"ನನಗೆ ಮಕ್ಕಳಾಗ್ತಾವೆ ಅಂತ ನನಗೆ ಗೊತ್ತು";ಮದುವೆಗೂ ಮುನ್ನ ತಾಯ್ತನ ಕನವರಿಸಿದ ರಶ್ಮಿಕಾ ಮಂದಣ್ಣ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಯಾವುದಾದರೂ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ತಮ್ಮ ವೃತ್ತಿ ಜೀವನ, ಇಲ್ಲವೇ ವೈಯಕ್ತಿಕ ಜೀವನ ಸದಾ ಚರ್ಚೆಯಲ್ಲಿ ಇರುತ್ತೆ. ಇತ್ತೀಚೆಗೆ ರಶ್ಮಿಕಾ ನಟಿಸಿದ 'ಥಾಮಾ' ಸಿನಿಮಾ ರಿಲೀಸ್ ಆಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಅದೇ ಇನ್ನೊಂದು ಕಡೆ ಮತ್ತೊಂದು ಸಿನಿಮಾ 'ದಿ ಗರ್ಲ್‌ಫ್ರೆಂಡ್' ಬಿಡುಗಡೆಗೆ ರೆಡಿಯಗಿದೆ.

ಒಂದು ಸಿನಿಮ ರಿಲೀಸ್ ಆಗುತ್ತಿದ್ದಂತೆ ಇನ್ನೊಂದು ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ವೃತ್ತಿ ಜೀವನವನ್ನು ಹೊರತು ಪಡಿಸಿದರೆ, ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಸದ್ದಿಲ್ಲದೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಜೋರಾಗಿಯೇ ಸದ್ದು ಮಾಡಿತ್ತು. ಈ ಬಗ್ಗೆ ರಶ್ಮಿಕಾ ತಮ್ಮ ಸಂದರ್ಶನದಲ್ಲಿ ಎಲ್ಲಿಯೂ ಕ್ಲಾರಿಟಿ ಕೊಟ್ಟಿಲ್ಲ.

Rashmika Mandanna opened up about motherhood marriage and her future plans

ಇತ್ತೀಚೆಗೆ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರಚಾದಲ್ಲಿ ರಶ್ಮಿಕಾ ಮಂದಣ್ಣಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೂ ಅಡ್ಡ ಗೋಡ ಮೇಲೆ ದೀಪವಿಟ್ಟು ಆ ಪ್ರಶ್ನೆಗೆ ಗೊಂದಲದ ಉತ್ತರ ಕೊಟ್ಟಿದ್ದರೆ. ಆದರೆ, ಮುಂದಿನ ವರ್ಷ ಮದುವೆ ಆಗುತ್ತೇನೆಂಬ ಸುಳುವ ಕೊಟ್ಟಿದ್ದಾರೆ. ಇದರ ಜೊತೆ ಮಕ್ಕಳು ತಾಯ್ತನದ ಬಗ್ಗೆನೂ ರಶ್ಮಿಕಾ ಮಂದಣ್ಣ ಮಾತಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'ಗೀತಾ ಗೋವಿಂದಂ' ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ಸುದ್ದಿಯೇ ಹಾಟ್ ಟಾಪಿಕ್. ಇತ್ತೀಚೆಗೆ ಟಾಲಿವುಡ್ ಅಂಗಳಲ್ಲಿ ಇಬ್ಬರೂ ಗುಟ್ಟಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಸುದ್ದಿ ಹರಿದಾಡಿತ್ತು. ಆದ್ರೀಗ 'ಗುಲ್ಟೆ' ನೀಡಿದ ಸಂದರ್ಶನದಲ್ಲಿ ತನ್ನ ಭವಿಷ್ಯದ ಮಕ್ಕಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಈ ಸಂದರ್ಶನ ನೋಡಿ ಮದುವೆಗೂ ಮುನ್ನವೇ ಮಕ್ಕಳ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಮದುವೆ ಆಗುತ್ತಾರೆಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

Rashmika Mandanna opened up about motherhood marriage and her future plans

ಅಷ್ಟಕ್ಕೂ ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಏನು ಹೇಳಿದ್ದಾರೆಂದು ನೋಡುವುದಾರೇ, "ನಾನು ತಾಯಿನೇ ಆಗಿಲ್ಲ. ಆದರೆ, ನನಗೆ ಈಗಾಗಲೇ ಆ ಫೀಲಿಂಗ್ ಬಂದಿದೆ. ನನಗೆ ಮಕ್ಕಳಾಗುತ್ತವೆ ಅನ್ನೋದು ನನಗೆ ಗೊತ್ತಿದೆ. ಅದು ನನಗೆ ತುಂಬಾನೇ ಇಷ್ಟ. ಇನ್ನೂ ಪ್ರಪಂಚಕ್ಕೆ ಕಾಲಿಡದ ಆ ಪುಟ್ಟ ಕಂದಮ್ಮಗಳ ಬಗ್ಗೆ ನನಗೆ ಈಗಲೇ ಏನೋ ಸ್ಟ್ರಾಂಗ್ ಫೀಲಿಂಗ್ ಇದೆ. ಅವರಿಗಾಗಿ ಏನು ಬೇಕಾದರೂ ಮಾಡಬೇಕು ಅಂತ ಅನಿಸುತ್ತಿದೆ. ಅವರು ಸೇಫ್ ಆಗಿ ಇರುವಂತೆ ನೋಡಿಕೊಳ್ಳಬೇಕು. ಅವರಿಗಾಗಿ ನಾನು ಯುದ್ಧ ಮಾಡಬೇಕಾಗಿ ಬಂದರೂ ಅದಕ್ಕೆ ಫಿಟ್ ಆಗಿರಬೇಕು. ನಾನು ಈಗಾಗಲೇ ಆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ." ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

ಹಾಗೇ ತನ್ನ ಭವಿಷ್ಯದ ಪ್ಲ್ಯಾನ್ ಏನು ಅನ್ನೋದನ್ನು ರಿವೀಲ್ ಮಾಡಿದ್ದಾರೆ. " 20 ರಿಂದ 30 ವರ್ಷ ನಾನು ತಲೆ ಕೆಳಗೆ ಹಾಕಿಕೊಂಡು ಕೆಲಸ ಮಾಡಬೇಕು ಅನ್ನೋದು ನನ್ನ ತಲೆಯಲ್ಲಿ ಇತ್ತು. ಸಮಾಜ ಕೂಡ ಅದನ್ನೇ ನಿಮ್ಮ ತಲೆಯಲ್ಲಿ ತುಂಬಿದೆ. ನಾವು ಬದುಕಬೇಕು ಅಂದರೆ, ನಾವು ಹಣವನ್ನು ಗಳಿಸಬೇಕು. 30 ರಿಂದ 40 ಕೆಲಸವನ್ನು ಬ್ಯಾಲೆನ್ಸ್ ಮಾಡುವುದೆಂದು ನನಗೆ ಗೊತ್ತಿದೆ. ಇದಾಗುತ್ತೆ ಎಂದು ನಾನು ಭರವಸೆ ಕೊಡುತ್ತೇನೆ. 40ರ ಬಳಿಕ ಏನು ಅನ್ನೋದನ್ನು ನಾನು ಇನ್ನೂ ಯೋಚನೆ ಮಾಡಿಲ್ಲ." ಎಂದು ಹೇಳಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆಂಬ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಸುಳಿವು ಬಿಟ್ಟು ಕೊಟ್ಟಿಲ್ಲ.

More from Filmibeat

English summary
Rashmika Mandanna opened up about motherhood, marriage and her future plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X