ಅವರ ಬರ್ತಡೇಗೆ ಇವರು ವಿಶ್ ಮಾಡ್ಲಿಲ್ಲ, ಇವರ ಹುಟ್ಟುಹಬ್ಬಕ್ಕೆ ಅವರ ವಿಶ್ ಇಲ್ಲ- ಏನ್ ನಡೀತಿದೆ ಇಲ್ಲಿ?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಫ್ಯಾಮಿಲಿ ಸ್ಟಾರ್ ವಿಜಯ್ ದೇವರಕೊಂಡ ನಡುವೆ ಸಡನ್ ಆಗಿ ಏನು ನಡೀತಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಈ ಜೋಡಿ ಸೂಪರ್, ಕ್ಯೂಟ್ ಕಪಲ್ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದವರೇ ಈಗ ಏನು ಕತೆ? ಅಂತ ಶಾಕ್ ಆಗಿದ್ದಾರೆ. ಇವರಿಬ್ಬರ ನಡುವೆ ಈಗೇನು ನಡೀತಿದೆ? ಬ್ರೇಕಪ್ ರೂಮರ್ ಓಡಾಡುತ್ತಿರುವುದು ನಿಜವಾ? ಸುಳ್ಳಾ? ಈ ಎಲ್ಲಾ ಗೊಂದಲ, ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಮತ್ತೊಂದು ಘಟನೆ ನಡೆದಿದೆ. ಇದರ ನಂತರ ಚರ್ಚೆಗಳಿಗೆ ಈಗ ರೆಕ್ಕೆ ಪುಕ್ಕ ಬಂದಿದೆ.
ನಿನ್ನೆ (ಮೇ 9) ನಟ ವಿಜಯ್ ದೇವರಕೊಂಡ ಹುಟ್ಟಿದಹಬ್ಬ. ಬೆಳಗ್ಗೆಯಿಂದ ಅಭಿಮಾನಿಗಳು, ಚಿತ್ರರಂಗದ ಅನೇಕ ಹಿರಿಕಿರಿಯರು ವಿಜಯ್‌ಗೆ ಬರ್ತಡೇ ವಿಶ್ ಮಾಡಿದ್ದರು. ಆದರೆ, ಅಭಿಮಾನಿಗಳು ಮಾತ್ರ ಆ ವಿಶೇಷ ವ್ಯಕ್ತಿಯ ವಿಶ್ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ಅದು ಮತ್ಯಾರದ್ದೂ ಅಲ್ಲ ರಶ್ಮಿಕಾ ಮಂದಣ್ಣದ್ದು.

ಆದರೆ ರಶ್ಮಿಕಾ ಮಂದಣ್ಣ ಯಾಕೋ ವಿಜಯ್ ಹುಟ್ಟುಹಬ್ಬಕ್ಕೆ ಬಹಿರಂಗವಾಗಿ ಶುಭಾಶಯ ಕೋರಿಲ್ಲ. ಸದ್ಯ ಈ ವಿಚಾರ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇದೂವರಗೆ ವಿಜಯ್ ದೇವರಕೊಂಡ ಆಗಲೀ, ರಶ್ಮಿಕಾ ಮಂದಣ್ಣ ಆಗಲೀ ತಾವಿಬ್ರೂ ಡೇಟಿಂಗ್ ಮಾಡುತ್ತಿದ್ದೀವಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಒಂದೇ ಕಡೆ, ಒಟ್ಟಿಗೆ ಕೂಡಾ ಅನೇಕ ಬಾರಿ ಈ ಜೋಡಿ ಕಾಣಿಸಿಕೊಂಡಿರುವುದು ಇವರ ಲವ್ವಿ ಡವ್ವಿ ಕತೆಗೆ ಸಾಕಷ್ಟು ಪುಷ್ಟಿ ಕೊಡುತ್ತಲೇ ಇತ್ತು.
ನಡುನಡುವೆ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರಂತೆ, ದೂರ ಆಗಿದ್ದಾರಂತೆ ಎನ್ನುವ ಮಾತುಗಳೂ ಕೇಳಿಬಂದು ಸಾಕಷ್ಟು ಸಮಯ ಚರ್ಚೆಯಲ್ಲಿತ್ತು. ಪ್ರತಿ ಬಾರಿ ಈ ಬಗ್ಗೆ ಇವರಿಬ್ಬರಲ್ಲಿ ಯಾರನ್ನೇ ಈ ಕುರಿತಾಗಿ ಕೇಳಿದರೂ ನೇರ ಉತ್ತರ ಯಾರೂ ಕೊಟ್ಟಿಲ್ಲ, ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸುಮ್ಮನಾಗಿದ್ದಾರೆ. ಏಪ್ರಿಲ್ 5ನೇ ತಾರೀಖು ಪುಷ್ಪಾ ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗ ವಿಜಯ್ ದೇವರಕೊಂಡ ಕೂಡಾ ರಶ್ಮಿಕಾಗೆ ಸಾಮಾಜಿಕ ಜಾಲತಾಣಗಳಲ್ಲಂತೂ ವಿಶ್ ಮಾಡಿರಲಿಲ್ಲ.

ಈ ವಿಚಾರವನ್ನು ಅಭಿಮಾನಿಗಳು ನೀಟಾಗಿ ಗಮನಿಸಿದ್ದರು. ಅಲ್ಲಿಗೆ ಅವರು ಇವರಿಗೆ ವಿಶ್ ಮಾಡಿಲ್ಲ, ಇವರು ಅವರಿಗೆ ವಿಶ್ ಮಾಡಿಲ್ಲ ಅನ್ನೋದು ಯಾರೂ ಹೇಳದೇ ಜಗಜ್ಜಾಹೀರಾಗಿಬಿಟ್ಟಿದೆ. ಇಷ್ಟೆಲ್ಲಾ ಇದ್ದರೂ ಇವರಿಬ್ಬರು ಒಂದೇ ಲೊಕೇಶನ್‌ಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಏಪ್ರಿಲ್‌ನಲ್ಲಿ ರಶ್ಮಿಕಾ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅಭಿಮಾನಿಯೊಬ್ಬ ಆಕೆಯ ವಿಡಿಯೋ ಹಿಂದೆ ಇರುವ ಬ್ಯಾಕ್‌ಗ್ರೌಂಡ್‌ಗೂ ವಿಜಯ್ ದೇವರಕೊಂಡ ಚಿತ್ರವೊಂದರ ಬ್ಯಾಕ್ ಗ್ರೌಂಡ್ ಅನ್ನೂ ಮ್ಯಾಚ್ ಮಾಡಿ ಇಬ್ಬರೂ ಒಟ್ಟಿಗೆ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ್ದರಾ ಎಂದು ಟ್ವೀಟ್ ಮಾಡಿದ್ದ.
ಇದಕ್ಕೆ ಉತ್ತರ ನೀಡಿದ್ದ ರಶ್ಮಿಕಾ ಮಂದಣ್ಣ, "ಅಯ್ಯೋ... ಏನೇನೋ ಆಲೋಚನೆ ಮಾಡಬೇಡಪ್ಪಾ" ಎಂದಿದ್ದರು. ಒಟ್ಟಿನಲ್ಲಿ ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್ ವಿಶ್ ಇಲ್ಲದೇ ಸೆಲಬ್ರೇಶನ್ ತಣ್ಣಗಿದೆ ಎಂದಿದ್ದ ಅದೇ ಅಭಿಮಾನಿಗಳಿಗೆ ವಿಜಯ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದೇ ಇರುವುದನ್ನು ಕಂಡು ಮತ್ತಷ್ಟು ಥಂಡಾ ಹೊಡೆದಂತಾಗಿರುವುದಂತೂ ಹೌದು. ಇವರಿಬ್ಬರ ಜೋಡಿ ಅದ್ಭುತ ಎಂದವರೆಲ್ಲಾ ಸ್ವಲ್ಪ ಆತಂಕದಿಂದಲೇ ಭವಿಷ್ಯದತ್ತ ನೋಡುವಂತಾಗಿದೆ.


Click it and Unblock the Notifications











