ಕೆಮ್ಮಿನ ಮೂಲಕವೇ ಹೆದರಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಪ್ರಸ್ತುತ ಸುದ್ದಿಯಲ್ಲಿರುವ ಆಸಕ್ತಿಕರ ಸಂಗತಿಗಳು, ಕ್ರೈಂ ವಿಚಾರಗಳನ್ನು ಸಿನಿಮಾ ಮಾಡುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರಿಣತ. ಈಗ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಕುರಿತು ರಾಮ್ ಗೋಪಾಲ್ ವರ್ಮಾ ಈಗಾಗಲೇ ಸಿನಿಮಾ ಮಾಡಲು ಆರಂಭಿಸಿದ್ದಾರೆ. ಅದರ ಟ್ರೇಲರ್ ಅನ್ನೂ ಲಾಕ್ ಡೌನ್ ಅವಧಿಯಲ್ಲಿಯೇ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

'ಮಾರಕ ನಾವಲ್ ಕೊರೊನಾ ವೈರಸ್ ಆಧಾರಿತ ಜಗತ್ತಿನ ಮೊಟ್ಟಮೊದಲ ಚಿತ್ರ' ಎಂದು ಅವರು ತಮ್ಮ 'ಕೊರೊನಾ ವೈರಸ್' ಚಿತ್ರವನ್ನು ಕರೆದುಕೊಂಡಿದ್ದಾರೆ. ಚಿತ್ರದ ಟ್ರೇಲರ್ ಅನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

ದೇವರಿಂದಲೂ ತಡೆಯಲಾಗದು

ದೇವರಿಂದಲೂ ತಡೆಯಲಾಗದು

ಲಾಕ್ ಡೌನ್ ಮಧ್ಯೆಯೇ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. 'ಕೊರೊನಾ ವೈರಸ್ ಚಿತ್ರದ ಟ್ರೇಲರ್ ಇಲ್ಲಿದೆ. ಲಾಕ್ ಡೌನ್‌ನಲ್ಲಿ ಕಥೆ ಸೃಷ್ಟಿಸಲಾಗಿದೆ, ಲಾಕ್ ಡೌನ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. ದೇವರು ಅಥವಾ ಕೊರೊನಾ ಯಾರಿಂದಲೂ ನಮ್ಮ ಕೆಲಸವನ್ನು ತಡೆಯಲಾರರು ಎಂಬುದನ್ನು ಸಾಬೀತುಪಡಿಸಲು ಬಯಸಿದ್ದೆ' ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಅಗಸ್ತ್ಯ ಮಂಜು ನಿರ್ದೇಶನ

ಅಗಸ್ತ್ಯ ಮಂಜು ನಿರ್ದೇಶನ

ಇದು ರಾಮ್ ಗೋಪಾಲ್ ವರ್ಮಾ ಅವರ ಚಿತ್ರವಾದರೂ ನಿರ್ದೇಶಿಸಿರುವುದು ಅಗಸ್ತ್ಯ ಮಂಜು. ತೆಲುಗು ಭಾಷೆಯ ಚಿತ್ರಕ್ಕೆ ಇಂಗ್ಲಿಷ್ ಉಪ ಶೀರ್ಷಿಕೆ ಇದೆ. ಹಿನ್ನೆಲೆ ಸಂಗೀತವು ಟಿಪಿಕಲ್ ವರ್ಮಾ ಚಿತ್ರಗಳಲ್ಲಿ ಇರುವಂತೆ ಇದ್ದು, ಕೊರೊನಾ ವೈರಸ್ ಒಂದು ಹಾರರ್ ಚಿತ್ರದ ಅನುಭವ ನೀಡುವಂತೆ ಟ್ರೇಲರ್ ಇದೆ.

ಬಿಡುಗಡೆಯ ಮಾಹಿತಿ ಇಲ್ಲ

ಬಿಡುಗಡೆಯ ಮಾಹಿತಿ ಇಲ್ಲ

ಟ್ರೇಲರ್ ಸುದೀರ್ಘವಾಗಿದ್ದು, ನಾಲ್ಕು ನಿಮಿಷಗಳಷ್ಟು ಅವಧಿ ಹೊಂದಿದೆ. ಶ್ರೀಕಾಂತ್ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮನೆಯೊಂದರ ಸದಸ್ಯರೊಬ್ಬರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬರುವ ಭೀತಿ ಮೂಡುವ ಸನ್ನಿವೇಶ ಟ್ರೇಲರ್‌ನಲ್ಲಿದೆ. ಚಿತ್ರೀಕರಣ ಎಷ್ಟು ನಡೆದಿದೆ? ಚಿತ್ರದ ಬಿಡುಗಡೆ ಯಾವಾಗ? ಇತ್ಯಾದಿ ಮಾಹಿತಿಗಳನ್ನು ವರ್ಮಾ ತಿಳಿಸಿಲ್ಲ.

ಸೆಲೆಬ್ರಿಟಿಗಳತ್ತ ವ್ಯಂಗ್ಯದ ಬಾಣ

ಸೆಲೆಬ್ರಿಟಿಗಳತ್ತ ವ್ಯಂಗ್ಯದ ಬಾಣ

ಚಿತ್ರದ ಟ್ರೇಲರ್ ಹಂಚಿಕೊಳ್ಳುವ ಜತೆಗೆ ರಾಮ್ ಗೋಪಾಲ್ ವರ್ಮಾ ಸೆಲೆಬ್ರಿಟಿಗಳ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಮನೆಯಲ್ಲಿ ಅಡುಗೆ, ಸ್ವಚ್ಛತೆ ಕೆಲಸ ಮಾಡುತ್ತಿರುವ ವಿಡಿಯೋಗಳನ್ನು ಹಾಕುವ ಸೆಲೆಬ್ರಿಟಿಗಳನ್ನು ಲೇವಡಿ ಮಾಡಿದ್ದಾರೆ. 'ಉಳಿದ ಜನರು ನೆಲ ಗುಡಿಸುತ್ತಿರುವಾಗ, ಅಡುಗೆ ಮಾಡುತ್ತಿರುವಾಗ, ಶೌಚಾಲಯ ಒರೆಸುವಾಗ, ಬಟ್ಟೆ ಒಣಗಿಸುತ್ತಿರುವಾಗ, ಇತ್ಯಾದಿ ಇತ್ಯಾದಿ ಮಾಡುವಾಗ... ನಾನು ಸಿನಿಮಾ ಮಾಡಿದ್ದೇನೆ' ಎಂದು ಹೇಳಿದ್ದಾರೆ.

More from Filmibeat

English summary
Director Ram Gopal Varma has released his Telugu movie trailer Coronavirus amid lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X