ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಪ್ಲ್ಯಾನ್ ಏನು? ಯಾವ್ಯಾವಾಗ ಏನೇನು ಶಾಸ್ತ್ರಗಳು ನಡೆಯುತ್ತೆ?
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅವರ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕೂಡ ಈ ಜೋಡಿಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರ ಮದುವೆ ಬಗ್ಗೆನೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಇಬ್ಬರ ಮದುವೆ ಮುಹೂರ್ತ ಹತ್ತಿರವಿದ್ದರೂ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎರಡೂ ಕುಟುಂಬಗಳೂ ಗೌಪ್ಯತೆಯನ್ನು ಕಾಪಾಡಿಕೊಂಡಿವೆ. ಖಾಸಗಿಯಾಗಿ ಇಬ್ಬರ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಕುಟುಂಬಗಳು ನಿರ್ಧರಿಸಿವೆ ಎಂದು ವರದಿಯಾಗಿದೆ. ಸರಳವಾಗಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ ಆಗುವುದಕ್ಕೆ ರಶ್ಮಿಕಾ ಹಾಗೂ ವಿಜಯ್ ನಿರ್ಧರಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರು ಮದುವೆ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಇಬ್ಬರೂ ಗುಟ್ಟಾಗಿ ಒಂದು ತಿಂಗಳಿನಿಂದ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮದುವೆ ಬೇಕಿರೋ ಉಡುಪುಗಳಿಂದ ಹಿಡಿದು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ಮಾಧ್ಯಮಗಳಿಗೆ ಚಿಕ್ಕದೊಂದು ಸುಳಿವು ಲೀಕ್ ಆಗದ ಹಾಗೆ ನೋಡಿಕೊಂಡಿದ್ದಾರೆ. ಹಾಗಿದ್ರೆ, ಇಬ್ಬರ ಮದುವೆ ಹೈಲೈಟ್ ಏನು? ಯಾವ್ಯಾವಾಗ ಏನೇನು ಶಾಸ್ತ್ರಗಳು ನಡೆಯುತ್ತೆ? ಇಲ್ಲಿದೆ ಡಿಟೈಲ್ಸ್.
ಮೊದಲ ಸಿನಿಮಾದಿಂದಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರ ಡೇಟಿಂಗ್ ಮ್ಯಾಟರ್ ಸದ್ದು ಮಾಡಿತ್ತು. ಆದರೆ, ಈ ಜೋಡಿ ಅಲ್ಲಿಂದಲೂ ಒಳ್ಳೆಯ ಸ್ನೇಹಿತರು ಎಂದು ತಳ್ಳಿ ಹಾಕುತ್ತಲೇ ಬಂದಿದ್ದರು. ಕೇಳಿದಾಗಲೆಲ್ಲ ಒಳ್ಳೆಯ ಸ್ನೇಹಿತರು ಎಂದು ಹೇಳಿ ಎಸ್ಕೇಪ್ ಆಗುತ್ತಿದ್ದರು. ಜಿಮ್‌ನಲ್ಲಿ, ಶಾಪಿಂಗ್ ಶಾಪ್‌ನಲ್ಲಿ, ವಿದೇಶ ಪ್ರಯಾಣ ಮಾಡುವಾಗ ಇಬ್ಬರೂ ಸಿಕ್ಕಿಬಿದ್ದಿದ್ದರು. ಆಗಲೂ ಒಪ್ಪಿಕೊಂಡಿಲ್ಲ. ಇಲ್ಲ.. ಇಲ್ಲ ಎನ್ನುತ್ತಲೇ ಕೊನೆಗೂ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ವಿವಾಹದ ಆರತಕ್ಷತೆ ಆಮಂತ್ರಣ ಪತ್ರಿಕೆ ಮಾಧ್ಯಮಗಳಿಗೆ ಲೀಕ್ ಆಗಿತ್ತು. ಆ ಬಳಿಕವಷ್ಟೇ ಮದುವೆಯ ಸುದ್ದಿ ಅಧಿಕೃತವಾಗಿ ಬಹಿರಂಗವಾಗಿದೆ. ಇಬ್ಬರ ಮದುವೆ ಖಾಸಗಿ ಕಾರ್ಯಕ್ರಮವಾಗಿದ್ದು, ಎರಡೂ ಕುಟುಂಬಗಳಿಂದ ಕೇವಲ 50-60 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿವರೆಗೂ ಟಾಲಿವುಡ್‌ನ ಗಣ್ಯರುಗೆ ಮದುವೆಗೆ ಆಹ್ವಾನ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ರಶ್ಮಿಕಾ ಹಾಗೂ ವಿಜಯ್ ಮದುವೆಗೂ ಮುಂಚೆ ನಡೆಯುವ ಶಾಸ್ತ್ರಗಳು ಫೆಬ್ರವರಿ 24 ರಿಂದಲೇ ಆರಂಭ ಆಗುತ್ತಿವೆ. ಫೆ.24ರಂದು ಹಳದಿ ಮತ್ತು ಮೆಹಂದಿ ಶಾಸ್ತ್ರ ನಡೆಯಲಿದೆ ಎನ್ನಲಾಗಿದೆ. ಇನ್ನು ಫೆಬ್ರವರಿ 25 ರಂದು ಸಂಗೀತ ಕಾರ್ಯಕ್ರಮವಿರುತ್ತೆ. ಕುಟುಂಬದ ಹಿರಿಯರು ಮತ್ತು ವೇದ ಬ್ರಾಹ್ಮಣರು ನಿರ್ಧರಿಸಿದ ಮುಹೂರ್ತದಲ್ಲಿ ಫೆಬ್ರವರಿ 26 ರಂದು ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ರಾಜಸ್ತಾನದ ಉದಯಪುರದಲ್ಲಿ ವಿವಾಹವಾದ ಬಳಿಕ ದಂಪತಿಗಳು ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ಬಳಿಕ ಬೆಂಗಳೂರು ಮತ್ತು ರಶ್ಮಿಕಾ ಅವರ ಹುಟ್ಟೂರಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಯಾಗಿದೆ. ಆ ಬಳಿಕ ವಿಜಯ್ ತಂದೆ ಗೋವರ್ಧನ್ ದೇವರಕೊಂಡ ಅವರ ಹುಟ್ಟೂರಿನಲ್ಲಿ ಕುಟುಂಬ ಸಮೇತ ಸತ್ಯನಾರಾಯಣ ವ್ರತದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆಪ್ತರು ಹಾಗೂ ಸಿನಿಮಾ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ.


Click it and Unblock the Notifications











