ಹೆಚ್ಚು ಕಡಿಮೆ ಹೀಗೆ ಆಯ್ತಲ್ವಾ ಮದುವೆ? ರಶ್ಮಿಕಾ-ವಿಜಯ್‌ಗೆ 'ರಾಣಾಬಾಲಿ'ನೇ ಪ್ರೇರಣೆಯೇ.. ಈ ವಿಡಿಯೋ ನೋಡಿ
ಟಾಲಿವುಡ್‌ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಇಬ್ಬರೂ ರಹಸ್ಯವಾಗಿಯೇ ಇಟ್ಟಿದ್ದರು. ಇಬ್ಬರ ಬಗ್ಗೆ ಅದೆಷ್ಟೇ ವದಂತಿಗಳು ಹಬ್ಬಿದರೂ ಡೋಂಟ್ ಕೇರ್ ಅಂತ ಓಡಾಡಿಕೊಂಡಿದ್ದರು. ಒಂದಿಷ್ಟು ವರ್ಷ ಡೇಟಿಂಗ್ ಮಾಡಿದ ಬಳಿಕ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಸಿನಿಮಾ ರಂಗದಿಂದ ಇಬ್ಬರ ಆತ್ಮೀಯರು ವಿವಾಹ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಇನ್ನೇನು ಮದುವೆ ಮುಗಿದು ಎರಡೂ ಮನೆಯ ಶಾಸ್ತ್ರಗಳನ್ನು ನೆರೆವೇರಿಸುವುದರಲ್ಲಿ ಈ ಜೋಡಿ ಬ್ಯುಸಿಯಾಗಿದೆ. ಈ ಮಧ್ಯೆ ಅಭಿಮಾನಿಗಳಿಂದ, ಗಣ್ಯರಿಂದ ವಿವಾಹದ ಶುಭಾಶಯಗಳು ಬರೋದು ಇನ್ನೂ ನಿಂತಿಲ್ಲ. ಈ ಮಧ್ಯೆ 'ರಾಣಾಬಾಲಿ' ತಂಡ ಈ ಜೋಡಿ ವಿಶೇಷವಾಗಿ ಶುಭ ಕೋರಿದೆ.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಬಳಿಕ ಇಬ್ಬರೂ ಜೊತೆಯಾಗಿ ನಟಿಸುತ್ತಿರುವ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಅದುವೇ 'ರಾಣಾಬಾಲಿ'. ಈ ಜೋಡಿ 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್' ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಸರಿಯಾದ ಸಮಯಕ್ಕೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾ ಪೋಸ್ಟರ್ ಹಿಂದೆನೇ ರೊಮ್ಯಾಂಟಿಕ್ ಹಾಡಿನ ತುಣುಕನ್ನು ರಿಲೀಸ್ ಮಾಡಿ, ವೈವಾಹಿಕ ಜೀವನಕ್ಕೆ ಶುಭಕೋರಿದ್ದಾರೆ. ಈ ವಿಡಿಯೋನಾ ನೋಡಿ ಈ ಸಿನಿಮಾದಿಂದ ಪ್ರೇರಣೆಯಾಗಿ ಮದುವೆ ಆಗಿರಬಹುದೆಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
'ರಾಣಾಬಾಲಿ' ಫಸ್ಟ್ ಲುಕ್ ಹಾಗೂ ರೊಮ್ಯಾಂಟಿಕ್ ಸಾಂಗ್ ಟೀಸರ್ ನೋಡಿದ ಬಳಿಕ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ ಅನ್ನೋದು ಕನ್ಫರ್ಮ್ ಆಗಿದೆ. ಇಬ್ಬರೂ ಲುಕ್ ಕೂಡ ಹಾಗೇ ಇದೆ. ಇನ್ನು ಮದುವೆ ಆಗುವ ಸನ್ನಿವೇಶ ಹೈಲೈಟ್ ಆಗಿದೆ. ತಮ್ಮದೇ 'ರಾಣಾಬಾಲಿ' ಸಿನಿಮಾದ ಈ ರೊಮ್ಯಾಂಟಿಕ್ ದೃಶ್ಯಗಳಿಂದ ಪ್ರೇರಣೆ ಪಡೆದು ರಿಯಲ್ ಲೈಫ್‌ನಲ್ಲೂ ಮದುವೆ ಆಗಿದ್ದಾರಾ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಈ ರೊಮ್ಯಾಂಟಿಕ್ ಸಾಂಗ್‌ನಲ್ಲಿ ವಿಜಯ್ ದೇವರಕೊಂಡ ಮೀಸೆ ಬಿಟ್ಟು, ಸ್ವಲ್ಪ ಉದ್ದನೇ ಕೂದಲು ಬಿಟ್ಟು ರೇಷ್ಮೆ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಕೂಡ ರೇಷ್ಮೇ ಸೀರೆಯುಟ್ಟು ಮಿಂಚಿದ್ದಾರೆ. ಜೊತೆಗೆ ಕೆಲವು ರೊಮ್ಯಾಂಟಿಕ್ ಸನ್ನಿವೇಶಗಳು, ಇಬ್ಬರ ಸ್ಕ್ರೀನ್ ಕೆಮಿಸ್ಟ್ರಿಯನ್ನು ನೋಡಿ ನೋಡಿ ಇಬ್ಬರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗೇ ರಿಯಲ್ ಲೈಫ್ ಮ್ಯಾರೇಜ್ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.
ರಿಯಲ್ ಲೈಫ್‌ನಲ್ಲೂ ಹೆಚ್ಚು ಕಡಿಮೆ ಹೀಗೆ ವಿವಾಹವಾಗಿದ್ದಾರೆ. ಇಬ್ಬರ ಕಾಸ್ಟ್ಯೂಮ್ ಕೂಡ ಒಂದೇ ರೀತಿ ಇದ್ದು, ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಗೆ 'ರಾಣಾಬಾಲಿ' ಸಿನಿಮಾ ಅವರ ವೃತ್ತಿ ಬದುಕಿನಲ್ಲಿ ಎಂದೂ ಮರೆಯದ ಸಿನಿಮಾ ಅದೂ ಅಚ್ಚರಿ ಪಡಬೇಕಿಲ್ಲ. ಸದ್ಯ 'ರಾಣಾಬಾಲಿ' ಶುಭ ಕೋರಿದ್ದೇನೋ ಸರಿ. ಆದರೆ, ಇದು ಪರೋಕ್ಷವಾಗಿ ಸಿನಿಮಾ ಪ್ರಚಾರ ಆದಂತೆ ಆಗಿದೆ.
ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಇನ್ನೂ ಮದುವೆ ಸಂಭ್ರಮದಲ್ಲಿಯೇ ಇದ್ದಾರೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿಗೆ ಎಲ್ಲಾ ಚಿತ್ರರಂಗದಿಂದಲೂ ಗಣ್ಯರು ಆಗಮಿಸುವ ಸಾಧ್ಯತೆಯಿದೆ. ಹಾಗೇ ತೆಲಂಗಾಣ-ಆಂಧ್ರ ಪ್ರದೇಶದ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಗೂ ಉದ್ಯಮಿಗಳು ನವ ಜೋಡಿಗೆ ಶುಭಾಶಯ ಹೇಳಲಿದ್ದಾರೆ. ಸದ್ಯಕ್ಕೀಗ ಇಬ್ಬರೂ ಜೊತೆಯಾಗಿ ನಟಿಸುತ್ತಿರುವ 'ರಾಣಾಬಾಲಿ' ಬಗ್ಗೆ ಸಿನಿಮಾ ಬಗ್ಗೆ ಟಾಕ್ ಶುರುವಾಗಿದೆ.


Click it and Unblock the Notifications











