ಶ್ರೀರಾಮನವಮಿಗೆ 'ಆದಿಪುರುಷ್' ಹೊಸ ಪೋಸ್ಟರ್: " ಸೀತೆ ಹಣೆ ಮೇಲೆ ಕುಂಕುಮ ಎಲ್ಲಿ?" ಎಂದ ನೆಟ್ಟಿಗರು
'ಆದಿಪುರುಷ್' ಈ ವರ್ಷ ರಿಲೀಸ್ ಆಗುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು. 'ರಾಮಾಯಣ'ವನ್ನು ತೆರೆಮೇಲೆ ತರುವ ಸಾಹಸವನ್ನು ಬಾಲಿವುಡ್ ನಿರ್ದೇಶಕ ಓಂ ರಾವತ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ನಟಿ ಕೃತಿ ಸೆನನ್ ಇಬ್ಬರು ರಾಮ ಸೀತೆಯ ಅವತಾರವೆತ್ತಿದ್ದಾರೆ.
ಇಂದು(ಮಾರ್ಚ್ 30) ಶ್ರೀರಾಮ ನವಮಿ. ಭಾರತದೆಲ್ಲೆಡೆ ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ 'ಆದಿಪುರುಷ್' ತಂಡ ತಮ್ಮ ಸಿನಿಮಾದ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್ ರಾಘವನಾಗಿ, ಕೃತಿ ಸೆನನ್ ಜಾನಕಿಯಾಗಿ, ಸನ್ನಿ ಸಿಂಗ್ ಶೇಷನಾಗಿ ಹಾಗೂ ದೇವದತ್ತ ನಾಗೆ ಭಜರಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪುರಾಣಗಳ ಪ್ರಕಾರ ಇಂದು ಶ್ರೀರಾಮನ ಹುಟ್ಟುಹಬ್ಬ ಆಗಿರುವುದರಿಂದ ಎಲ್ಲೆಡೆ ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲೆಯಲ್ಲಿಯೇ 'ಆದಿಪುರುಷ್' ಹೊಚ್ಚ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.

7 ಸಾವಿರದ ಹಿಂದಿನ ಕಥೆ
'ಆದಿಪುರುಷ್' 7000 ಹಿಂದಿನ ಕಥೆಯನ್ನು ತೆರೆಮೇಲೆ ತರಲಾಗುತ್ತಿದೆ. ರಾಘವ (ರಾಮ) ಪತ್ನಿ ಜಾನಕಿಯನ್ನು ರಕ್ಷಿಸಲು ಲಂಕಾಗೆ ಹೋದ ಸನ್ನಿವೇಶವನ್ನು ತೆರೆಮೇಲೆ ತರಲಾಗುತ್ತಿದೆ. ಲಂಕಾದ ದೊರೆ ಲಂಕೇಶ(ರಾವಣ)ನಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಈ ಮೂಲಕ ಸೈಫ್ ಅಲಿ ಖಾನ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆ ಇದೇ 'ಆದಿಪುರುಷ್' ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಸಿನಿಮಾ ವಿಎಫ್‌ಎಕ್ಸ್ ಬಗ್ಗೆ ನೆಟ್ಟಿಗರು ಅಸಮಧಾನ ಹೊರ ಹಾಕಿದ್ದರು. ಈ ಕಾರಣಕ್ಕೆ ನಿರ್ದೇಶಕ ಓಂ ರಾವತ್ ಸಿನಿಮಾ ಬಿಡುಗಡೆಯನ್ನು ಮತ್ತಷ್ಟು ದಿನ ಮುಂದಕ್ಕೆ ಹಾಕಿದ್ದರು. ಹೀಗಾಗಿ ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ.
ಏನಂತಿದ್ದಾರೆ ನೆಟ್ಟಿಗರು?
ಆದಿಪುರುಷ್ ಪೋಸ್ಟರ್ ನೋಡಿ ನೆಟ್ಟಿಗರ ಅಸಮಧಾನ ಮುಂದುವರೆದಿದೆ. ಒಬ್ಬರು "ಸರ್ ಪೋಸ್ಟರ್‌ನಲ್ಲಿ ಏನೂ ಬದಲಾವಣೆ ಕಾಣಿಸುತ್ತಿಲ್ಲ. ಫಿಲ್ಟರ್ ಹಾಕಿದ ರೀತಿ ಕಾಣಿಸುತ್ತಿದೆಯಷ್ಟೇ. ಆರ್ಟಿಸ್ಟ್‌ಗಳ ಮುಖಚರ್ಯೆಯಲ್ಲಿ ಎನೂ ಬದಲಾವಣೆ ಕಾಣಿಸುತ್ತಿಲ್ಲ. ಇನ್ನು ಮೋಷನ್ ಕ್ಯಾಪ್ಚರ್ ಬಳಸಿ ಸಿನಿಮಾ ಪ್ರಯತ್ನ ಮಾಡಿದ್ದೀರೆಂದು ನನಗೆ ತಿಳಿದಿದೆ. ಆದರೆ, ಇದು ಬೇಸರ ತರಿಸಿದೆ" ಎಂದಿದ್ದಾರೆ.
ಮತ್ತೊಬ್ಬರು ಸೀತೆಯ ಹಣೆಯಲ್ಲಿ ಕಂಡು ಕಾಣದ ಬಿಂದಿಯನ್ನು ನೋಡಿ, "ಸೀತಾ ಮಾತೆಯ ಹಣೆಯಲ್ಲಿ ಕುಂಕುಮ ಎಲ್ಲಿದೆ?" ಎಂದು ಕಿಡಿ ಕಾರಿದ್ದಾರೆ. ಇತ್ತೊಬ್ಬರು "ಟೀಸರ್ ನೋಡಿ.. ಆಗ ಎಷ್ಟು ಸ್ವಚ್ಚ ಆಗಿದೆ ಅನ್ನೋದು ಗೊತ್ತಾಗುತ್ತೆ." ಎಂದಿದ್ದಾರೆ. ಹಾಗೇ " ಹಳೆ ಪೋಸ್ಟರ್‌ಗಿಂತ ಕೆಟ್ಟದಾಗಿದೆ.", " ಮಜಾ ಸಿಗುತ್ತಿಲ್ಲ.", "ಇನ್ನೂ ಕಾಸ್ಟ್ಯೂಮ್ ಹಾಗೂ ಲುಕ್‌ನಲ್ಲಿ ಏನೂ ಬದಲಾವಣೆ ಇಲ್ಲ" ಎಂದು ನೆಟ್ಟಿಗರು ವಿಧವಿಧವಾಗಿ ಕಿರಿಕಾರುತ್ತಿದ್ದಾರೆ.


Click it and Unblock the Notifications











