Rashmika-Sita Ramam: ದಿಲ್ ಸೇ, ರೋಜಾ ನೆನಪಿಸಿದ ರಶ್ಮಿಕಾ ಹೊಸ ಸಿನಿಮಾ 'ಸೀತಾ ರಾಮಂ'

ಅದ್ಯಾಕೋ ರಶ್ಮಿಕಾ ಮಂದಣ್ಣ ಬಾಲಿವುಡ್ ನಟಿ ಆಲಿಯಾ ಭಟ್‌ರನ್ನೂ ಮೀರಿಸುವ ಹಾಗೆ ಕಾಣಿಸುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸದಾ ಸುದ್ದಿಯಲ್ಲಿದ್ದಾರೆ. ಒಂದೋ ಹೊಸ ಸಿನಿಮಾ ಸೆಟ್ಟೇರುತ್ತೆ. ಇಲ್ಲಾ ಸೆಟ್ಟೇರಿದ ಸಿನಿಮಾ ಸದ್ದು ಮಾಡುತ್ತೆ. ಅಸಲಿಗೆ ದಕ್ಷಿಣದಿಂದ ಉತ್ತರದವರೆಗೂ ಬರೀ ರಶ್ಮಿಕಾ ಮಂದಣ್ಣ ಒಬ್ಬರೇ ಸೌಂಡ್ ಮಾಡುತ್ತಿದ್ದಾರೆ.

Recommended Video

Rashmika Mandanna | Youtube ಚಾನೆಲ್ ಓಪನ್ ಮಾಡಿ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ ರಶ್ಮಿಕಾ

'ಪುಷ್ಪ 2' ಪ್ಯಾನ್ ಇಂಡಿಯಾ ಹಿಟ್ ಆಗಿದ್ದೇ ಆಗಿದ್ದು, ರಶ್ಮಿಕಾ ಮಂದಣ್ಣ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಇತ್ತ ಬಾಲಿವುಡ್, ಅತ್ತ ಟಾಲಿವುಡ್ ಮತ್ತೊಂದು ಕಡೆ ಕಾಲಿವುಡ್. ಬಹುತೇಕ ಎಲ್ಲಾ ವುಡ್‌ಗಳಲ್ಲಿಯೂ ರಶ್ಮಿಕಾ ಮಂದಣ್ಣ ಸದ್ದು ಮಾಡುತ್ತಲೇ ಇದ್ದಾರೆ. ಈಗ ರಶ್ಮಿಕಾ ಅಭಿನಯದ ಮತ್ತೊಂದು ಸಿನಿಮಾ ಸಿಕ್ಕಾ ಪಟ್ಟೆ ಕುತೂಹಲ ಕೆರಳಿಸಿದೆ. ಅದುವೇ 'ಸೀತಾ ರಾಮಂ'.

ರಶ್ಮಿಕಾ ಹೊಸ ಸಿನಿಮಾ 'ಸೀತಾ ರಾಮಂ'

ರಶ್ಮಿಕಾ ಹೊಸ ಸಿನಿಮಾ 'ಸೀತಾ ರಾಮಂ'

ರಶ್ಮಿಕಾ ಮಂದಣ್ಣ, ದುಲ್ಖರ್ ಸಲ್ಮಾನ್, ಮೃಣಾಲ್ ಠಾಕೂರ್ ಈ ಮೂವರ ಹೊಸ ಸಿನಿಮಾದ ಟೈಟಲ್‌ ರಿವಿಲ್ ಆಗಿದೆ. ರಾಮನವಮಿಯಂದೇ ಈ ಚಿತ್ರದ ಟೈಟಲ್ 'ಸೀತಾ ರಾಮಂ' ಎಂದು ಅನೌನ್ಸ್ ಮಾಡಿದ್ದಾರೆ. ಇದರೊಂದಿಗೆ ಚಿಕ್ಕದೊಂದು ಟೀಸರ್ ಕೂಡ ರಿಲೀಸ್ ಆಗಿದೆ. ಈ ಟೀಸರ್ ನೋಡಿದ್ಮೇಲೆ ದಕ್ಷಿಣ ಭಾರತದ ಸಿನಿಪ್ರಿಯರಲ್ಲಿ ಥ್ರಿಲ್ ಆಗಿದ್ದಾರೆ. ಅದಕ್ಕೆ ಕಾರಣ ರಶ್ಮಿಕಾ ಮಂದಣ್ಣ. ಈ ನಟಿ ಇದೇ ಮೊದಲ ಬಾರಿಗೆ ವಿಭಿನ್ನ ಲುಕ್‌ ಕೊಟ್ಟಿದ್ದು, ಮುಸ್ಲಿಂ ಯುವತಿಯ ಪಾತ್ರದಲ್ಲಿ ಒಂದು ಝಲಕ್ ಕೊಟ್ಟಿದ್ದಾರೆ.

ಕಿಕ್ ಕೊಡುತ್ತಿದೆ ರಶ್ಮಿಕಾ ಹೊಸ ಲುಕ್

ಕಿಕ್ ಕೊಡುತ್ತಿದೆ ರಶ್ಮಿಕಾ ಹೊಸ ಲುಕ್

'ಸೀತಾ ರಾಮಂ' ಟಾಲಿವುಡ್‌ನ ಹನು ರಾಘವಪುಡಿ ನಿರ್ದೇಶಿಸುತ್ತಿರುವ ಸಿನಿಮಾ. ಇದರಲ್ಲಿ ಮಲಯಾಳಂ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಪ್ರೇಮಿಗಳು. ಇವರ ಜೊತೆ ವಿಶಿಷ್ಟ ಪಾತ್ರದ ರಶ್ಮಿಕಾ ಮಂದಣ್ಣ ಸ್ಪೆಷಲ್ ಎಂಟ್ರಿಕೊಟ್ಟಿದ್ದಾರೆ. ವಿಶೇಷ ಪಾತ್ರ ಆಗಿದ್ದರಿಂದಲೇ ರಶ್ಮಿಕಾ ಪಾತ್ರ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೂವರೆಗೆ ರಶ್ಮಿಕಾ ನಾಯಕನ ಅರಗಿಣಿಯಾಗಿಯೇ ಕಾಣಿಸಿಕೊಂಡಿದ್ದರು. ಆದ್ರೀಗ ಇದೇ ಮೊದಲ ಬಾರಿಗೆ ಪ್ರಬುದ್ಧ ಪಾತ್ರದಲ್ಲಿ ನಟಿಸುತ್ತಿದ್ದು, ಅಫ್ರಿನ್ ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.

ಗಮನ ಸೆಳೆದ 'ಸೀತಾ ರಾಮಂ'

ಗಮನ ಸೆಳೆದ 'ಸೀತಾ ರಾಮಂ'

'ಸೀತಾ ರಾಮಂ' ಟಾಲಿವುಡ್ ಅಷ್ಟೇ ಅಲ್ಲ. ಇಡೀ ದಕ್ಷಿಣ ಭಾರತದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇಲ್ಲಿ ದುಲ್ಖರ್ ಸಲ್ಮಾನ್ ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದು, ಮೃಣಾಲ್ ಠಾಕೂಲ್ ಪ್ರೇಮಿಯಾಗಿ ನಟಿಸಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಇದೊಂದು ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಕಥೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಣಿರತ್ನಂ ಶೈಲಿಯ 'ದಿಲ್ ಸೇ' ಹಾಗೂ 'ರೋಜಾ' ಸಿನಿಮಾವನ್ನು ನೆನಪಿಸುತ್ತಿದೆ.

ಮೂರು ಭಾಷೆಯಲ್ಲಿ ಸಿನಿಮಾ ರಿಲೀಸ್

ಮೂರು ಭಾಷೆಯಲ್ಲಿ ಸಿನಿಮಾ ರಿಲೀಸ್

ರಶ್ಮಿಕಾ ಮಂದಣ್ಣ, ದುಲ್ಖರ್ ಸಲ್ಮಾನ್, ಮೃಣಾಲ್ ಠಾಕೂರ್ ಅಭಿನಯದ 'ಸೀತಾ ರಾಮಂ' ಸಿನಿಮಾವನ್ನು ಅಶ್ವಿನಿ ದತ್ ಹಾಗೂ ಪ್ರಿಯಾಂಕ ದತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿಚಿತ್ರ ಅಂದ್ರೆ, ರಶ್ಮಿಕಾ ಅಭಿನಯದ ಹೊರತಾಗಿಯೂ ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿಲ್ಲ. ಕೇವಲ ಮೂರು ಭಾಷೆಯಲ್ಲಷ್ಟೇ ರಿಲೀಸ್ ಆಗುತ್ತೆ ಎನ್ನಲಾಗಿದೆ.

More from Filmibeat

English summary
Rashmika Dulquer Salmaan And Jersey actress Mrunal Thakur Next Is Sita Ramam. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X