ಗೋವಾದಲ್ಲಿ ವಿಜಯ್ ದೇವರಕೊಂಡ ಜೊತೆ 'ಲೈಗರ್' ತುಣುಕು ನೋಡಿ ಕುಣಿದಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ಲೀಕ್!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಟಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಜೋಡಿ. ಈ ಜೋಡಿಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಈ ಜೋಡಿ ನಟಿಸಿದ ಎರಡೂ ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಈ ಜೋಡಿ ಮತ್ತೆ ನೋಡಲು ಸಿನಿಪ್ರೇಮಿಗಳು ಕಾದು ಕೂತಿದ್ದಾರೆ. ಆದರೆ, ಸದ್ಯಕ್ಕೆ ಒಟ್ಟಿಗೆ ನಟಿಸುವ ಸಾಧ್ಯತೆ ಕಡಿಮೆಯಿದೆ. ಆದರೆ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸಿನಿಮಾದಿಂದ ಹೇಗೆ ಸದ್ದು ಮಾಡುತ್ತಿವೆಯೋ ಹಾಗೇ ಒಟ್ಟಿಗೆ ಸುತ್ತಾಡಿ ಕೂಡ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಗೋವಾಗೆ ಹೋಗಿದ್ದರು. ಆಗ ವಿಜಯ್ ದೇವರಕೊಂಡ ಕುಟುಂಬದೊಂದಿಗೆ ಗೋವಾಗೆ ಹೋಗಿದ್ದಾರೆ ಎನ್ನುವ ಸುದ್ದಿ ಲೀಕ್ ಆಗಿತ್ತು. ಈಗ ಮತ್ತೊಂದು ಸಾಕ್ಷಿ ಸಿಕ್ಕಿದ್ದು, ಇಬ್ಬರು ಹೊಸ ವರ್ಷವನ್ನು ಜೊತೆಯಲ್ಲಿಯೇ ಸೆಲೆಬ್ರೆಟ್ ಮಾಡಿದ್ದಾರೆ ಎನ್ನುವುದಕ್ಕೆ ವಿಡಿಯೋವೊಂದು ಲೀಕ್ ಆಗಿದೆ.

ರಶ್ಮಿಕಾ-ವಿಜಯ್ ಗೋವಾ ಡೈರಿ

ವಿಜಯ್ ದೇವರಗೊಂಡ ಮತ್ತು ರಶ್ಮಿಕಾ ಮಂದಣ್ಣ ಹೊಸ ವರ್ಷವನ್ನು ಗೋವಾದಲ್ಲಿ ಸಂಭ್ರಮಿಸಿದ್ದಾರೆ. ಟಾಲಿವುಡ್ ಮಂದಿ ಮೆಚ್ಚಿದ ಈ ಜೋಡಿ ಗೋವಾದಲ್ಲಿ ಒಟ್ಟಿಗೆ ಹೊಸ ವರ್ಷ ಸಂಭ್ರಮಿಸಿದ ಸುದ್ದಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಲೀಕ್ ಆಗಿದ್ದು, ಹೊಸ ವರ್ಷದ ವೇಳೆ ವಿಜಯ್ ದೇವರಕೊಂಡ ನಟಿಸಿದ 'ಲೈಗರ್' ಸಿನಿಮಾದ ಫಸ್ಟ್ ಗ್ಲಿಮ್ಸ್ ನೋಡಿ ಹುಚ್ಚೆದ್ದು ಕುಣಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ವಿಜಯ್ ಕುಟುಂಬ ಹಾಗೂ ಸ್ನೇಹಿತರೊಂದಿಗೆ ರಶ್ಮಿಕಾ ಮಂದಣ್ಣ 'ಲೈಗರ್' ಫಸ್ಟ್ ಗ್ಲಿಮ್ಸ್ ವೀಕ್ಷಣೆ ಮಾಡಿದ್ದರು.

ವಿಜಯ್ ಕುಟುಂಬದೊಂದಿಗೆ ರಶ್ಮಿಕಾ ಊಟ

ಒಂದು ಕಡೆ ರಶ್ಮಿಕಾ ಮಂದಣ್ಣ 'ಲೈಗರ್' ಫಸ್ಟ್ ಗ್ಲಿಮ್ಸ್ ನೋಡಿ ಎಂಜಾಯ್ ಮಾಡುತ್ತಿರುವ ವಿಡಿಯೋ ಲೀಕ್ ಆಗಿದ್ದರೆ. ಇನ್ನೊಂದು ಕಡೆ ವಿಜಯ್ ದೇವರಕೊಂಡ ಅವರ ಕುಟುಂಬದೊಂದಿಗೆ ರಶ್ಮಿಕಾ ಕೂಡ ಊಟ ಮಾಡುತ್ತಿರುವ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಾಗೂ ಫೋಟೊಗಳನ್ನು ನೋಡುತ್ತಿದ್ದಂತೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

ರಶ್ಮಿಕಾ ವಿಜಯ್ ನಡುವೆ ಲವ್ವಿ ಡವ್ವಿ

ರಶ್ಮಿಕಾ ವಿಜಯ್ ನಡುವೆ ಲವ್ವಿ ಡವ್ವಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟಿಸಿದ ಮೊದಲ ಸಿನಿಮಾ 'ಗೀತಾ ಗೋವಿಂದಂ' ರಿಲೀಸ್ ಆಗುತ್ತಿದ್ದಂತೆ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಷಯ ಹರಿದಾಡಿತ್ತು. 'ಡಿಯರ್ ಕಾಮ್ರೆಡ್' ರಿಲೀಸ್ ಆಗುತ್ತಿದ್ದಂತೆ ಟಾಲಿವುಡ್‌ನಲ್ಲಿ ಗುಸು ಗುಸು ಶುರುವಾಗಿತ್ತು. ಈ ವೇಳೆ ಇಬ್ಬರ ಸಂಬಂಧದ ಬಗ್ಗೆ ರಶ್ಮಿಕಾ ಮಂದಣ್ಣ ಮನ ಬಿಚ್ಚಿ ಮಾತಾಡಿದ್ದರು. " ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ನನಗೆ ಅನಿಸುತ್ತದೆ. ತೆರೆಯ ಹಿಂದೆ ವಿಜಯ್ ದೇವರಕೊಂಡ ನನ್ನ ಬೆಸ್ಟ್ ಫ್ರೆಂಡ್. ನಮ್ಮಿಬ್ಬರ ಎನರ್ಜಿ ಹೊಂದಾಣಿಕೆಯಾಗುತ್ತೆ. ನಮ್ಮಿಬ್ಬರ ಕೆಮಿಸ್ಟ್ರಿ ವರ್ಕ್ ಮಾಡುವುದಕ್ಕೆ ನಾವು ಕಷ್ಟಪಡಬೇಕಿಲ್ಲ." ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು.

ಲೈಗರ್ ಬಳಿಕ ಮೂರನೇ ಸಿನಿಮಾ?

ಲೈಗರ್ ಬಳಿಕ ಮೂರನೇ ಸಿನಿಮಾ?

ಟಾಲಿವುಡ್‌ನ ಹಿಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೂರನೇ ಸಿನಿಮಾಗಾಗಿ ತೆಲುಗು ಮಂದಿ ಎದುರು ನೋಡುತ್ತಿದ್ದಾರೆ. ಆದರೆ, ಈ ಜೋಡಿ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. " ನಮ್ಮಿಬ್ಬರ ಮೂರನೇ ಸಿನಿಮಾ ಬಗ್ಗೆ ನೀವು ವಿಜಯ್ ದೇವರಕೊಂಡರನ್ನೇ ಕೇಳಬೇಕು. ವಿಜಯ್ 'ಲೈಗರ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. " ಎಂದು ರಶ್ಮಿಕಾ ಮಂದಣ್ಣ ಮೂರನೇ ಸಿನಿಮಾ ಬಗ್ಗೆ ಮಾತಾಡಿದ್ದರು.

More from Filmibeat

English summary
Rashmika Mandanna enjoys Liger fist gilms with Vijay Deverakonda in Goa video leaked. A video of Rashmika cheering for Vijay as she watches Liger first glims with his friends and family has surfaced on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X