51 ವರ್ಷದ ಈ ನಟಿಗೆ ವಿಜಯ್ ದೇವರಕೊಂಡ ಜೊತೆ ಐಟಂ ಸಾಂಗ್ ಮಾಡೋ ಆಸೆ; ಯಾರಿವರು?

ಕೆಲವೊಮ್ಮೆ ನಟಿಯರು ಕೊಡುವ ಹೇಳಿಕೆಗಳು ಅವರ ಅಭಿಮಾನಿಗಳಿಗೆ ಶಾಕಿಂಗ್ ಆಗಿರುತ್ತವೆ. ಅದರಲ್ಲೂ 50 ದಾಟಿದ ನಟಿಯರುವ ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯರ ಹಾಗೆ ವರ್ತಿಸಿದರೆ, ಫ್ಯಾನ್ಸ್ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ. ಆದರೆ, ಚಿತ್ರರಂಗದಲ್ಲಿ ಇವೆಲ್ಲವೂ ಕಾಮನ್. ನಟಿಯರು ಇಂತಹ ಹೇಳಿಕೆ ಕೊಡೋದು, ಓಪನ್ ಆಗಿ ಮಾತಾಡೋದು ಎಲ್ಲವೂ ಕಾಮನ್.

ಅಷ್ಟಕ್ಕೂ ಯಾರು ಏನು ಹೇಳಿದರು? ಅನ್ನೋ ಪ್ರಶ್ನೆ ಹುಟ್ಟುಕೊಳ್ಳುವುದು ಸಹಜ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಾಣ' ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ನಟಿ ಕಸ್ತೂರಿ ಶಂಕರ್ ಕನ್ನಡಿಗರಿಗೆ ಹೊಸ ಪರಿಚಯವೇನಲ್ಲ. ಈಗಾಗಲೇ ಕೆಲವು ಕನ್ನಡ ಸಿನಿಮಾಗಳಲ್ಲೂ ಕಸ್ತೂರಿ ಶಂಕರ್ ನಟಿಸಿದ್ದಾರೆ. ಸದ್ಯಕ್ಕೀಗ ತೆಲುಗು ಧಾರಾವಾಹಿಗಳಲ್ಲಿ ಇವರು ನಟಿಸಿ, ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

Ravichandran actress Kasthuri Shankar Expresses Wish to Do an Item Song with Vijay Deverakonda at 51

ಕಸ್ತೂರಿ ಶಂಕರ್ ಕಿರುತೆರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ವೀವ್ ಆಗಿರುತ್ತಾರೆ. ಇತ್ತೀಚೆಗೆ ಕಸ್ತೂರಿ ಶಂಕರ್ ನಿರೂಪಕಿಯೊಬ್ಬರಿಗೆ ಸಂದರ್ಶನ ನೀಡಿದ್ದರು. ಆ ವೇಳೆ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಐಟಂ ಸಾಂಗ್ ಮಾಡ್ಬೇಕು ಎಂದು 51 ವರ್ಷದ ಈ ನಟಿ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯಾಕೆ ಹೀಗಂದ್ರು? ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.

ಇತ್ತೀಚೆಗೆ ಕಸ್ತೂರಿ ಶಂಕರ್ ತಮ್ಮ ಕೆಲಸಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕೂಡ ಬೇಡದ ಹೇಳಿಕೆಗಳನ್ನು ಕೊಟ್ಟು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಬೋಲ್ಡ್ ಸ್ಟೇಟ್ಮೆಂಟ್‌ಗಳನ್ನು ಕೊಡುವ ಕಸ್ತೂರಿ ಶಂಕರ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿಯೂ ಇಂತಹದ್ದೇ ಹೇಳಿಕೆಗಳನ್ನು ಕೊಟ್ಟಿದ್ದಾರೆ. ತೆಲುಗಿನ ಜನಪ್ರಿಯ ನಿರೂಪಕಿ ವರ್ಷಾ ನಡೆಸಿಕೊಡುವ 'ಕಿಸ್ಸಕ್ ಟಾಕ್ಸ್' ಅನ್ನೋ ಶೋನಲ್ಲಿ ಕಸ್ತೂರಿ ಶಂಕರ್ ಅತಿಥಿಯಾಗಿ ಬಂದಿದ್ದರು. ಆ ವೇಳೆ ಈ ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ನಿರೂಪಕಿ ವರ್ಷಾ ನಟಿ ಕಸ್ತೂರಿ ಶಂಕರ್ ಸೌಂದರ್ಯವನ್ನು ಹೊಗಳುತ್ತಾ, " ನೀವು ಸೌಂದರ್ಯವನ್ನು ಹೇಗೆ ಕಾಪಾಡಿಕೊಂಡಿದ್ದೀರಿ? ಹೇಗೆ ಮೇಂಟೈನ್ ಮಾಡುತ್ತೀರಾ? ಚಂದಮಾನಿಗೆ ಎರಡು ಹೆಸರುಗಳಿವೆ ಗೊತ್ತೇ? ಒಂದು ಚಂದಮಾಮ. ಇನ್ನೊಂದು ಕಸ್ತೂರಿ" ಎಂದು ಪ್ರಶ್ನೆ ಹಾಕಿದ್ದರು. ಆದರೆ, ಕಸ್ತೂರಿ ಶಂಕರ್ ಈ ಪ್ರಶ್ನೆಗಳಿಂದ ಉಬ್ಬಲಿಲ್ಲ. "ಏನು ಮೇಂಟೈನ್ ಮಾಡೋದು. ಈಗಾಗಲೇ ಕಣ್ಣಿಗೆ ಕನ್ನಡ ಬಂದಿದೆ. ನನ್ನನ್ನು ವರ್ಣಿಸುತ್ತಿರೋದು ನೋಡಿದರೆ, ನನಗಿಂತ ಹೆಚ್ಚಾಗಿ ನಿನಗೇ ಕನ್ನಡದ ಅಗತ್ಯವಿದೆ" ಎಂದು ನೇರಾ ನೇರ ಉತ್ತರ ಕೊಟ್ಟಿದ್ದರು.

Ravichandran actress Kasthuri Shankar Expresses Wish to Do an Item Song with Vijay Deverakonda at 51

ಹಾಗೇ ಸಂದರ್ಶನ ಮುಂದುವರೆಸಿ, "ನಿಮಗೆ ಒಳ್ಳೆಯ ಸಂಭಾವನೆ ಕೊಟ್ಟು, ವಿಜಯ್ ದೇವರಕೊಂಡ ಸಿನಿಮಾದಲ್ಲಿ ಸಹೋದರಿ ಪಾತ್ರ ಕೊಟ್ಟರೆ ನಟಿಸುತ್ತೀರಾ?" ಎಂದು ಕೇಳಿದರು. ಆಗ ಕಸ್ತೂರಿ ಶಂಕರ್ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. "ಸಹೋದರಿ ಪಾತ್ರವನ್ನೆಲ್ಲ ಮಾಡಲ್ಲ. ಅದೇ ನಾಯಕ ಪಕ್ಕದಲ್ಲಿ ಬೇರೆ ಪಾತ್ರ ಸಿಕ್ಕರೆ, ಸಂಭಾವನೆ ಕಡಿಮೆ ಸಿಕ್ಕರೂ ಮಾಡುತ್ತೇನೆ." ಎಂದರು. ಯಾವ ಪಾತ್ರ ಎಂದು ಪ್ರಶ್ನೆ ಮಾಡಿದಾಗ, " ಸಹೋದರಿ ಪಾತ್ರ ಯಾಕೆ? ಈಗಲೇ ಆದರೆ, ಐಟಂ ಸಾಂಗ್ ಮಾಡುವುದಕ್ಕೆ ರೆಡಿಯಿದ್ದೇನೆ" ಎಂದು ಹೇಳಿ ನಿರೂಪಕಿ ವರ್ಷಾಗೆ ಶಾಕ್ ಕೊಟ್ಟುಬಿಟ್ಟರು.

ಕಸ್ತೂರಿ ಶಂಕರ್ ನೀಡಿದ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಪಡಿಸಿದೆ. ಕೆಲ ನೆಟ್ಟಿಗರು ಕಸ್ತೂರಿಯ ಬೋಲ್ಡ್ ಸ್ಟೇಟ್ಮೆಂಟ್‌ ಅನ್ನು ಪ್ರಶಂಸೆ ಮಾಡಿದ್ದಾರೆ. "51ನೇ ವಯಸ್ಸಿನಲ್ಲಿಯೂ ಇಂತಹ ಆತ್ಮ ವಿಶ್ವಾಸವಿರೋದ ಅದ್ಭುತ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಈ ವಯಸ್ಸಿನಲ್ಲಿ ಐಟಂ ಸಾಂಗ್ ಮಾಡುವ ಆಲೋಚನೆಯೇ ಆಘಾತಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಕಸ್ತೂರಿ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ.

More from Filmibeat

English summary
Ravichandran actress Kasthuri Shankar Expresses Wish to Do an Item Song with Vijay Deverakonda at 51.
Read more about: kasthuri vijay tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X