Niharika Konidela: ರೇವ್ ಪಾರ್ಟಿ ಮೇಲೆ ದಾಳಿ: ನಿಹಾರಿಕಾ ಕೊನಿಡೆಲಾ ವಶಕ್ಕೆ ಪಡೆದಿದ್ದ ತಂದೆ ಹೇಳಿದ್ದೇನು?

ಸೆಲೆಬ್ರೆಟಿಗಳ ಮಾದಕ ಲೋಕದ ಅನಾವರಣ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಟಾಲಿವುಡ್‌ನಲ್ಲೂ ನಟ-ನಟಿಯರು ಮಾದಕ ವಸ್ತುಗಳ ಸೇವನೆ ಮಾಡಿದ್ದು ಸಾಬೀತಾಗಿದೆ. ಪೊಲೀಸ್ ಠಾಣಿಯಲ್ಲೂ ವಿಚಾರಣೆ ಕೂಡ ನಡೆದಿದೆ. ನಿನ್ನೆ (ಏಪ್ರಿಲ್ 02)ರಂದು ಯುಗಾದಿ ಹಬ್ಬದಂದೇ ಹೈದರಾಬಾದ್‌ನ 5 ಸ್ಟಾರ್ ಹೊಟೇಲ್ ಒಂದರಲ್ಲಿ ರೇವ್ ಪಾರ್ಟಿ ನಡೆದಿತ್ತು. ಖಚಿತ ಮಾಹಿತಿಯನ್ನು ಆಧರಿಸಿ, ಪೊಲೀಸರು ದಾಳಿ ನಡೆದಿದ್ದರು.

ಪೊಲೀಸರು ನಡೆಸಿದ ದಾಳಿ ವೇಳೆ ಸೆಲೆಬ್ರೆಟಿಗಳ ಮಕ್ಕಳು, ಪ್ರಭಾವಿಗಳ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೇ ವೇಳೆ ಈ ಹೊಟೇಲ್‌ನಲ್ಲೇ ಇದ್ದ ನಿಹಾರಿಕ ಕೊನಿಡೆಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಿಹಾರಿಕಾ ಟಾಲಿವುಡ್‌ನ ಮೆಗಾ ಕುಟುಂಬದ ಕುಡಿ. ಈ ಕಾರಣಕ್ಕೆ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿಹಾರಿಕಾ ನಾಗಬಾಬು ಪುತ್ರಿಯಾಗಿದ್ದರಿಂದ ಈ ಸುದ್ದಿ ಹೆಚ್ಚು ವೈರಲ್ ಆಗಿತ್ತು.

ಪುತ್ರಿ ಬಗ್ಗೆ ನಾಗಬಾಬು ವಿಡಿಯೋ ರಿಲೀಸ್

ನಿಹಾರಿಕಾ ಕೊನಿಡೆಲಾ ವಶಕ್ಕೆ ಪಡೆದಿದ್ದ ಪ್ರಕರಣದ ಬಗ್ಗೆ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ತಮ್ಮಪುತ್ರಿಯ ಬಗ್ಗೆ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ರೇವ್ ಪಾರ್ಟಿ ಮಾಡುತ್ತಿದ್ದವರನ್ನು ಬಂಧಿಸಿದ ವೇಳೆ ತಮ್ಮ ಪುತ್ರಿ ನಿಹಾರಿಕಾ ಕೊನಿಡೆಲಾರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದರ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದಾರೆ. ತಮ್ಮ ಪುತ್ರಿ ನಿಹಾರಿಕಾ ಪಬ್​ನಲ್ಲಿದ್ದದ್ದು ನಿಜ. ಆದರೆ ನಿಹಾರಿಕಾ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ನಿಹಾರಿಕಾ ಅಲ್ಲಿಗೆ ಹೋಗಿದ್ದು ಕಾಕತಾಳೀಯವೆಂದು ಹೇಳಿದ್ದಾರೆ.

ಬಂಜಾರಾ ಹಿಲ್ಸ್​ ಠಾಣೆಯ ಪೊಲೀಸರು ನಿಹಾರಿಕ ಅವರನ್ನು ವಶಕ್ಕೆ ಪಡೆದು ಕೆಲವು ಕಾಲ ವಿಚಾರಣೆ ನಡೆಸಿದ್ದಾರೆ. ಬಳಿಕ ನಿಹಾರಿಕಾರನ್ನು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ನಿಹಾರಿಕಾ ಕೊನಿಡೆಲಾ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಹೊರಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Rave Party Niharika Konidela detained by Banjara hills police Nagababu released statements

ನಾಗಬಾಬು ಹೇಳಿಕೆಯಲ್ಲಿ ಏನಿದೆ?

ಪುತ್ರಿ ನಿಹಾರಿಕಾ ಕೊನಿಡೆಲಾ ಬಗ್ಗೆ ನಾಗಬಾಬು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. '' ನನ್ನ ಮಗಳು ನಿಹಾರಿಕಾ ಕೊನಿಡೆಲಾ ಏಪ್ರಿಲ್ 02 ರ ರಾತ್ರಿ ಪಬ್‌ಗೆ ಹೋಗಿದ್ದರು. ಪಬ್ ಬಂದ್ ಮಾಡುವ ಸಮಯ ಮೀರಿದ್ದರೂ, ಮುಂದುವರೆಸಿದ್ದರಿಂದ ಪಬ್ ನಡೆಸುತ್ತಿದ್ದವರನ್ನು ಹಾಗೂ ಇಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ವೇಳೆ ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳಿಗೂ ಆಕೆಗೂ ಯಾವುದೇ ಸಂಬಂಧವಿಲ್ಲವೆಂದು ಪೊಲೀಸರು ಹೇಳಿದ್ದಾರೆ.'' ಎಂದು ನಾಗನಾಬು ಹೇಳಿದ್ದಾರೆ.

ತನ್ನಮಗಳು ನಿಹಾರಿಕಾ ಬಗ್ಗೆ ಹಬ್ಬುತ್ತಿರುವ ಸುದ್ದಿಗಳನ್ನು ನಂಬಬೇಡಿ. ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದೂ ಪುತ್ರಿ ಪರವಾಗಿ ನಾಗಬಾಬು ಮನವಿ ಮಾಡಿಕೊಂಡಿದ್ದಾರೆ. ಆದರೆ, ಬಂಜಾರಾ ಹಿಲ್ಸ್‌ನಲ್ಲಿರು ಐಶಾರಾಮಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಸುಮಾರು 150ಕ್ಕೂ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ. ಅಲ್ಲಿ ಪೊಲೀಸರಿಗೆ ಮಾದಕ ವಸ್ತುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

More from Filmibeat

English summary
Rave Party Niharika Konidela detained by banjara hills police Nagababu released statments. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X