ಕುಂಟುತ್ತಾ ನಡೆದಾಡಲು ಪರದಾಡುತ್ತಿದ್ದ ರಶ್ಮಿಕಾ ಸಹಾಯಕ್ಕೆ ಬಾರದ ವಿಜಯ್ ದೇವರಕೊಂಡ: ಇದೆಂಥಾ ಪರಿಸ್ಥಿತಿ?

ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕಾಲಿಗೆ ಏಟು ಮಾಡಿಕೊಂಡಿದ್ದರು. ನಡೆದಾಡುವುದಕ್ಕೂ ಪರದಾಡುತ್ತಿರುವ ರಶ್ಮಿಕಾ 'ಛಾವಾ' ಸಿನಿಮಾದ ಇವೆಂಟ್‌ಗೂ ಕುಂಟುತ್ತಲೇ ವೇದಿಕೆಗೆ ಬಂದಿದ್ದರು. ತನ್ನ ಕಾಲಿಗೆ ಗಂಭೀರ ಏಟು ಬಿದ್ದಿದ್ದನ್ನು ಸ್ವತ: ರಶ್ಮಿಕಾ ಮಂದಣ್ಣ ಅವರೇ ತನ್ನ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈಗೊಂದು ವಿಡಿಯೋ ಹರಿದಾಡುತ್ತಿದೆ. ಅದರಲ್ಲೂ ರಶ್ಮಿಕಾ ನಡೆದಾಡುವುದಕ್ಕೆ ಪರದಾಡುತ್ತಿದ್ದಾರೆ.

ಆದರೆ, ವಿಡಿಯೋ ವೈರಲ್ ಆಗುತ್ತಿರೋದು ರಶ್ಮಿಕಾ ಮಂದಣ್ಣ ಅವರದ್ದಾದರೂ, ಟ್ರೋಲ್ ಆಗುತ್ತಿರೋದು ಮಾತ್ರ ವಿಜಯ್ ದೇವರಕೊಂಡ. ಈ ವಿಡಿಯೋ ನೋಡಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಹಾಗೂ ನೆಟ್ಟಿಗರು ವಿಜಯ್ ದೇವರಕೊಂಡಗೆ ಲೆಫ್ಟ್‌ ಅಂಡ್ ರೈಟ್ ತೆಗೆದುಕೊಂಡಿದ್ದಾರೆ. ಕೆಲವರಂತೂ ವಿಜಯ್ ದೇವರಕೊಂಡ ಮೇಲೆ ಬೇಸರ ಹೊರ ಹಾಕಿದ್ದಾರೆ.

Rashmika Mandanna fans Criticized Vijay Deverakonda for not helping her due to leg injury

ಅಷ್ಟಕ್ಕೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎಂದರೆ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆ ಒಂದಿಷ್ಟು ಮಂದಿ ಸಹಾಯಕರು ಸ್ಟೋರ್ ಒಂದರಿಂದ ಹೊರ ಬರುತ್ತಾರೆ. ಈ ವೇಳೆ ಕುಂಟುತ್ತಾ ನಡೆದಾಡುವುದಕ್ಕೆ ಪರದಾಡುತ್ತಿದ್ದ ರಶ್ಮಿಕಾ ಸಹಾಯಕ್ಕೆ ವಿಜಯ್ ಬಾರದೇ ತನ್ನಷ್ಟಕ್ಕೆ ಹೋಗಿ ಕಾರಿನ ಒಳಗೆ ಕೂತು ಕೊಳ್ಳುತ್ತಾರೆ. ಇದನ್ನು ನೋಡಿ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಅಷ್ಟಕ್ಕೂ ಏನಿದು ಘಟನೆ? ನೆಟ್ಟಿಗರು ವಿಜಯ್‌ ದೇವರಕೊಂಡರನ್ನು ಟ್ರೋಲ್ ಮಾಡುತ್ತಿರುವುದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ಮಾಡಿದ್ದಾರೋ ವದಂತಿಗಳು ಸಾಕಷ್ಟು ಬಾರಿ ಕೇಳಿ ಬಂದಿದೆ. ಇನ್ನೂ ಈ ವದಂತಿಗಳಿಗೆ ಬರುತ್ತಲೇ ಇವೆ. ಆದರೆ, ರಶ್ಮಿಕಾ ಮಂದಣ್ಣ ಆಗಲಿ, ವಿಜಯ್ ದೇವರಕೊಂಡ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ನೆಟ್ಟಿಗರೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂದು ಸಾಕ್ಷಿ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಪ್ರೂವ್ ಮಾಡುತ್ತಿದ್ದಾರೆ. ಈಗ ಇಬ್ಬರೂ ಒಂದು ವಿಡಿಯೋದಲ್ಲಿ ಜೊತೆಗಾಗಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಈಗ ಚರ್ಚೆಯಲ್ಲಿದೆ.

Rashmika Mandanna fans Criticized Vijay Deverakonda for not helping her due to leg injury

ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸ್ಟೋರ್ ಒಂದರ ಮುಂದೆ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಹೊರಬರುವಾಗ ವಿಜಯ್ ದೇವರಕೊಂಡ ತನ್ನ ಪಾಡಿಗೆ ತಾನು ಬಂದು ಕಾರನ್ನು ಹತ್ತಿ ಕೂರುತ್ತಾರೆ. ಆದರೆ, ಹಿಂದಿನಿಂದ ರಶ್ಮಿಕಾ ಮಂದಣ್ಣ ಕಷ್ಟ ಪಟ್ಟು ನಡೆದುಕೊಂಡು ಬರುತ್ತಿರುತ್ತಾರೆ. ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ನಡೆದಾಡಲು ಪರದಾಡುತ್ತಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಸಹಾಯ ಮಾಡದೇ ಇರುವುದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಜೊತೆ ಅವರ ಕೈ ಹಿಡಿದುಕೊಂಡು ಬಂದು ಕಾರಿನಲ್ಲಿ ಕೂರಿಸುತ್ತಾರೆಂದು ಭಾವಿಸಿದ್ದರು. ಆದರೆ, ವಿಜಯ್ ದೇವರಕೊಂಡ ಆ ಬಗ್ಗೆ ಯೋಚನೆ ಮಾಡದೆ ಸೀದಾ ಬಂದು ಕಾರಿನಲ್ಲಿ ಕೂರುತ್ತಾರೆ. ಇದು ಯಾಕೋ ನೆಟ್ಟಿಗರಿಗೆ ಹಿಡಿಸಲಿಲ್ಲ. ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. " ಆಕೆಯನ್ನು ಕಾರಿನಲ್ಲಿ ಕೂರಿಸುವುದಕ್ಕೂ ಅವನು ಸಹಾಯ ಮಾಡಲಿಲ್ಲ." ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು " ಲೈಗರ್ ಸಹಾಯ ಮಾಡಬಹುದಿತ್ತು" ಎಂದಿದ್ದಾರೆ. " ಸೂಕ್ಷ್ಮತೆಯಿಲ್ಲ" ಎಂದು ಮತ್ತೊಬ್ಬರು ಗರಂ ಆಗಿದ್ದಾರೆ.

ಇತ್ತ ರಶ್ಮಿಕಾ ಮಂದಣ್ಣ ಕೂಡ ಕುಂಟುತ್ತಲೇ 'ಛಾವಾ' ಇವೆಂಟ್‌ಗೆ ಬಂದಿದ್ದಕ್ಕೂ ಟ್ರೋಲ್ ಆಗಿದ್ದರು. ಒಟ್ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ.

More from Filmibeat

English summary
Rashmika Mandanna fans Criticized Vijay Deverakonda for not helping her due to leg injury. Watch video:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X