ಫೋಟೊಗಳು: ಲಾಕ್ ಡೌನ್ ನಡುವೆ ರಾಣಾ ದಗ್ಗುಬಾಟಿ- ಮಿಹೀಕಾ ಬಜಾಜ್ ನಿಶ್ಚಿತಾರ್ಥ ಸಂಭ್ರಮ

'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ ತಮ್ಮ ದೀರ್ಘಕಾಲದ ಗೆಳತಿ ಮಿಹೀಕಾ ಬಜಾಜ್ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾರೆ. ಬುಧವಾರ ನಡೆದ ಸಮಾರಂಭದಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ತಮ್ಮ ಎಂಗೇಜ್‌ಮೆಂಟ್‌ನ ಸುಂದರವಾದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಾಣಾ, 'ಇದೀಗ ಅಧಿಕೃತ' ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ ನಡುವೆಯೇ ಅಲಂಕೃತ ಸ್ಥಳದಲ್ಲಿ ರಾಣಾ ವೈವಾಹಿಕ ಬದುಕಿನತ್ತ ಮೊದಲ ಹೆಜ್ಜೆ ಇರಿಸಿದ್ದಾರೆ.

Recommended Video

KGF Movie : ತೆಲುಗು ನಟ ರಾಣಾ ದಗ್ಗುಬಾಟಿ ಕೆಜಿಎಫ್ ಚಾಪ್ಟರ್ 1 ಲೇಟ್ ಆಗಿ ನೋಡಿ ಏನಂದ್ರು? | Oneindia Kannada

ಪ್ರತಿಷ್ಠಿತ ಬಿಜಿನೆಸ್ ಹಿನ್ನೆಲೆಯಿಂದ ಬಂದಿರುವ ಮಿಹೀಕಾ, ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಮುಂದೆ ಓದಿ...

ರಾಣಾ-ಮಿಹೀಕಾ ಮಿಂಚು

ರಾಣಾ-ಮಿಹೀಕಾ ಮಿಂಚು

35 ವರ್ಷದ ನಟ ರಾಣಾ ಬಿಳಿ ಅಂಗಿ ಮತ್ತು ಪಂಚೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರೆ, ಮಿಹೀಕಾ ಬಜಾಜ್ ಗುಲಾಬಿ ಮತ್ತು ಕಿತ್ತಳೆ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿಯ ಆಕರ್ಷಕ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಾರದ ಹಿಂದಷ್ಟೇ ಬಹಿರಂಗ

ವಾರದ ಹಿಂದಷ್ಟೇ ಬಹಿರಂಗ

ಒಂದು ವಾರದ ಹಿಂದೆ ರಾಣಾ ತಮ್ಮ ಹಾಗೂ ಮಿಹೀಕಾ ಜತೆಗಿನ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಚೆಂದನೆಯ ಫೋಟೊ ಹಂಚಿಕೊಂಡಿದ್ದ ಅವರು, 'ಅವಳು ಒಪ್ಪಿಕೊಂಡಳು' ಎಂದು ಬರೆದುಕೊಂಡಿದ್ದರು.

ಸಿನಿಮಾ ಕುಟುಂಬದ ರಾಣಾ

ಸಿನಿಮಾ ಕುಟುಂಬದ ರಾಣಾ

ಖ್ಯಾತ ನಿರ್ಮಾಪಕ ಡಿ. ರಾಮನಾಯ್ಡು ಅವರ ಮೊಮ್ಮಗ ಮತ್ತು ಡಿ ಸುರೇಶ್ ಬಾಬು ಅವರ ಮಗನಾಗಿರುವ ರಾಣಾ, ಅವರದು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಕುಟುಂಬವಾದರೆ, ಮಿಹೀಕಾ ಅವರದು ಉದ್ಯಮ ಕ್ಷೇತ್ರದಲ್ಲಿ ಹೆಸರಾಗಿರುವ ಕುಟುಂಬ.

ನಿರಾಕರಿಸಿದ ರಾಣಾ ತಂದೆ

ನಿರಾಕರಿಸಿದ ರಾಣಾ ತಂದೆ

ರಾಣಾ ಮತ್ತು ಮಿಹೀಕಾ ಬುಧವಾರ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ರಾಣಾ ತಂದೆ ಸುರೇಶ್ ಬಾಬು ನಿರಾಕರಿಸಿದ್ದರು. 'ಇದು ನಿಶ್ಚಿತಾರ್ಥ ಅಲ್ಲ. ಬುಧವಾರ ನಮ್ಮ ಕುಟುಂಬಗಳು ಜತೆಯಾಗಿ ಕುಳಿತು ಮದುವೆಗೆ ಮುನ್ನ ಹಾಗೂ ಮದುವೆ ನಂತರದ ಕಾರ್ಯಕ್ರಮಗಳು ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದವಷ್ಟೇ' ಎಂದು ಹೇಳಿದ್ದರು.

ಇದು ತೆಲುಗಿನವರ ವಾಡಿಕೆ

ಇದು ತೆಲುಗಿನವರ ವಾಡಿಕೆ

'ಎಂಗೇಜ್‌ಮೆಂಟ್ ಮತ್ತು ಮದುವೆಯ ದಿನಾಂಕಗಳನ್ನು ನಿಗದಿಪಡಿಸುವ ಮುನ್ನ ವಧುವಿನ ಪೋಷಕರನ್ನು ಭೇಟಿ ಮಾಡುವುದು ತೆಲುಗಿಗರ ಆಚರಣೆ. ಅದರಂತೆಯೇ ಭೇಟಿ ಮಾಡಿದ್ದೆವು. ಈ ಕುರಿತಾದ ಮಾತುಕತೆಗಳು ನಡೆಯುತ್ತಿರುವುದಕ್ಕೆ ಸಂತಸವಾಗಿದೆ' ಎಂದು ತಿಳಿಸಿದ್ದರು.

ಡಿಸೆಂಬರ್‌ನಲ್ಲಿ ಮದುವೆ?

ಡಿಸೆಂಬರ್‌ನಲ್ಲಿ ಮದುವೆ?

ಆದರೆ, ತಂದೆ ಈ ಹೇಳಿಕೆ ನೀಡಿದ ಮರುದಿನವೇ ರಾಣಾ, 'ಇದೀಗ ಅಧಿಕೃತ' ಎಂದು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಮದುವೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸುರೇಶ್ ಬಾಬು ತಿಳಿಸಿದ್ದಾರೆ.

More from Filmibeat

English summary
Actor Rana Dagubatti officially engaged to his longtime girlfriend Miheeka Bajaj on Wednesday. Rana has shared the photos on twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X