'ಭೂಲ್‌ಭುಲಯ್ಯ' ಸಿನಿಮಾದ ಹೀರೊ ಜೊತೆ ರಶ್ಮಿಕಾ ಹೊಸ ಸಿನಿಮಾ

ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ನಟಿಸ್ತಿರೋದು ಗೊತ್ತೇ ಇದೆ. ಒಂದರ ಹಿಂದೊಂದು ಸಿನಿಮಾಗಳು ರಶ್ಮಿಕಾರನ್ನು ಕೈ ಬೀಸಿ ಕರೆಯುತ್ತಲೇ ಇದೆ. ಅದಕ್ಕೆ ರಶ್ಮಿಕಾ ಕೂಡ ಬಹುತೇಕ ಮುಂಬೈನಲ್ಲಿಯೇ ಸೆಲಟ್ ಆಗ್ಬಿಟ್ಟಿದ್ದಾರೆ.

ಬಾಲಿವುಡ್‌ನಲ್ಲಿಯೇ ಮನೆ ಹುಡುಕಿ ಬಹುತೇಕ ಅಲ್ಲೇ ನಲೆಸುತ್ತಿರೋ ವಿಷಯನೂ ಗೊತ್ತಿದೆ. ಹಾಗಿದ್ದರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಿಲ್ವಾ? ಅನ್ನೋ ಪ್ರಶ್ನೆ ಬರಬಹುದು. ಸದ್ಯಕ್ಕೆ ನೋಡುವುದಾದರೆ, ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುತ್ತಿಲ್ಲ. ಇವರ ಕೈಯಲ್ಲಿ ಕೇವಲ ಎರಡು ಸಿನಿಮಾಗಳು ಮಾತ್ರ ಇವೆ. ಅಲ್ಲದೆ ಮತ್ತೊಂದು ಬಾಲಿವುಡ್‌ ಸಿನಿಮಾ ಸಿಕ್ಕಿರೋದ್ರಿಂದ ಹೊಸ ದಕ್ಷಿಣ ಸಿನಿಮಾದ ಸಿನಿಮಾ ಒಪ್ಪಿಕೊಳ್ಳುವುದು ಅನುಮಾನ.

ಕಾರ್ತಿಕ್ ಆರ್ಯನ್ ಜೊತೆ ರಶ್ಮಿಕಾ ಹೊಸ ಸಿನಿಮಾ

ಕನ್ನಡ ಸಿನಿಮಾದಿಂದ ಆರಂಭವಾದ ರಶ್ಮಿಕಾ ಪಯಣ ಈಗ ಬಾಲಿವುಡ್‌ವರೆಗೂ ಹೋಗಿದೆ. ರಶ್ಮಿಕಾ ಬಾಲಿವುಡ್‌ನಲ್ಲಿ ಮೂರು ಸಿನಿಮಾ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದ್ರೆ, ಈಗ ನಾಲ್ಕನೇ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೂ ಬಾಲಿವುಡ್‌ನಲ್ಲಿ 'ಭುಲ್ ಭುಲಯ್ಯ' ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ನಟ ಕಾರ್ತಿಕ್‌ ಆರ್ಯನ್‌ ಜೊತೆ ನಟಿಸಲಿದ್ದಾರೆ.

Rashmika Mandanna Teams Up With Bollywood Star Karthik Aryan

ರಶ್ಮಿಕಾಗೆ ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಜಾಸ್ತಿ ಇದೆ ಅನ್ನೋದಕ್ಕೆ ಇದೇ ಸಾಕ್ಷಿ. ರಶ್ಮಿಕಾ ಅಭಿನಯದ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. ಆಗಲೇ ನ್ಯಾಷನಲ್ ಕ್ರಶ್ ನಾಲ್ಕನೇ ಬಾಲಿವುಡ್ ಸಿನಿಮಾವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ಮತ್ತೊಂದು ಫ್ರೆಶ್ ಜೋಡಿ ಸಿಕ್ಕಂತಾಗಿದೆ.

ಕಾರ್ತಿಕ್ ಬಾಲಿವುಡ್‌ನ ಸಕ್ಸಸ್‌ಫುಲ್ ನಟ

ಕಾರ್ತಿಕ್ ಆರ್ಯನ್ ಬಾಲಿವುಡ್‌ ಮರ್ಯಾದೆ ಉಳಿಸಿದ ನಟ. ಸೂಪರ್‌ಸ್ಟಾರ್ ಸಿನಿಮಾ ನೆಲಕ್ಕಚ್ಚುತ್ತಿರುವಾಗ ಕಾರ್ತಿಕ್ ಆರ್ಯನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸಂಕಷ್ಟದಲ್ಲೂ 'ಭುಲ್ ಭುಲಯ್ಯ 2' ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿತ್ತು. ಈ ಬೆನ್ನಲ್ಲೇ ಬಾಲಿವುಡ್‌ನಲ್ಲಿ ಕಾರ್ತಿಕ್‌ಗೆ ಬೇಡಿಕೆ ಹೆಚ್ಚಾಗಿದೆ.

ಇತ್ತ ಕಾರ್ತಿಕ್ ಆರ್ಯನ್ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ರಶ್ಮಿಕಾ ಕೂಡ ಹೊಸ ಪ್ರಾಜೆಕ್ಟ್‌ಗಳಿಗೆ ಜೈ ಎನ್ನುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ.

Rashmika Mandanna Teams Up With Bollywood Star Karthik Aryan

ಬ್ಯಾಕ್ ಟು ಬ್ಯಾಕ್ ಸಿನಿಮಾ

'ಪುಷ್ಪ' ರಿಲೀಸ್‌ಗೂ ಮುನ್ನವೇ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಕಾಲಿಟ್ಟಾಗಿತ್ತು. ಅದ್ಯಾವಾಗ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಫೇಮಸ್ ಆಯ್ತು. ಅಲ್ಲಿಂದ ಮತ್ತಷ್ಟು ಆಫರ್‌ಗಳು ರಶ್ಮಿಕಾರನ್ನು ಹುಡುಕಿಕೊಂಡು ಬಂದಿವೆ. ಹೀಗಾಗಿ ಸದ್ಯ 4 ಸಿನಿಮಾಗಳು ಇವರ ಕೈಯಲ್ಲಿವೆ.

ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಮಿಷನ್ ಮಜ್ನು', ಅಮಿತಾಬ್ ಬಚ್ಚನ್ ಜೊತೆ 'ಗುಡ್ ಬೈ' ಹಾಗೇ ರಣ್‌ಬೀರ್ ಕಪೂರ್ ಜೊತೆ 'ಆನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಕಾರ್ತಿಕ್ ಜೊತೆ ನಾಲ್ಕನೇ ಸಿನಿಮಾ. ಈ ಹಿಂದೆ ಟೈಗರ್ ಶ್ರಾಫ್ ಜೊತೆನೂ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ.

More from Filmibeat

English summary
Rashmika Mandanna Teams Up With Bollywood Star Karthik Aryan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X