twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್‌ ಅವಧಿಯಲ್ಲಿ ರಶ್ಮಿಕಾ ಮಂದಣ್ಣ ಹೊಸ ಪಾಠ ಕಲಿಯುತ್ತಿದ್ದಾರೆ...

    |

    ಲಾಕ್‌ಡೌನ್ ಅವಧಿಯನ್ನು ಕಳೆಯಲು ಒಬ್ಬೊಬ್ಬರು ಒಂದೊಂದು ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸೆಲೆಬ್ರಿಟಿಗಳು ವ್ಯಾಯಾಮ ಮಾಡುವುದು, ಹೊಸಬಗೆಯ ಅಡುಗೆ ಪ್ರಯತ್ನಿಸುವುದು, ಫ್ಯಾನ್ಸ್‌ ಜತೆಗೆ ಲೈವ್ ಮಾತುಕತೆ ನಡೆಸುವುದು ಮುಂತಾದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ತಾವು ಮಾಡುತ್ತಿರುವ ಚಟುಚಟಿಕೆಗಳನ್ನು ನೀವೂ ಮಾಡಬಹುದು ಎಂದು ಸಲಹೆ ನೀಡುತ್ತಿದ್ದಾರೆ.

    Recommended Video

    ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

    ಆದರೆ, ನಟಿ ರಶ್ಮಿಕಾ ಮಂದಣ್ಣ, ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆಗೊಂದು ಈಗೊಂದು ಫೋಟೊಗಳನ್ನು ಹಾಕಿರುವುದು ಬಿಟ್ಟರೆ ಬೇರಾವ ಚಟುವಟಿಕೆಗಳಲ್ಲಿಯೂ ಅವರು ಭಾಗಿಯಾಗುತ್ತಿಲ್ಲ. ಹಾಗಿದ್ದಾರೆ ರಶ್ಮಿಕಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ. ಕನ್ನಡದವರಾದರೂ ರಶ್ಮಿಕಾ ಈಗ ಗುರುತಿಸಿಕೊಂಡಿರುವುದು ತೆಲುಗು ಚಿತ್ರರಂಗದಲ್ಲಿ. ಅಲ್ಲಿ ಅಪಾರ ಅಭಿಮಾನಿಗಳನ್ನು ಕೂಡ ಅವರು ಸಂಪಾದಿಸಿದ್ದಾರೆ. ಮುಂದೆ ಓದಿ...

    'ಆ ಪಾತ್ರ ನನ್ನಿಂದ ಮಾಡಲು ಆಗೊಲ್ಲ' ಎಂದು ಬಾಲಿವುಡ್ ಸಿನಿಮಾ ತಿರಸ್ಕರಿಸಿದ್ದ ರಶ್ಮಿಕಾ ಮಂದಣ್ಣ'ಆ ಪಾತ್ರ ನನ್ನಿಂದ ಮಾಡಲು ಆಗೊಲ್ಲ' ಎಂದು ಬಾಲಿವುಡ್ ಸಿನಿಮಾ ತಿರಸ್ಕರಿಸಿದ್ದ ರಶ್ಮಿಕಾ ಮಂದಣ್ಣ

    ಅಲ್ಲು ಅರ್ಜುನ್, ರಶ್ಮಿಕಾ ನಟನೆ

    ಅಲ್ಲು ಅರ್ಜುನ್, ರಶ್ಮಿಕಾ ನಟನೆ

    ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ತಿಳಿದಿರುವ ಸಂಗತಿ. ಅಲ್ಲು ಅರ್ಜುನ್ ನಾಯಕರಾಗಿರುವ ಈ ಚಿತ್ರದ ಪೋಸ್ಟರ್‌ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಈ ಚಿತ್ರ ಸಾಕಷ್ಟು ಚರ್ಚೆಯಲ್ಲಿದೆ.

    ಚಿತ್ತೂರು ಭಾಷೆಯ ಶೈಲಿ

    ಚಿತ್ತೂರು ಭಾಷೆಯ ಶೈಲಿ

    ಈ ಚಿತ್ರದ ಬಹುತೇಕ ಭಾಗ ಆಂಧ್ರದ ಚಿತ್ತೂರು ಜಿಲ್ಲೆಯ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ಭಾಷೆಯೂ ಪ್ರಾದೇಶಿಕವಾಗಿ ತನ್ನದೇ ವಿಭಿನ್ನ ಶೈಲಿ ಹೊಂದಿರುವುದು ಸಹಜ. ಹಾಗೆಯೇ ಚಿತ್ತೂರು ಜಿಲ್ಲೆಯ ತೆಲುಗು ಭಾಷೆ ವಿಭಿನ್ನ ಉಚ್ಚಾರಣಾ ಶೈಲಿಯನ್ನು ಹೊಂದಿದೆ. ರಶ್ಮಿಕಾ ಆ ಭಾಷಾ ಶೈಲಿಯನ್ನು ಕಲಿಯುತ್ತಿದ್ದಾರಂತೆ.

    'ಆಚಾರ್ಯ'ದಲ್ಲಿ ರಾಮ್ ಚರಣ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?'ಆಚಾರ್ಯ'ದಲ್ಲಿ ರಾಮ್ ಚರಣ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?

    ರಶ್ಮಿಕಾಗೆ ಠಿಪ್ಪಣಿ ನೀಡಿದ ಸುಕುಮಾರ್

    ರಶ್ಮಿಕಾಗೆ ಠಿಪ್ಪಣಿ ನೀಡಿದ ಸುಕುಮಾರ್

    'ಪುಷ್ಪ' ಚಿತ್ರದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎನ್ನುವುದು ನಿರ್ದೇಶಕ ಸುಕುಮಾರ್ ಬಯಕೆ. ಅದಕ್ಕಾಗಿ ಖ್ಯಾತನಾಮರ ತಾರಾಬಳಗವನ್ನೇ ಸೇರಿಸಲು ಉದ್ದೇಶಿಸಿದ್ದಾರೆ. ಹಾಗೆಯೇ ಪ್ರಾದೇಶಿಕತೆಯ ಮಹತ್ವಕ್ಕೂ ಆದ್ಯತೆ ನೀಡಿದ್ದಾರೆ. ಚಿತ್ತೂರು ಭಾಗದ ಭಾಷಾ ಶೈಲಿಯನ್ನು ಕಿಂಚಿತ್ತೂ ಕುಂದಾಗದಂತೆ ಬಳಸಬೇಕು ಎಂದಿರುವ ಅವರು ರಶ್ಮಿಕಾ ಮಂದಣ್ಣಗೆ ಕಥೆ ಹಾಗೂ ಆ ಭಾಷಾ ಶೈಲಿಯನ್ನು ಹೇಗೆ ಕಲಿಯಬೇಕು ಎಂಬುದಕ್ಕೆ ಕೆಲವು ಠಿಪ್ಪಣಿಗಳನ್ನು ಕಲಿಸಿದ್ದಾರಂತೆ.

    ಭಾಷೆ ಕಲಿಕೆಯಲ್ಲಿ ಮಗ್ನ

    ಭಾಷೆ ಕಲಿಕೆಯಲ್ಲಿ ಮಗ್ನ

    ಹೇಗೂ ಲಾಕ್‌ಡೌನ್ ಇರುವುದರಿಂದ ರಶ್ಮಿಕಾ ಬಿಡುವಾಗಿದ್ದಾರೆ. ಕೊಡಗಿನಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ಅವರು ತಮ್ಮ ತೆಲುಗು ಜ್ಞಾನವನ್ನು ಉತ್ತಮಪಡಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೂ ಮುನ್ನ ಚಿತ್ತೂರು ಭಾಷೆಯನ್ನು ಕರಗತಮಾಡಿಕೊಳ್ಳುವುದು ರಶ್ಮಿಕಾ ಬಯಕೆ.

    English summary
    Actress Rashmika Mandanna is learning Chittoor Telugu dialect for her upcoming Pushpa movie.
    Saturday, April 18, 2020, 10:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X