ರಶ್ಮಿಕಾ ಮಂದಣ್ಣ ಪದೇ ಪದೆ ಮದುವೆ ಬಗ್ಗೆನೇ ಪ್ರಸ್ತಾಪ: ಈಗ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ದೂರ ಆಗಿ ಹಲವು ವರ್ಷಗಳೇ ಆಗಿವೆ. ಮತ್ತೆ ಕನ್ನಡ ಸಿನಿಮಾಗಳತ್ತ ಮುಖ ಮಾಡುವ ಯಾವ ಲಕ್ಷಣನೂ ಕಾಣುತ್ತಿಲ್ಲ. ಇತ್ತ ಕನ್ನಡ ಸಿನಿಮಾ ಮಂದಿ ಅತ್ತ ಯೋಚನೆ ಕೂಡ ಮಾಡುತ್ತಿಲ್ಲ. ಸದ್ಯ ದಕ್ಷಿಣ ಭಾರತದ ದುಬಾರಿ ನಟಿಸಿ ಎನಿಸಿಕೊಂಡಿರುವ ರಶ್ಮಿಕಾ, ಸಿನಿಮಾಗಳಿಗಿಂತ ಟ್ರೋಲ್‌ಗಳಿಂದ, ಮದುವೆ ವಿಚಾರದಿಂದಲೇ ಸುದ್ದಿಯಲ್ಲಿ ಇರುತ್ತಾರೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಮದುವೆ ವಿಚಾರ ಇದ್ದಕ್ಕಿದ್ದ ಹಾಗೇ ಚರ್ಚೆಗೆ ಬಂದಿತ್ತು. ಅಲ್ಲಿಂದ ಶುರುವಾಗಿದ್ದು ಇನ್ನೂ ಮುಂದುವರೆದಿದೆ.

ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಅದಕ್ಕೆ ಟಾಲಿವುಡ್‌ನಲ್ಲಿ, ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳು. ಸದ್ಯ ಈ ಎರಡು ಚಿತ್ರರಂಗದಲ್ಲಿಯೇ ಹೆಚ್ಚು ಆಕ್ಟೀವ್ ಆಗಿರುವುದರಿಂದ ಅಲ್ಲಿಂದಲೇ ಒಂದಲ್ಲಾ ಒಂದು ಸುದ್ದಿ ಹರಿದು ಬರುತ್ತಲೇ ಇರುತ್ತೆ. ಕೆಲವು ದಿನಗಳ ಹಿಂದೆ ಆಗಿದ್ದು ಅದೆನೇ. ಬಾಲಿವುಡ್‌ನಿಂದ ರಶ್ಮಿಕಾ ಮದುವೆ ಮ್ಯಾಟರ್ ಹಾಗೇ ಹಾರಿ ಬಂದಿತ್ತು. ಅದಕ್ಕೀಗ ರಶ್ಮಿಕಾ ಸಮಜಾಯಿಷಿ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ.

 ರಶ್ಮಿಕಾ ಮಂದಣ್ಣ ಮದುವೆ ಪ್ರಸ್ತಾಪ

ರಶ್ಮಿಕಾ ಮಂದಣ್ಣ ಮದುವೆ ಪ್ರಸ್ತಾಪ

ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ 'ಆಡವಾಳ್ಳು ಮೀಕು ಜೊಹಾರ್ಲು' ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಮತ್ತೆ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಜೋರಾಗಿ ಹರಿದಾಡಿದ್ದ ಸುದ್ದಿ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ಈ ವೇಳೆ ರಶ್ಮಿಕಾ ಮದುವೆ ಬಗ್ಗೆ ಮತ್ತೆ ಮಾತಾಡಿದ್ದಾರೆ. " ನಾನು ಇನ್ನೂ ಮದುವೆ ಆಗುವ ಹುಡುಗನನ್ನು ಒಪ್ಪಿಕೊಂಡಿಲ್ಲ. ಅದಕ್ಕೆ ಇನ್ನೂ ಬಹಳನೇ ಸಮಯವಿದೆ." ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿಜಯ್ ದೇವರಕೊಂಡ ಹಾಗೂ ತನ್ನ ಮದುವೆ ಗಾಳಿ ಸುದ್ದಿ ಅಂತ ರಶ್ಮಿಕಾ ಮತ್ತೆ ಮತ್ತೆ ಹೇಳಿದ್ದಾರೆ.

 ಟೈಮ್‌ಪಾಸ್ ರೂಮರ್ ಎಂದಿದ್ದ ರಶ್ಮಿಕಾ

ಟೈಮ್‌ಪಾಸ್ ರೂಮರ್ ಎಂದಿದ್ದ ರಶ್ಮಿಕಾ

ತನ್ನ ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಕಳೆದ ವಾರವಷ್ಟೇ ಪ್ರತಿಕ್ರಿಯೆ ನೀಡಿದ್ದರು. ವಿಜಯ್ ದೇವರಕೊಂಡ ಹಾಗೂ ತನ್ನ ಮದುವೆ ಸುದ್ದಿ ಸುಳ್ಳು ಎಂಬಂತೆ ಉತ್ತರ ನೀಡಿದ್ದರು. " ಇದೆಲ್ಲಾ ಟೈಮ್‌ಪಾಸ್ ರೂಮರ್ ಅಷ್ಟೇ. ನನಗೆ ಮದುವೆ ಬಗ್ಗೆ ಯೋಚನೆ ಮಾಡುವುದಕ್ಕೆ ಇನ್ನೂ ಬಹಳನೇ ಸಮಯವಿದೆ" ಎಂದು ಹೇಳಿದ್ದರು. ಈಗ ಮತ್ತೆ ಮದುವೆ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ರಶ್ಮಿಕಾ ಹೀಗೆ ಪದೇ ಪದೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿ, ಸಿನಿಮಾರಂಗದಲ್ಲಿ ಇನ್ನೂ ಆಕ್ಟೀವ್ ಆಗಿ ಇರುತ್ತೇನೆ ಎಂಬ ಸಂದೇಶ ರವಾನೆ ಮಾಡಿದ್ದಾರೆ.

 ರಶ್ಮಿಕಾ- ವಿಜಯ್ ಮದುವೆ ಸ್ಟೋರಿ ಏನು?

ರಶ್ಮಿಕಾ- ವಿಜಯ್ ಮದುವೆ ಸ್ಟೋರಿ ಏನು?

ಕೆಲವೇ ವಾರಗಳ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಇದೇ ವರ್ಷ ಮದುವೆ ಆಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಇಬ್ಬರೂ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ತಾವು ಒಪ್ಪಿಕೊಂಡಿರುವ ಸಿನಿಮಾಗಳು ಮುಗಿದ ಬಳಿಕ ಮದುವೆ ಬಗ್ಗೆ ಆಲೋಚನೆ ಮಾಡುತ್ತಾರೆ ಎಂದು ಬಾಲಿವುಡ್‌ನಲ್ಲಿ ಸುದ್ದಿಯಾಗಿತ್ತು. ಆಗ ವಿಜಯ್ ದೇವರಕೊಂಡ ಟ್ವೀಟ್ ಮೂಲಕ "ಮಾಮೂಲಿನಂತೆ ಇದು ಸಹ ಅಸಂಬದ್ಧ" ಎಂದು ಪ್ರತಿಕ್ರಿಯಿಸಿದ್ದರು. ಈಗ ರಶ್ಮಿಕಾ ಪ್ರಕ್ರಿಯೆ ನೀಡುತ್ತಿದ್ದಾರೆ.

 ಸಿನಿಮಾ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿ

ಸಿನಿಮಾ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಮಂದಣ್ಣ ತನ್ನ ತೆಲುಗು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ನಟ ಶೆರ್ವಾನಂದ್ ಜೊತೆ ನಟಿಸಿರುವ 'ಆಡವಾಳ್ಳು ಮೀಕು ಜೊಹಾರ್ಲು' ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ನಾಳೆ (ಮಾರ್ಚ್ 03) ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ರಶ್ಮಿಕಾ ಈ ಸಿನಿಮಾ ಪ್ರಚಾರದ ಜೊತೆ ಜೊತೆಗೆ ತನ್ನ ಮದುವೆ ಬಗ್ಗೆನೂ ಕ್ಲಾರಿಟಿ ನೀಡುತ್ತಿದ್ದಾರೆ. ಅದಕ್ಕೆ ಟಾಲಿವುಡ್ ಸ್ವಕಾರ್ಯ ಸ್ವಾಮಿಕಾರ್ಯ ಎರಡನ್ನೂ ಒಟ್ಟಿಗೆ ಮಾಡಿಕೊಳ್ಳುತ್ತಿದ್ದಾರೆ ರಶ್ಮಿಕಾ ಎನ್ನುತ್ತಿದೆ.

More from Filmibeat

English summary
Rashmika agains talks about Marriage in Aadavallu Meeku Johaarlu promotion event. She said I haven’t fixed on the person to marry yet. I think there is a lot of time for that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X