ರಶ್ಮಿಕಾ-ವಿಜಯ್ ದೇವರಕೊಂಡ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರಾ? ಆ ಫೋಟೊ ಹೇಳಿದ ಕಥೆಯೇನು?
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇವರಿಬ್ಬರ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಈ ಜೋಡಿ ಲವ್‌ನಲ್ಲಿ ಬಿದ್ದಿದೆ ಅನ್ನೋದು ಅವರ ಅನುಮಾನ. ಆದರೆ, ಇವರಿಬ್ಬರು ಮಾತ್ರ ಪ್ರೀತಿ-ಪ್ರೇಮ ಏನೂ ಇಲ್ಲ ಅಂತ ಹೇಳುತ್ತಲೇ ಬರುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಅದೇ ಫೋಟೊ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಕೆಲವು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್‌ನಲ್ಲಿ ಬಿದ್ದಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಅದೇ ಇನ್ನು ಕೆಲವರು ಇಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅನ್ನೋ ಬಲವಾಗಿ ನಂಬಿದ್ದಾರೆ. ಅದಕ್ಕೆ ಕಾರಣ ರಶ್ಮಿಕಾ ಮಂದಣ್ಣ ಹಂಚಿಕೊಂಡ ಒಂದು ಫೋಟೊ.
ರಶ್ಮಿಕಾ ಫೋಟೊ ವೈರಲ್ ಆಗಿದ್ದೇಕೆ?
ರಶ್ಮಿಕಾ ಮಂದಣ್ಣ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಆ ಫೋಟೊ ನೋಡಿದ ಬಳಿಕ ನೆಟ್ಟಿಗರು ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರೂ ಲಿವ್ ಇನ್‌ನಲ್ಲಿ ಇರಬಹುದು ಎಂದು ಬಲವಾಗಿ ನಂಬಿಕೊಂಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಹಂಚಿಕೊಂಡ ಆ ಫೋಟೊದಲ್ಲಿ ನೆಟ್ಟಿಗರು ಕಂಡಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಲಿವ್ ಇನ್‌ನಲ್ಲಿದ್ದಾರಾ ರಶ್ಮಿಕಾ-ವಿಜಯ್?
ರಶ್ಮಿಕಾ ಮಂದಣ್ಣ ತಮ್ಮ ಆಪ್ತ ಸಹಾಯಕ ಸಾಯಿ ಬಾಬು ವಿವಾಹದಲ್ಲಿ ಭಾಗಿಯಾಗಿದ್ದರು. ಆ ವೇಳೆ ಸೀರೆಯುಟ್ಟು ಒಂದು ಫೋಟೊವನ್ನು ತೆಗೆದುಕೊಂಡಿದ್ದರು. ಆ ಫೋಟೋದ ಬ್ಯಾಕ್‌ಗ್ರೌಂಡ್ ಈ ಹಿಂದೆ ವಿಜಯ್ ದೇವರಕೊಂಡ ಹಂಚಿಕೊಂಡು ಫೋಟೊದ ಬ್ರ್ಯಾಕ್‌ಗ್ರೌಂಡ್ ಒಂದೇ ಆಗಿತ್ತು. ಇದನ್ನು ಕಂಡು ಹಿಡಿದಿರೋ ನೆಟ್ಟಿಗರು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡು ಲಿವ್ ಇನ್‌ನಲ್ಲಿದ್ದಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ.

ವಿಜಯ್ ಅಪಾರ್ಟ್‌ಮೆಂಟ್‌ನಲ್ಲಿ ರಶ್ಮಿಕಾ?
ವಿಜಯ್ ದೇವರಕೊಂಡ ಒಂದು ವಾರದ ಹಿಂದೆ ಇದೇ ಮಹಡಿಯ ಮೇಲೆ ಕೂತ್ತಿರುವ ಒಂದು ಫೋಟೊವನ್ನು ಹಂಚಿಕೊಂಡಿದ್ದರು. ಆ ಫೋಟೊದ ಬ್ರ್ಯಾಕ್‌ಗ್ರೌಂಡ್ ಹಾಗೂ ಒಂದು ದಿನದ ಹಿಂದೆ ರಶ್ಮಿಕಾ ಹಂಚಿಕೊಂಡು ಫೋಟೊದ ಬ್ಯಾಕ್‌ಗ್ರೌಂಡ್ ಎರಡೂ ಒಂದೇ. ಹೀಗಾಗಿ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ಜೀವನ ನಡೆಸುತ್ತಿರಬಹುದು ಎಂದು ಇಬ್ಬರ ಅಭಿಮಾನಿಗಳು ಒಮ್ಮತದ ನಿರ್ಧಾರಕ್ಕೆ ಬಂದಿಬಿಟ್ಟಿದ್ದಾರೆ.
ನೆಟ್ಟಿಗರ ಕಮೆಂಟ್‌ಗಳು ಏನು?
ರಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡುತ್ತಿದ್ದಂತೆ "ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅನಧಿಕೃತವಾಗಿ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬರು " ಇತ್ತೀಚೆಗೆ ಫೋಟೊವನ್ನು ನೋಡಿದ ಬಳಿಕ ರಶ್ಮಿಕಾ ಹಾಗೂ ವಿಡಿ ಇಬ್ಬರೂ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಅನ್ನೋ ಗೊತ್ತಾಗುತ್ತಿದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. " ಇಬ್ಬರೂ ತಮ್ಮ ಸಂಬಂಧವನ್ನು ಮುಚ್ಚಿಡುವಲ್ಲಿ ವಿಫಲರಾಗಿದ್ದಾರೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











