'ಪುಷ್ಪ' ಬಳಿಕ ತೆರೆ ಕಂಡ ರಶ್ಮಿಕಾ ಸಿನಿಮಾ 'ಆಡವಾಳ್ಳು ಮೀಕು ಜೋಹಾರ್ಲು' ಮೊದಲ ದಿನದ ಗಳಿಕೆ ಎಷ್ಟು?

ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಲ್ಲಿಂದ ಸೋಲು ರುಚಿಯನ್ನೇ ಕಂಡಿಲ್ಲ. ಕಿರಿಕ್ ಪಾರ್ಟಿಯಿಂದ ಆರಂಭವಾದ ಸಿನಿಪಯಣದಲ್ಲಿ ರಶ್ಮಿಕಾ ಸಿಕ್ಕಿದ್ದು 100 ಪರ್ಸೆಂಟ್ ಸಕ್ಸಸ್. ಸೋತ ಸಿನಿಮಾ ಹೀರೊಗಳಿಗೆ, ಚಿತ್ರರಂಗದಲ್ಲಿ ಆಗತಾನೇ ಹೆಸರು ಮಾಡಿದ ಹೀರೊಗಳಿಗೆ ರಶ್ಮಿಕಾ ಮಂದಣ್ಣ ಲಕ್ಕಿ ಗರ್ಲ್ ಆಗಿದ್ದರು. ಸದಾ ಯಶಸ್ಸಿನ ರುಚಿಯನ್ನೇ ಕಂಡಿರುವ ರಶ್ಮಿಕಾ ಮಂದಣ್ಣಗೆ ಮೊದಲ ಬಾರಿ ಸೋಲಿನ ರುಚಿ ನೋಡಬೇಕಾಗಬಹುದು.

'ಪುಪ್ಪ' ಯಶಸ್ಸಿನ ಬಳಿಕ ರಶ್ಮಿಕಾಳನ್ನು ನೋಡುವುದಕ್ಕಾದರೂ ಸಿನಿಮಾಗೆ ಪ್ರೇಕ್ಷಕರು ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಮಾರ್ಚ್ 04 ರಂದು ತೆರೆಕಂಡ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ಮೊದಲ ದಿನದ ಕಲೆಕ್ಷನ್ ಹೇಳಿಕೊಳ್ಳುವಂತಿಲ್ಲ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣ ಮೊದಲ ಸೋಲು ರುಚಿಯನ್ನು ಕಾಣಬೇಕಾಗುತ್ತೆ ಎಂದು ಭವಿಷ್ಯ ಟಾಲಿವುಡ್ ಮಂದಿ ನುಡಿಯುತ್ತಿದ್ದಾರೆ.

ರಶ್ಮಿಕಾ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?

ರಶ್ಮಿಕಾ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?

ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ಅಭಿನಯದ 'ಆಡವಾಳ್ಳು ಮೀಕು ಜೋಹಾರ್ಲು' ಚಿತ್ರ ಮಾರ್ಚ್ 04ರಂದು ವಿಶ್ವದಾದ್ಯಂತ ತೆರೆಕಂಡಿದೆ. ಹಾಸ್ಯ ಹಾಗೂ ಕೌಟುಂಬಿಕ ಸಿನಿಮಾವೆಂದು ಚಿತ್ರತಂಡ ಪ್ರಚಾರ ಮಾಡಿತ್ತು. ರಶ್ಮಿಕಾ, ಶರ್ವಾನಂದ್, ಖುಷ್ಬು ಈ ಸಿನಿಮಾದಲ್ಲಿ ನಟಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿದೆ. ಈ ಸಿನಿಮಾ ವಿಶ್ವದಾದ್ಯಂತ ಮೊದಲ ದಿನ ಗಳಿಸಿದ್ದು ಕೇವಲ 3.60 ಕೋಟಿ ರೂಪಾಯಿ. ಇದರಲ್ಲಿ ನಿರ್ಮಾಪಕ ಕೈ ಸೇರಿದ್ದು ಕೇವಲ 1.92 ಕೋಟಿ ರೂಪಾಯಿ ಎಂದು ಸಿನಿಮಾ ಟ್ರೇಡ್ ಮಾಡುವ ಮಂದಿ ಮಾಹಿತಿ ಹೊರ ಹಾಕಿದ್ದಾರೆ.

ಕರ್ನಾಟಕದಲ್ಲೂ ಮೋಡಿ ಮಾಡಿಲ್ಲ

ಕರ್ನಾಟಕದಲ್ಲೂ ಮೋಡಿ ಮಾಡಿಲ್ಲ

ಕರ್ನಾಟಕದಲ್ಲಿ ತೆಲುಗು ಸಿನಿಮಾಗಳೂ ಚೆನ್ನಾಗೇ ಓಡುತ್ತವೆ. ಚಿತ್ರಮಂದಿರಕ್ಕೆ ಹೋಗಿ ತೆಲುಗು ಸಿನಿಮಾ ನೋಡುವ ಜನರಿಗೇನು ಕಮ್ಮಿಯಿಲ್ಲ. ಕರ್ನಾಟಕದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವುದರಿಂದ ಇಲ್ಲಾದರೂ ಸಿನಿಮಾ ಚೆನ್ನಾಗಿ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಮೊದಲ ದಿನ ಕರ್ನಾಟಕದಲ್ಲಿ 12 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ 1.60 ಕೋಟಿಗೆ ಈ ಸಿನಿಮಾ ಸೇಲ್ ಆಗಿತ್ತು. ಫಸ್ಟ್ ಡೇ ಕಲೆಕ್ಷನ್ ನೋಡಿದರೆ, ಇಷ್ಟು ಹಣ ವಾಪಾಸ್ ಬರುತ್ತಾ? ಅನ್ನುವ ಅನುಮಾನ ಶುರುವಾಗಿದೆ.

ರಶ್ಮಿಕಾ ಸಿನಿಮಾಗೆ ಎಲ್ಲೆಲ್ಲಿ ಎಷ್ಟು ಕಲೆಕ್ಷನ್

ರಶ್ಮಿಕಾ ಸಿನಿಮಾಗೆ ಎಲ್ಲೆಲ್ಲಿ ಎಷ್ಟು ಕಲೆಕ್ಷನ್

'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾ ಆಂಧ್ರ-ತೆಲಂಗಾಣದಲ್ಲೇ ಹೆಚ್ಚು ಗಳಿಕೆ ಕಂಡಿಲ್ಲ. ತೆಲುಗಿನ ಸ್ಟಾರ್ ಸಿನಿಮಾಗಳು ಮೊದಲ ದಿನ ಕಮ್ಮಿ ಅಂದ್ರೂ, 10 ಕೋಟಿ ಬ್ಯುಸಿನೆಸ್ ಮಾಡುತ್ತವೆ. ಆದರೆ, ರಶ್ಮಿಕಾ-ಶರ್ವಾನಂದ್ ಸ್ಟಾರ್ ನಟ-ನಟಿಯರಿದ್ದರೂ, ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ಆಂಧ್ರ-ತೆಲಂಗಾಣದಲ್ಲಿ ಫಸ್ಟ್ ಡೇ ಕಲೆಕ್ಷನ್ 2.90 ಕೋಟಿ, ವಿದೇಶದ ಗಳಿಕೆ 23 ಲಕ್ಷ ಗಳಿಕೆ ಕಂಡಿದೆ. ಈ ಗಳಿಕೆ ನೋಡಿದರೆ, ರಶ್ಮಿಕಾ ಮೊದಲ ಬಾರಿಗೆ ಅಸಲಿ ಸೋಲಿನ ರುಚಿ ನೋಡಬೇಕಾಗುತ್ತೆ ಎನ್ನುತ್ತಿದೆ ಟಾಲಿವುಡ್.

14ನೇ ಸಿನಿಮಾಗೆ ಸೋಲಿನ ರುಚಿ

14ನೇ ಸಿನಿಮಾಗೆ ಸೋಲಿನ ರುಚಿ

ರಶ್ಮಿಕಾ ಮಂದಣ್ಣ ಅಭಿನಯದ 14ನೇ ಸಿನಿಮಾಗೆ ಸೋಲಿನ ರುಚಿ ಕಾಣಬೇಕಾಗಿದೆ. ಕಿರಿಕ್ ಪಾರ್ಟಿಯಿಂದ ಸಕ್ಸಸ್ ಕಂಡಿರುವ ರಶ್ಮಿಕಾ 'ಪುಷ್ಪ' 13 ಸಿನಿಮಾಗಳಲ್ಲಿ ನಟಿಸಿದ್ದರು. ಮಧ್ಯದಲ್ಲಿ ಚಲೋ, ಡಿಯರ್ ಕಾಮ್ರೇಡ್, ದೇವದಾಸ್, ಭೀಷ್ಮ, ತಮಿಳಿನ ಸುಲ್ತಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾಧಾರಣ ಅಂತ ಎನಿಸಿಕೊಂಡಿದ್ದರೂ, ಸೋತಿರಲಿಲ್ಲ. ಆದರೆ, 'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾ ಸೋಲುವ ಲಕ್ಷಣಗಳು ಎದ್ದು ಕಾಣುತ್ತಿವೆ. ಇನ್ನು ಎರಡು ವಾರದ ಕಲೆಕ್ಷನ್ ಮೇಲೆ ಈ ಸಿನಿಮಾದ ಸೋಲು-ಗೆಲುವು ನಿರ್ಧಾರವಾಗಿದೆ.

More from Filmibeat

English summary
Rashmika Starrer Aadavallu Meeku Johaarlu 1st Day Worldwide Box Office Collections. The traders report says that Rashmika and Sharwanand starrer Aadavallu Meeku Johaarlu has collected Rs 1.92 Cr shares at the worldwide box office on its release day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X