂದ ಅವುಗಳನ್ನು ಮುಂದೂಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾದಲ್ಲಿ ಚಿತ್ರೀಕರಣ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಭಾರತದಲ್ಲಿಯೇ ಚಿತ್ರೀಕರಣ ನಡೆಸುವ ಸಾಧ್ಯತೆ ಇದೆ.

ಗಾಳಿಯಂತೆ ಓಡುತ್ತಿರುವ ಪೂಜಾ

ಗಾಳಿಯಂತೆ ಓಡುತ್ತಿರುವ ಪೂಜಾ

ಪೂಜಾ ಬಾಲೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದ ಎರಡು ಹೊಸ ಫೋಟೊಗಳನ್ನು ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದಾರೆ. ಪೂಜಾ ಅವರನ್ನು 'ಬ್ರೂಸ್ ಲೀ ಗರ್ಲ್' ಎಂದು ಕರೆದಿರುವ ವರ್ಮಾ, ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದ ವಿಜಾಗ್‌ನ ಬೀಚ್‌ನಲ್ಲಿ ಬ್ರೂಸ್ ಲೀ ಗರ್ಲ್ ಓಡುತ್ತಿರುವ ದೃಶ್ಯ ಎಂದಿದ್ದಾರೆ. ಮತ್ತೊಂದು ಚಿತ್ರಕ್ಕೆ 'ಗಾಳಿಯಂತೆ ಓಡುತ್ತಿರುವುದು' ಎಂದು ಕ್ಯಾಪ್ಷನ್ ನೀಡಿದ್ದಾರೆ.

More from Filmibeat

English summary
Ram Gopal Varma in twitter said, 'Never Thought Our Death Would Be also Be Made In China'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X