ಅಲ್ಲು ಅರ್ಜುನ್ ಪುತ್ರನಿಗೆ ಆರ್‌ಸಿಬಿ ಜೆರ್ಸಿ ನೀಡಿದ ಕ್ರಿಕೆಟಿಗ ವೆಂಕಟೇಶ್ ಅಯ್ಯರ್; ಭೇಟಿಯ ಉದ್ದೇಶವೇನು?

ಸಿನಿಮಾರಂಗಕ್ಕೂ ಕ್ರಿಕೆಟ್‌ ಲೋಕಕ್ಕೂ ಬಿಡಲಾರದ ನಂಟು. ಕ್ರಿಕೆಟ್ ಪಂದ್ಯದಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಂಡರೆ, ಅತ್ತ ಸಿನಿಮಾ ತಾರೆಯರ ಜೊತೆ ಕ್ರಿಕೆಟಿಗಳು ಮೋಜು, ಮಸ್ತಿ ಪಾರ್ಟಿ ಮಾಡುವುದು ಕಾಮನ್ ಆಗಿದೆ. ಅದರಲ್ಲೂ ಐಪಿಎಲ್ ಪಂದ್ಯಗಳು ಶುರುವಾದ ಮೇಲಂತೂ ಈ ಎರಡೂ ಲೋಕಗಳು ಹೆಚ್ಚು ಹತ್ತಿರವಾಗಿದೆ. ಇಂದು (ಮೇ 23) ಕೂಡ ಹೈದರಾಬಾದ್‌ನಲ್ಲಿ 'ಪುಷ್ಪ' ಸಿನಿಮಾದ ನಟ ಅಲ್ಲು ಅರ್ಜುನ್ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರನ್ನು ಭೇಟಿ ಮಾಡಿದ್ದಾರೆ.

ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್, ಇನ್ನೊಂದು ಕಡೆ ಆರ್‌ಸಿಬಿ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್. ಇಬ್ಬರೂ ಒಟ್ಟಿಗೆ ಒಂದ್ಕಡೆಡೆ ಸೇರಿಕೊಂಡಿದ್ದಾರೆ ಅಂದರೆ, ಏನೋ ಸ್ಪೆಷಲ್ ಇರಬೇಕಲ್ಲ ಅಂತ ತಲೆಗೆ ಬರೋದು ಸಹಜ. ಇಬ್ಬರ ಭೇಟಿ ಮಾಡಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಲೆಕ್ಕಾಚಾರ ಮಾಡುವುದಕ್ಕೆ ಶುರು ಮಾಡಿದ್ದಾರೆ.

RCB star player Venkatesh Iyer met Allu Arjun in Hyderabad and gifted jersey to his son

ಅಸಲಿಗೆ ಇವರಿಬ್ಬರ ಭೇಟಿಯಲ್ಲಿ ಅಂತಹದ್ದೇನು ವಿಶೇಷತೆ ಇಲ್ಲ. ಇದೊಂದು ಆಕಸ್ಮಿಕ ಭೇಟಿ ಅಂತ ಹೇಳಲಾಗಿದೆ. ಅನಿರೀಕ್ಷಿತವಾಗಿ ಅಲ್ಲು ಅರ್ಜುನ್ ಹಾಗೂ ವೆಂಕಟೇಶ್ ಅಯ್ಯರ್ ಭೇಟಿಯಾಗಿದ್ದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಹೀಗಿದ್ದರೂ ಇವರಿಬ್ಬರೂ ಆ ಘಳಿಗೆಯನ್ನು ಸ್ಪೆಷಲ್ ಮಾಡಿದ್ದಾರೆ. ಈ ಫೋಟೊಗಳನ್ನು ನೋಡಿ ಥ್ರಿಲ್ ಆಗಿದ್ದಾರೆ.

ನಿನ್ನೆ (ಮೇ 22) ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಹೈವೋಲ್ಟೇಜ್ ಪಂದ್ಯ ಹೈದರಾಬಾದ್‌ನಲ್ಲಿಯೇ ನಡೆದಿತ್ತು. ಹೀಗಾಗಿ ಆರ್‌ಸಿಬಿ ತಂಡ ಕೂಡ ಅಲ್ಲೇ ಬೀಡು ಬಿಟ್ಟಿತ್ತು. ಇತ್ತ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಆರ್‌ಸಿಬಿಯ ಹಾರ್ಡ್‌ಕೋರ್ ಫ್ಯಾನ್. ಹೀಗಾಗಿ ಅಚಾನಕ್ ಆಗಿ ಅಲ್ಲು ಅರ್ಜುನ್ ಹಾಗೂ ವೆಂಕಟೇಶ್ ಅಯ್ಯರ್ ಇಬ್ಬರೂ ಭೇಟಿ ಆಗಿದೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಮನೆಯಲ್ಲಿ ವೆಂಕಟೇಶ್ ಅಯ್ಯರ್ ಭೇಟಿ ಮಾಡಿದ್ದರು ಎಂದೂ ವರದಿಯಾಗಿದೆ.

Also Read
ನಾನು ಅಲ್ಲು ಅರ್ಜುನ್ ಆಸ್ತಿಯಲ್ಲ ; ಗುಡುಗಿದ್ದೇಕೆ ನಟಿ - ಅಷ್ಟಕ್ಕೂ ಯಾರು ಈ ಚೆಲುವೆ ?
ನಾನು ಅಲ್ಲು ಅರ್ಜುನ್ ಆಸ್ತಿಯಲ್ಲ ; ಗುಡುಗಿದ್ದೇಕೆ ನಟಿ - ಅಷ್ಟಕ್ಕೂ ಯಾರು ಈ ಚೆಲುವೆ ?

ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಹೂಗುಚ್ಛ ಕೊಟ್ಟು ವೆಂಕಟೇಶ್ ಅಯ್ಯರ್ ಅವರನ್ನು ಸ್ವಾಗತ ಮಾಡಿರೋ ಫೋಟೊಗಳು ವೈರಲ್ ಆಗಿವೆ. ಸ್ವತ: ಅಲ್ಲು ಅರ್ಜುನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೊಗಳನ್ನು ಶೇರ್ ಮಾಡಿದ್ದಾರೆ. ವೆಂಕಟೇಶ್ ಅಯ್ಯರ್‌ಗೆ ಧನ್ಯವಾದಗಳನ್ನು ತಿಳಿಸಿದ್ದು, ಅವರ ಭವಿಷ್ಯಕ್ಕೂ ಶುಭ ಕೋರಿದ್ದಾರೆ.

ಇದೇ ವೇಳೆ ವೆಂಕಟೇಶ್ ಅಯ್ಯರ್ ತಮ್ಮ ಸ್ಪೆಷಲ್ ಆರ್‌ಸಿಬಿ ಜರ್ಸಿಯನ್ನು ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಆ ಜರ್ಸಿಯಲ್ಲಿ ವೆಂಕಟೇಶ್ ಅಯ್ಯರ್ ಅವರ ಹಸ್ತಾಕ್ಷರ ಕೂಡ ಇದೆ. ಈ ವಿಷಯವನ್ನೂ ಅಲ್ಲು ಅರ್ಜುನ್ ಶೇರ್ ಮಾಡಿದ್ದಾರೆ. ಅಲ್ಲು ಅಯಾನ್ ಹೇಳಿ-ಕೇಳಿ ಆರ್‌ಸಿಬಿ ಫ್ಯಾನ್. ಕಳೆದ ಸೀಸನ್ ಆರ್‌ಸಿಬಿ ಗೆಲ್ಲುತ್ತಿದ್ದಂತೆ ಖುಷಿಯಲ್ಲಿ ಕುಣಿದಾಡಿದ್ದರು.

ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದರು. ಆ ಖುಷಿಯನ್ನು ತಡೆಯಲಾಗದೆ ತಲೆ ಮೇಲೆ ನೀರು ಹಾಕಿಕೊಂಡು ಖುಷಿ ಪಟ್ಟಿದ್ದರು. ಆ ವಿಡಿಯೋವನ್ನು ಅಲ್ಲು ಅರ್ಜುನ್ ಶೇರ್ ಮಾಡಿದ್ದರು. ಹೀಗಾಗಿ ವೆಂಕಟೇಶ್ ಅಯ್ಯರ್ ಅವರ ಜರ್ಸಿ ಸಖತ್ ಸ್ಪೆಷಲ್ ಆಗಿರುತ್ತೆ. ಇನ್ನು ಐಪಿಎಲ್ ಕೊನೆಯ ಹಂತ ತಲುಪಿದೆ. ಆರ್‌ಸಿಬಿ ಟಾಪ್‌ನಲ್ಲಿದೆ. ಅತ್ತ ಅಲ್ಲು ಅರ್ಜುನ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸದ್ಯ ಇಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

English summary
RCB star player Venkatesh Iyer met Allu Arjun in Hyderabad and gifted jersey to his son.
Read more about: allu arjun rcb tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X