ಬರ್ತ್‌ಡೇ ಮೂಡ್ನಲ್ಲಿ ರಾಮ್‌ಚರಣ್ ತಿರುಮಲಕ್ಕೆ ಭೇಟಿ; ಇತ್ತ 'ರಂಗಸ್ಥಳಂ 2' ಜಪ ಮಾಡ್ತಿರೋ ಫ್ಯಾನ್ಸ್ !

ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39 ವರ್ಷಕ್ಕೆ ಕಾಲಿಟ್ಟಿರೋ ರಾಮ್‌ಚರಣ್ ತಮ್ಮ ಪತ್ನಿ ಉಪಾಸನಾ ಹಾಗೂ ಕುಟುಂಬದವರೊಂದಿಗೆ ತಿರುಮಲಕ್ಕೆ ಭೇಟಿ ಕೊಟ್ಟು ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ. ರಾಮ್ ಚರಣ್ ದಂಪತಿಗೆ ಮಗು ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ತಿಮ್ಮಪ್ಪನ ದರ್ಶನ್ ಪಡೆದಿದ್ದಾರೆ.

ಹುಟ್ಟುಹಬ್ಬದ ಬೆನ್ನಲ್ಲೇ ರಾಮ್‌ಚರಣ್ ತಿಮ್ಮಪ್ಪನಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಸುಪ್ರಭಾತ ಸೇವೆ ಮಾಡಿಸಿದ್ದಾರೆ. ಇದೇ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕೆ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಮಗುವಿನ ಜೊತೆಯಲ್ಲಿ ತಿರುಪತಿಗೆ ಭೇಟಿ ನೀಡಿದ್ದ ರಾಮ್‌ಚರಣ್ ದಂಪತಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

Ramcharan birthday fans discussing his next movies with Sukumar are Rangastalam Sequel

ಇನ್ನೊಂದು ಕಡೆ ರಾಮ್ ಚರಣ್ ಅಭಿಮಾನಿಗಳು ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 'ಪುಷ್ಪ 2' ಸಿನಿಮಾದ ನಿರ್ದೇಶಕ ಸುಕುಮಾರ್ ಜೊತೆ ಕೆಲಸ ಮಾಡುವುದಕ್ಕೆ ರಾಮ್‌ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ರಂಗಸ್ಥಳಂ' ಸಿನಿಮಾ ಬಳಿಕ ಮತ್ತೆ ಈ ಕಾಂಬಿನೇಷನ್ ಒಟ್ಟಿಗೆ ಸೇರಿಕೊಂಡಿದೆ. ಈ ಜೋಡಿ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ರಾಮ್‌ಚರಣ್ ಅಭಿಮಾನಿಗಳಿಗೆ ಥ್ರಿಲ್ ಆಗಿದ್ದಾರೆ.

ಒಂದ್ಕಡೆ ಗ್ಲೋಬಲ್ ಸ್ಟಾರ್ ರಾಮ್‌ಚರಣ್. ಇನ್ನೊಂದು ಕಡೆ ನಿರ್ದೇಶಕ ಸುಕುಮಾರ್. ಇಬ್ಬರು ಈಗ ಪ್ಯಾನ್ ಇಂಡಿಯಾ ಸ್ಟಾರ್‌ಗಳೇ. 'RRR' ಸಿನಿಮಾ ಬಳಿಕ ರಾಮ್‌ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇನ್ನೊಂದು ಕಡೆ 'ಪುಷ್ಪ' ಬಳಿಕ ಸುಕುಮಾರ್ ಕೂಡ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿದ್ದಾರೆ. ಹೀಗಾಗಿ ಈ ಜೋಡಿಯ ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತೆ ಅಂತ ಟಾಲಿವುಡ್ ಮಂದಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ರಾಮ್‌ಚರಣ್ ಜೊತೆ ಸುಕುಮಾರ್ ಕೈ ಜೋಡಿಸುತ್ತಿದ್ದಂತೆ ಅಭಿಮಾನಿಗಳು ಈ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಹಿಂದೆ ಇದೇ ಜೋಡಿ 'ರಂಗಸ್ಥಳಂ' ಅಂತಹ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಕೊಟ್ಟಿದ್ದರು. ಹೀಗಾಗಿ ಈ ಜೋಡಿ 'ರಂಗಸ್ಥಳಂ' ಸೀಕ್ವೆಲ್‌ಗೆ ಕೈ ಹಾಕಿರಬೇಕೆಂದು ಚರ್ಚೆ ಮಾಡುತ್ತಿದ್ದಾರೆ. ಸದ್ಯಕ್ಕೆ ನಿರ್ದೇಶಕ ಸುಕುಮಾರ್ ಮೆಗಾ ಪವರ್‌ಸ್ಟಾರ್‌ಗೆ ಕಥೆಯನ್ನು ಹೇಳಿದ್ದಾರೆ. ಅದು ರಾಮ್‌ಚರಣ್‌ಗೂ ಇಷ್ಟ ಆಗಿದೆ ಎಂದು ಹೇಳಲಾಗುತ್ತಿದೆ.

Ramcharan birthday fans discussing his next movies with Sukumar are Rangastalam Sequel

ಸುಕುಮಾರ್ ಶಿಷ್ಯ ಬುಚಿ ಬಾಬು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಾಮ್ ಚರಣ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬುಚ್ಚಿ ಬಾಬು ಸಿನಿಮಾ ಮುಗಿಯುತ್ತಿದ್ದಂತೆ ಸುಕುಮಾರ್ ಸಿನಿಮಾ ಆರಂಭ ಆಗುತ್ತೆ. ಆದ್ರೀಗ ಸುಕುಮಾರ್ 'ರಂಗಸ್ಥಳಂ' ಸಿನಿಮಾದ ಮುಂದುವರೆದ ಭಾಗವನ್ನು ತೋರಿಸುತ್ತಾರಾ? ಅಥವಾ ಬೇರೆ ಕಥೆಯನ್ನೇ ಹೇಳುತ್ತಾರಾ? ಅನ್ನೋ ಅನುಮಾನ ಮಾಡಿದೆ. ಸದ್ಯಕ್ಕೆ ಇನ್ನೂ ಆರಂಭದ ಹಂತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಇದಕ್ಕೆ ಕ್ಲಾರಿಟಿ ಸಿಗಬಹುದು.

ಶಂಕರ್ 'ಗೇಮ್ ಚೆಂಜರ್' ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ರಾಮ್‌ ಚರಣ್ ಹುಟ್ಟುಹಬ್ಬದ ಈ ಸಂದರ್ಭದಲ್ಲಿ 'ಗೇಮ್ ಚೇಂಜರ್' ತಂಡ ಅಭಿಮಾನಿಗಳಿಗೆ ಹಾಡನ್ನು ರಿಲೀಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಲಿದೆ. ಹಾಗೇ #RC17 ಸಿನಿಮಾ ತಂಡ ಕೂಡ ಫ್ಯಾನ್ಸ್‌ಗೆ ಉಡುಗೊರೆ ನೀಡುವ ಸಾಧ್ಯತೆಯಿದೆ.

More from Filmibeat

English summary
Ramcharan visited Tirumala on his birthday. At the same time, fans are discussing his movie with Sukumar, Rangasthalam:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X