For Quick Alerts
  ALLOW NOTIFICATIONS  
  For Daily Alerts

  ಪ್ಯೂರ್ ವೆಜಿಟೇರಿಯನ್ ಆಗಿ ಬದಲಾಗಿದ್ದಾರಂತೆ ರಶ್ಮಿಕಾ ಮಂದಣ್ಣ: ಕಾರಣ ಇದು...

  |

  ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ 2020ರಲ್ಲಿ ದಕ್ಷಿಣ ಭಾರತದ ಟಾಪ್ ನಟಿಯಾಗುವ ಪೈಪೋಟಿಗೆ ಇಳಿಯುವ ಸೂಚನೆ ನೀಡಿರುವ ರಶ್ಮಿಕಾ ಮಂದಣ್ಣ ಈಗ ಆಫರ್‌ಗಳ ಸುರಿಮಳೆಯಲ್ಲಿ ಮೀಯುತ್ತಿದ್ದಾರೆ.

  ರಶ್ಮಿಕಾ ಈಗ ತಮ್ಮ ದೇಹದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ | Rashmika Mandanna | Filmibeat Kannada

  ಮಹೇಶ್ ಬಾಬು ಜತೆ ನಟಿಸಿದ್ದ 'ಸರಿಲೇರು ನೀಕೆವ್ವರು' ಬ್ಲಾಕ್‌ಬಸ್ಟರ್ ಹಿಟ್ ಆದರೆ, ನಿತಿನ್ ಜತೆ ನಟಿಸಿದ್ದ 'ಭೀಷ್ಮ' ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಗಿದೆ. ಹೀಗಾಗಿ ತೆಲುಗಿನಲ್ಲಿ ರಶ್ಮಿಕಾ ಗ್ರಾಫ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಎರಡು ಸತತ ಹಿಟ್ ಸಿನಿಮಾ ನೀಡಿದ ಕೂಡಲೇ ನಿರ್ಮಾಪಕರು ಹಾಗೂ ನಿರ್ದೇಶಕರು ರಶ್ಮಿಕಾರನ್ನು ತಮ್ಮ ಸಿನಿಮಾಕ್ಕೆ ಕರೆತರಲು ಮುಗಿಬಿದ್ದಿದ್ದಾರೆ. ಹಾಗೆಂದು ರಶ್ಮಿಕಾ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡು ಬಿಡುವ ಆತುರ ತೋರುತ್ತಿಲ್ಲ.

  ಹೈದರಾಬಾದ್ ನಲ್ಲಿ ಫ್ಲ್ಯಾಟ್ ಖರೀದಿ ಮಾಡ್ತಾರಂತೆ ರಶ್ಮಿಕಾ: ಅಲ್ಲೇ ಸೆಟಲ್ ಆಗಲು ತಯಾರಿ.?ಹೈದರಾಬಾದ್ ನಲ್ಲಿ ಫ್ಲ್ಯಾಟ್ ಖರೀದಿ ಮಾಡ್ತಾರಂತೆ ರಶ್ಮಿಕಾ: ಅಲ್ಲೇ ಸೆಟಲ್ ಆಗಲು ತಯಾರಿ.?

  ಸದ್ಯಕ್ಕೆ ಅವರು ತಮ್ಮ ದೇಹಾಕಾರದ ಮೇಲೆ ಗಮನ ಹರಿಸಿದ್ದಾರಂತೆ. ಅವರು ಅದಕ್ಕಾಗಿ ಮಾಡಿಕೊಂಡಿರುವ ಬದಲಾವಣೆ ಏನು? ಮುಂದೆ ಓದಿ....

  ಮಹತ್ವದ ನಿರ್ಧಾರ ತೆಗೆದುಕೊಂಡ ರಶ್ಮಿಕಾ

  ಮಹತ್ವದ ನಿರ್ಧಾರ ತೆಗೆದುಕೊಂಡ ರಶ್ಮಿಕಾ

  ಸ್ವಲ್ಪ ದಪ್ಪಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ ರಶ್ಮಿಕಾ, ತಮ್ಮ ದೇಹವನ್ನು ಸಪೂರಗೊಳಿಸಲು ಗಮನ ಹರಿಸಿದ್ದಾರೆ. ಮುಖ್ಯವಾಗಿ ಅವರು ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗುವಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ.

  ಮೈಕಟ್ಟು ಉಳಿಸಿಕೊಳ್ಳಲು ಸಾಹಸ

  ಮೈಕಟ್ಟು ಉಳಿಸಿಕೊಳ್ಳಲು ಸಾಹಸ

  ಆರು ತಿಂಗಳಿನಿಂದ ಅವರು ಪಕ್ಕಾ ಸಸ್ಯಾಹಾರಿಯಾಗಿದ್ದಾರಂತೆ. ಮುಖ್ಯವಾಗಿ ಮಾಂಸಾಹಾರ ಪ್ರಿಯರಾಗಿದ್ದರೂ ಅವರು ಅದನ್ನು ತ್ಯಜಿಸಿ ಸಸ್ಯಾಹಾರಕ್ಕೆ ಹೊಂದಿಕೊಳ್ಳುತ್ತಿರುವುದು ತಮ್ಮ ಮೈಕಟ್ಟನ್ನು ಉಳಿಸಿಕೊಳ್ಳುವ ಸಲುವಾಗಿ. ಚಿತ್ರರಂಗದಲ್ಲಿ ನಾಯಕಿಯರು ತಮ್ಮ ದೇಹಾಕಾರ ಕಾಪಾಡಿಕೊಳ್ಳುವುದು ಮುಖ್ಯ. ಹೀಗಾಗಿ ರಶ್ಮಿಕಾ ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

  ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

  ಚಿಕನ್ ತಿನ್ನುವ ಚಿತ್ರ ವೈರಲ್

  ಚಿಕನ್ ತಿನ್ನುವ ಚಿತ್ರ ವೈರಲ್

  ಇತ್ತೀಚೆಗೆ ಫೋಟೊಶೂಟ್ ಒಂದರ ಸಂದರ್ಭದಲ್ಲಿ ರಶ್ಮಿಕಾ ಚಿಕನ್ ತಿನ್ನುವ ಚಿತ್ರ ವೈರಲ್ ಆಗಿತ್ತು. ಅದಕ್ಕಾಗಿ ನೆಟ್ಟಿಗರು ರಶ್ಮಿಕಾರನ್ನು ಕಿಚಾಯಿಸಿದ್ದರು. ಆದರೆ ಅದು ಫೋಟೊಶೂಟ್‌ಗಾಗಿ ತೆಗೆದ ಚಿತ್ರವಷ್ಟೇ. ತಾವು ಚಿಕನ್ ತಿಂದಿಲ್ಲ ಎಂದು ರಶ್ಮಿಕಾ ವಿವರಣೆ ನೀಡಿದ್ದಾರೆ.

  ಹೈದರಾಬಾದ್ ಬಿರಿಯಾನಿ ಎಂದರೆ ಪ್ರೀತಿ

  ಹೈದರಾಬಾದ್ ಬಿರಿಯಾನಿ ಎಂದರೆ ಪ್ರೀತಿ

  ಬಿರಿಯಾನಿ ಎಂದರೆ ರಶ್ಮಿಕಾಗೆ ಅಚ್ಚುಮೆಚ್ಚಂತೆ. ಅದರಲ್ಲಿಯೂ ಹೈದರಾಬಾದ್ ಬಿರಿಯಾನಿ ಅವರಿಗೆ ಇಷ್ಟದ ಅಹಾರ. ಹಾಗಿದ್ದೂ ಅವರು ಸಸ್ಯಾಹಾರಿಯಾಗಿರಲು ತೀರ್ಮಾನಿಸಿದ್ದಾರೆ. ಅಧಿಕ ಕ್ಯಾಲರಿ ಹಾಗೂ ಕೊಬ್ಬಿನ ಅಂಶಗಳಿರುವ ಎಲ್ಲ ಬಗೆಯ ಆಹಾರಗಳನ್ನೂ ತ್ಯಜಿಸಿ ಮೈಕಟ್ಟು ನಿಭಾಯಿಸಲು ಅವರು ಉದ್ದೇಶಿಸಿದ್ದಾರೆ.

  ಇನ್ನು ನಾನು ವೆಜಿಟೇರಿಯನ್

  ಇನ್ನು ನಾನು ವೆಜಿಟೇರಿಯನ್

  'ಹೌದು ನಾನು ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ನಾನು ಯಾವಾಗಲೂ ನಾನ್ ವೆಜ್ ತಿನ್ನವುದನ್ನು ಇಷ್ಟಪಡುತ್ತಿದ್ದರೂ ಈಗ ವೆಜಿಟೇರಿಯನ್ ಆಗಿರಲು ಬಯಸುತ್ತಿದ್ದೇನೆ' ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

  English summary
  Actress Rashmika Mandanna has turned pure vegetarian from six months to maintain her physique.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X