ರಮ್ಯಾಕೃಷ್ಣ- ಕೃಷ್ಣವಂಶಿ ಡಿವೋರ್ಸ್..? ಅಸಲಿ ಕಹಾನಿ ಬಿಚ್ಚಿಟ್ಟ ಬಹುಭಾಷಾ ನಟಿ ಪತಿ!

ವಯಸ್ಸು 50 ದಾಟಿದ್ರು, ಬಹುಭಾಷಾ ನಟಿ ರಮ್ಯಾಕೃಷ್ಣ ಕ್ರೇಜ್ ಮಾತ್ರ ಕಿಂಚಿತ್ತು ಕಮ್ಮಿಯಾಗಿಲ್ಲ. ಇವತ್ತಿಗೂ ಈ ಚೆನ್ನೈ ಚೆಲುವೆಗಂತ್ಲೇ ನಿರ್ದೇಶಕರು ಹೊಸ ಹೊಸ ಪಾತ್ರಗಳನ್ನು ಬರೆಯುತ್ತಾರೆ. ಸದ್ಯ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾದಲ್ಲೂ ಒಂದೊಳ್ಳೆ ಪಾತ್ರ ಮಾಡ್ತಿದ್ದಾರೆ.

ಸಿನಿಮಾ ಬಿಟ್ಟು ರಮ್ಯಾಕೃಷ್ಣ ಮ್ಯಾರೇಜ್ ಲೈಫ್ ಬಗ್ಗೆ ಹೇಳೋದಾದ್ರೆ, ಕೆಲ ವರ್ಷಗಳ ಹಿಂದೆ ಕೃಷ್ಣವಂಶಿ ಮತ್ತು ರಮ್ಯಾಕೃಷ್ಣ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ವೈಮನಸ್ಸಿನಿಂದ ಇಬ್ಬರೂ ದೂರಾಗೋಕೆ ಮನಸ್ಸು ಮಾಡಿದ್ದಾರೆ. ಡೈವೋರ್ಸ್ ತಗೊಳ್ಳೊಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಇಬ್ಬರು ಪ್ರತಿಕ್ರಿಯಿಸೋ ಗೋಜಿಗೆ ಹೋಗಿರಲಿಲ್ಲ.

ಇದೀಗ ಸಂದರ್ಶವೊಂದಲ್ಲಿ ಈ ಬಗ್ಗೆ ರಮ್ಯಾಕೃಷ್ಣ ಪತಿ ನಿರ್ದೇಶಕ ಕೃಷ್ಣವಂಶಿ ಮಾತನಾಡಿದ್ದಾರೆ. ನಾಲ್ಕು ವರ್ಷಗಳ ನಂತ್ರ ನಿರ್ದೇಶಕ ಕೃಷ್ಣವಂಶಿ 'ರಂಗಮಾರ್ತಾಂಡ' ಅನ್ನೋ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಅವರು ಡಿವೋರ್ಸ್ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ.

ರಮ್ಯಾಕೃಷ್ಣ ಕರಿಯರ್ ಪೀಕ್‌ನಲ್ಲಿ ಇದ್ದಾಗ್ಲೇ ನಿರ್ದೇಶಕ ಕೃಷ್ಣವಂಶಿ ಜೊತೆ ಹಸೆಮಣೆ ಏರಿದ್ದರು. ಇಬ್ಬರ ಪ್ರೀತಿಯ ಸಂಕೇತವಾಗಿ ಒಂದು ಮಗು ಕೂಡ ಇದೆ. ಗುಲಾಬಿ, ಖಡ್ಗಂ, ಚಂದಮಾಮ, ಗೋವಿಂದುಡು ಅಂದರಿವಾಡೆಲೇ ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟ ಕೃಷ್ಣವಂಶಿ ಸದ್ಯ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕೃಷ್ಣವಂಶಿ ಸಿನಿಮಾಗಳು ಅಷ್ಟಾಗಿ ಸೌಂಡ್ ಮಾಡ್ತಿಲ್ಲ. ಈಗ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ.

ರಮ್ಯಾ ಕೃಷ್ಣ ಪತಿ ಹೇಳಿದ್ದೇನು?

ರಮ್ಯಾ ಕೃಷ್ಣ ಪತಿ ಹೇಳಿದ್ದೇನು?

'ಫ್ಯಾಮಿಲಿ, ಜವಾಬ್ದಾರಿಗಳಿಗೆ ಭಯ ಬಿದ್ದು ಮದುವೆ ಮಾಡಿಕೊಳ್ಳೋದೇ ಬೇಡ ಅಂತ ನಿರ್ಧರಿಸಿದ್ದೆ. ಕೊನೆಗೆ ರಮ್ಯಾಕೃಷ್ಣ ಕೈ ಹಿಡಿದೆ. ಇದೆಲ್ಲಾ ಲೈಫ್ ಡಿಸೈನ್ ಅಂತ ಅಂದುಕೊಂಡೆ. ಮದುವೆ ನಂತ್ರ ನನ್ನ ಲೈಫಲ್ಲಿ ದೊಡ್ಡ ಬದಲಾವಣೆ ಏನೂ ಆಗಲಿಲ್ಲ. ರಮ್ಯಾಕೃಷ್ಣ ನನ್ನನ್ನು ನನ್ನಷ್ಟಕ್ಕೆ ಇರೋಕೆ ಬಿಟ್ಟಳು. ಇನ್ನು ಅವಳಿಂದ ಡಿವೋರ್ಸ್ ಅಂತೀರಾ..? ಅದರಲ್ಲಿ ಸತ್ಯಾಂಶ ಇಲ್ಲ. ಪಬ್ಲಿಕ್ ಫಿಗರ್‌ ಆಗಿರೋದ್ರಿಂದ ಇಂತಹ ಗಾಸಿಪ್‌ಗಳು ಕಾಮನ್. ಆದರೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳೊದಿಲ್ಲ. ಅದೇ ಕಾರಣಕ್ಕೆ ಸ್ಪಷ್ಟನೆ ಕೊಡೋದಕ್ಕೂ ಹೋಗಲಿಲ್ಲ. ಜಸ್ಟ್ ನಕ್ಕು ಸುಮ್ಮನಾದ್ವಿ' ಅಂತ ಕೃಷ್ಣವಂಶಿ ಹೇಳಿದ್ದಾರೆ.

ಕೃಷ್ಣವಂಶಿ ಸಿನಿಮಾಗಳಿಗೆ ಪ್ರಶಸ್ತಿಗಳ ಸುರಿಮಳೆ

ಕೃಷ್ಣವಂಶಿ ಸಿನಿಮಾಗಳಿಗೆ ಪ್ರಶಸ್ತಿಗಳ ಸುರಿಮಳೆ

ಕೃಷ್ಣವಂಶಿ ಸಿನಿಮಾಗಳ ಹೇಳೋದಾದ್ರೆ, ಯಾವುದೇ ಕಥೆಯನ್ನಾದ್ರೂ, ಬಹಳ ಕಲರ್‌ಫುಲ್ಲಾಗಿ ಹೇಳೊ ಆಸಾಮಿ. ಗುಲಾಬಿ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದ ಕೃಷ್ಣವಂಶಿ, ಮೊದಲ ಪ್ರಯತ್ನದಲ್ಲೇ ಸೂಪರ್ ಸಕ್ಸಸ್ ಕಂಡವರು. 'ನಿನ್ನೆ ಪೆಳ್ಳಾಡತಾ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ನ್ಯಾಷನಲ್ ಅವಾರ್ಡ್ ಸೇರಿ ಸಾಕಷ್ಟು ಅವಾರ್ಡ್‌ಗಳನ್ನು ತಂದುಕೊಟ್ಟಿತ್ತು. ನಂತ್ರ ಬಂದ 'ಸಿಂಧೂರಂ' ಸಿನಿಮಾ ಕೂಡ ನಂದಿ ಅವಾರ್ಡ್, ನ್ಯಾಷನಲ್ ಅವಾರ್ಡ್ ಪಡೆದುಕೊಂಡಿತ್ತು.

ಶಾರುಖ್ ಖಾನ್‌ಗೂ ಆಕ್ಷನ್ ಕಟ್

ಶಾರುಖ್ ಖಾನ್‌ಗೂ ಆಕ್ಷನ್ ಕಟ್

'ಅಂತಃಪುರಂ' ಕೃಷ್ಣವಂಶಿ ನಿರ್ದೇಶನದ ಮಾಸ್ಟರ್‌ಪೀಸ್‌ ಸಿನಿಮಾ. ಸೌಂದರ್ಯ, ಜಗಪತಿ ಬಾಬು, ಪ್ರಕಾಶ್‌ ರೈ ನಟಿಸಿದ್ದ ಈ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಮುಂದೆ ಈ ಕಥೆಯನ್ನು ಬಾಲಿವುಡ್‌ಗೆ ಕೊಂಡೊಯ್ದಿದ್ರು ಕೃಷ್ಣವಂಶಿ. 'ಶಕ್ತಿ: ದಿ ಪವರ್' ಹೆಸರಿನಲ್ಲಿ ರೀಮೇಕ್ ಆಗಿದ್ದ ಈ ಚಿತ್ರದಲ್ಲಿ ಶಾರುಖ್ ಖಾನ್, ಕರೀಷ್ಮಾ ಕಪೂರ್, ನಾನಾ ಪಾಟೇಕರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ರು. ಬಾಲಿವುಡ್‌ನಲ್ಲೂ ಕೃಷ್ಣವಂಶಿ ನಿರ್ದೇಶನಕ್ಕೆ ಬಹುಪರಾಕ್ ಸಿಕ್ತು. ಆದರೆ ಕಮರ್ಷಿಯಲ್ ಆಗಿ 'ಶಕ್ತಿ' ಸಿನಿಮಾ ಬಾಲಿವುಡ್‌ನಲ್ಲಿ ಗೆಲ್ಲಲಿಲ್ಲ.

ಸೋಲಿನ ಸರಪಳಿಯಲ್ಲಿ ಕೃಷ್ಣವಂಶಿ

ಸೋಲಿನ ಸರಪಳಿಯಲ್ಲಿ ಕೃಷ್ಣವಂಶಿ

ಕೃಷ್ಣವಂಶಿ ನಿರ್ದೇಶನದ ಮತ್ತೊಂದು ಅದ್ಭುತ ಸಿನಿಮಾ 'ಖಡ್ಗಂ'. ಈ ಚಿತ್ರಕ್ಕೂ ನಂದಿ ಅವಾರ್ಡ್, ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿತ್ತು. 'ಖಡ್ಗಂ' ನಂತ್ರ 'ಚಂದಮಾಮ' ಸಿನಿಮಾ ಕೊಂಚ ಹೆಸರು ಮಾಡಿದ್ದು ಬಿಟ್ರೆ, ನಂತ್ರ ಕೃಷ್ಣವಂಶಿ ನಿರ್ದೇಶನದ ಸಿನಿಮಾಗಳು ಸದ್ದು ಮಾಡಲೇ ಇಲ್ಲ. ಇದೀಗ 'ರಂಗಮಾರ್ತಾಂಡ' ಸಿನಿಮಾದಿಂದ ಮತ್ತೆ ಗೆಲುವಿನ ಲಯಕ್ಕೆ ಮರಳಲು ಕೃಷ್ಣವಂಶಿ ಹವಣಿಸುತ್ತಿದ್ದಾರೆ.

More from Filmibeat

English summary
Ramya Krishnan- Krishna Vamsi Divorce: Actress Husband Gave Clarity, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X