ಮುಂದಿನ ಜನ್ಮ ಅಂತಿದ್ದರೆ ನಾನು ಗಂಡಾಗಿ ಹುಟ್ಟುತ್ತೇನೆ: ಅಚ್ಚರಿ ಹೇಳಿಕೆ ಕೊಟ್ಟ ರಶ್ಮಿಕಾ!

ಕಳೆದ 15 ದಿನಗಳಿಂದ ರಶ್ಮಿಕಾ ಮಂದಣ್ಣ ಭಾರೀ ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ರಶ್ಮಿಕಾ ಹೆಸರು ಹರಿದಾಡುತ್ತಲೇ ಇರುತ್ತೆ. 'ಪುಷ್ಪ' ರಿಲೀಸ್ ಆದ ದಿನದಿಂದ ಶ್ರೀವಲ್ಲಿಯಾಗಿ ಸದ್ದು ಮಾಡಿದ್ದರು. ಈಗ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ 'ಆಡುವಾಳ್ಳು ಮೀಕು ಜೋಹಾರ್ಲು'. ಕಳೆದೊಂದು ವಾರದಿಂದ ಇದೇ ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ. ಪ್ರತಿ ಬಾರಿ ಪ್ರಚಾರಕ್ಕೆ ಹೋದಾಗಲೂ ಒಂದು ಸುದ್ದಿಯಿಂದ ರಶ್ಮಿಕಾ ಹೈಲೈಟ್ ಆಗುತ್ತಿದ್ದಾರೆ.

ಒಂದಿಷ್ಟು ದಿನ ಮದುವೆ ಬಗ್ಗೆ ಸುದ್ದಿ ಹರಿದಾಡಿತ್ತು. ಇನ್ನೇನು ಅದಕ್ಕೆ ತೀಲಾಂಜಲಿ ಇಟ್ಟಿಲ್ಲ. ಅಷ್ಟರಲ್ಲೇ ಮತ್ತೆ ರಶ್ಮಿಕಾ ಹೆಸರು ಎಲ್ಲೆಲಾ ಕಡೆ ಓಡಾಡುತ್ತಿದೆ. ನಿನ್ನೆ(ಮಾರ್ಚ್ 03) ರಶ್ಮಿಕಾ ಮಂದಣ್ಣ ಹೊಸ ಸಿನಿಮಾ 'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮುಂದಿನ ಜನ್ಮದಲ್ಲಿ ನಾನು ಗಂಡಾಗಿ ಹುಟ್ಟಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಅದೇ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

 ನಾನು ಗಂಡಾಗಿ ಹುಟ್ಟಬೇಕು

ನಾನು ಗಂಡಾಗಿ ಹುಟ್ಟಬೇಕು

'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದ ಪ್ರಚಾರದ ವೇಳೆ ರಶ್ಮಿಕಾ "ನನ್ನ ಮುಂದಿನ ಜನ್ಮದಲ್ಲಿ ನಾನು ಗಂಡಾಗಿ ಹುಟ್ಟಲು ಇಷ್ಟಪಡುತ್ತೇನೆ. ನನಗೆ 'ಪುಷ್ಪ' ಹಾಗೂ 'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ನಟಿಸಿದ ಬಳಿಕ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಎರಡು ಸಿನಿಮಾಗಳಿಗೆ ಕಾಸ್ಟ್ಯೂಮ್‍ಗಳನ್ನು ಬದಲಾಯಿಸಿ ಸುಸ್ತಾಗಿದ್ದೇನೆ.' ಎಂದು ರಶ್ಮಿಕಾ ಹೇಳಿದ್ದಾರೆ. ಗಂಡಸರಾದರೆ ಹೆಚ್ಚು ಕಾಸ್ಟ್ಯುಮ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದು ರಶ್ಮಿಕಾ ವಾದ.

 ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ

ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ

'ಆಡವಾಳ್ಳು ಮೀಕು ಜೋಹಾರ್ಲು' ಒಂದು ಕೌಟುಂಬಿಕ ಸಿನಿಮಾ ಆಗಿರುವುದರಿಂದ ಅದ್ದೂರಿತನವಿದೆ. ಹೀಗಾಗಿ ರಶ್ಮಿಕಾ ಹಲವು ಸಂದರ್ಭಗಳಲ್ಲಿ ವಿಭಿನ್ನವಾದ ಕಾಸ್ಟ್ಯೂಮ್ ಅನ್ನು ಬದಲಾಯಿಸಬೇಕಾಗಿ ಬಂದಿತ್ತು. ಈ ಕಾರಣಕ್ಕೆ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ. ಈ ಚಿತ್ರದಲ್ಲಿ ನೈಜ ದೃಶ್ಯಗಳಿವೆ. ಕಾಮಿಡಿ ದೃಶ್ಯಗಳು ಕೂಡ ಇವೆ. ಕೌಟುಂಬಿಕ ಕಥೆಯಾಗಿರುವುದರಿಂದ ಎಲ್ಲಾ ವರ್ಗಗಳಿಗೂ ಈ ಸಿನಿಮಾ ಇಷ್ಟ ಆಗುತ್ತೆ. ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತವಾಗಿಯೂ ಇಷ್ಟ ಆಗುತ್ತೆ ಎಂದು ರಶ್ಮಿಕಾ ಭರವಸೆ ಮಾತುಗಳನ್ನು ಆಡಿದ್ದಾರೆ.

 ಸಿನಿಮಾ ಇಂಟರ್‌ವಲ್ ಸೂಪರ್

ಸಿನಿಮಾ ಇಂಟರ್‌ವಲ್ ಸೂಪರ್

ಈ ಸಿನಿಮಾವನ್ನು ಕುಟುಂಬ ಸಮೇತ ಬಂದು ನೋಡಬೇಕು ಅನ್ನುವುದು ನಮ್ಮ ಆಸೆ. ಕುಟುಂಬದ ಜೊತೆ ಜೊತೆಗೆ ಯುವಜನತೆಗೂ ಇಷ್ಟ ಆಗುತ್ತೆ. ಈ ಚಿತ್ರ ಒಂದೊಂದು ಪಾತ್ರವೂ ಒಂದೊಂದು ದೃಶ್ಯದಲ್ಲಿ ಕನೆಕ್ಟ್ ಆಗುತ್ತೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತದೆ ಎಂದು ನಿರ್ದೇಶಕ ತಿರುಮಲಾ ಕಿಶೋರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

 ನಾಯಕ ಪಾತ್ರಕ್ಕೆ ಹೈಪ್ ಇಲ್ಲ

ನಾಯಕ ಪಾತ್ರಕ್ಕೆ ಹೈಪ್ ಇಲ್ಲ

'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಬೇಕಂತ ಹೈಫ್ ಕೊಟ್ಟಿಲ್ಲ. ಅನಾವಶ್ಯಕವಾಗಿ ಪಾತ್ರವನ್ನು ವಿಜೃಂಬಿಸುವುದು ಶರ್ವಾನಂದ್‌ಗೆ ಇಷ್ಟವಿಲ್ಲವಂತೆ. ಇದೇ ಕಾರಣಕ್ಕೆ ಟೈಟಲ್ ಕಾರ್ಡ್‍ನಲ್ಲೂ ಶರ್ವಾನಂದ್ ಹೊಸರು ಮೊದಲು ಕಾಣಿಸುವುದಿಲ್ಲ ಎನ್ನುತ್ತಾರೆ. ಈ ಸಿನಿಮಾ ಇಂದು (ಮಾ.04) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಚಿತ್ರತಂಡ ಏನೇ ಹೇಳಿದರೂ, ಪ್ರೇಕ್ಷಕರು ಮಾತ್ರ ನಗು ಕಡಿಮೆ ಎನ್ನುತ್ತಿದ್ದಾರೆ.

More from Filmibeat

English summary
Rashmika mandanna wants to born as boy in her next life. Rashmika Mandanna says in Aaduvallu Meeku Johaarlu movie press meet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X