ನಟಿಗೆ ಮುತ್ತಿನ ಮಳೆ ಸುರಿಸಿದ RGV: ಪೋಟೊಗೆ ಟೈಟಲ್ ಕೊಟ್ಟವರಿಗೆ 1 ಲಕ್ಷ ಬಹುಮಾನ
ಸಿನಿಮಾ ತಾರೆಯರು ವಿವಾದ ಅಂದರೆ ಓಡಿ ಹೋಗುತ್ತಾರೆ. ಆದರೆ, ಟಾಲಿವುಡ್‌ನ ಡೇರಿಂಗ್ ಡೈರೆಕ್ಟರ್ ಆರ್‌ಜಿವಿ ಮಾತ್ರ ವಿವಾದಗಳನ್ನು ಬೇಕು ಅಂತಲೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಆರ್‌ಜಿವಿಗೆ ವಿವಾದಗಳು ಹೊಸತೇನಲ್ಲ. ಯಾವಾಗಲೂ ಏನಾದರೂ ಒಂದು ವಿವಾದ ಇವರ ಸುತ್ತ ಗಿರಿಕಿ ಹೊಡೆಯುತ್ತಲೇ ಇರುತ್ತೆ. ಈಗ ಪಬ್‌ನಲ್ಲಿ ನಟಿಯ ಜೊತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ ಆರ್‌ಜಿವಿ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಆರ್‌ಜಿವಿಗೆ ಹುಡುಗಿಯರು, ಪಾರ್ಟಿ ಇದ್ಯಾವುದೂ ಹೊಸತೇನಲ್ಲ. ಖುಷಿಯಿದ್ದಾಗಲೆಲ್ಲಾ ಪಾರ್ಟಿ ಮೂಡಿಗೆ ಜಾರುವ ಆರ್‌ಜಿವಿ ಎನಾದರೂ ಒಂದು ಕಿತಾಪತಿ ಮಾಡಿಕೊಳ್ಳುತ್ತಾರೆ. ಈ ಬಾರಿ ಕೂಡ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆ ಪಾರ್ಟಿ ಮಾಡಿದ್ದಾರೆ. ಮದ್ಯಪಾನ ಮಾಡಿ ಆ ನಟಿ ಜೊತೆ ಹೆಜ್ಜೆ ಹಾಕಿದ್ದಾರೆ. ತಬ್ಬಿ ಮುತ್ತಿಕ್ಕಿದ್ದಾರೆ. ಆ ಕ್ಷಣದ ಫೋಟೊಗಳನ್ನು ಒಂದರ ಹಿಂದೊಂದರಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಆ ಫೋಟೊಗಳಿಗೆ ಟೈಟಲ್ ಕೊಟ್ಟವರಿಗೆ ಹಣ ನೀಡುವುದಾಗಿಯೂ ಹೇಳಿದ್ದಾರೆ. ಇದು ನೆಟ್ಟಿಗರನ್ನು ಕೆರಳಿಸಿದೆ.

ಆರ್‌ಜಿವಿ ಮುತ್ತಿಟ್ಟ ಪೋಟೊ ವೈರಲ್
ಪ್ರತಿಬಾರಿ ರಾಮ್ ಗೋಪಾಲ್ ವರ್ಮಾ ಪಾರ್ಟಿ ಮಾಡಿದಾಗಲೂ ಏನಾದರೂ ಒಂದು ಅಚ್ಚರಿ ಕೊಟ್ಟೇ ಕೊಡುತ್ತಾರೆ. ಆದರೆ, ಇವರ ನಡೆ ಕೆಲವರಿಗೆ ಮುಜುಗರ ತರಿಸಿದ್ದೂ ಇದೆ. ನಿನ್ನೆ ರಾತ್ರಿ (ಜನವರಿ 27) ಆರ್‌ಜಿವಿ ಪಬ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಮದ್ಯಪಾನ ಮಾಡಿ ನಟಿಯೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದರು. ಈ ವೇಳೆ ಆ ನಟಿಗೆ ಕಿಸ್ ಮಾಡುವ ಸಂದರ್ಭವನ್ನು ಸೆಲ್ಫಿ ತೆಗೆದುಕೊಂಡು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಒಂದರ ಹಿಂದೊಂದು ಫೋಟೊ ಹಾಗೂ ವಿಡಿಯೋವನ್ನು ಶೇರ್ ಮಾಡಿ ಹಲ್‌ಚಲ್ ಎಬ್ಬಿಸಿದ್ದರು.
ಮುತ್ತಿನ ಫೋಟೊಗೆ ಶೀರ್ಷಿಕೆ ಕೊಟ್ಟವರಿಗೆ 1 ಲಕ್ಷ
ಟ್ವಿಟರ್‌ನಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿ ಸುಮ್ಮನಿದ್ದದ್ದರೂ ನೆಟ್ಟಿಗರು ತಲೆಕೆಡಸಿಕೊಳ್ಳುತ್ತಿರಲಿಲ್ಲವೇನೋ. ಆರ್‌ಜಿವಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಾನು ಕಿಸ್ ಮಾಡಿದ ಫೋಟೊಗೆ ಅತ್ಯುತ್ತಮ ಶೀರ್ಷಿಕೆ ಕೊಟ್ಟವರಿಗೆ 1 ಲಕ್ಷ ನೀಡುವುದಾಗಿ ಹೇಳಿದ್ದರು. " ನನ್ನ ಅಭಿಮಾನಿಗಳು ಹಾಗೂ ನನ್ನ ವಿರೋಧಿಗಳಲ್ಲಿ ಮನವಿ. ಈ ಫೋಟಗಳಿಗೆ ಶೀರ್ಷಿಕೆ ಕೊಡಿ. ಅತ್ಯುತ್ತಮ ಶೀರ್ಷಿಕೆ ಕೊಟ್ಟವರಿಗೆ 1 ಲಕ್ಷ ಸಿಗುತ್ತೆದೆ." ಎಂದು ಆರ್‌ಜಿವಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ.

ಆರ್‌ಜಿವಿ ಕಿಸ್ ಮಾಡಿದ ಹುಡುಗಿ ಯಾರು?
ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿದ ಕಿಸ್ಸಿಂಗ್ ಫೋಟೊಗಳು ಎಷ್ಟು ಸದ್ದು ಮಾಡುತ್ತಿವೆ. ಇದರ ಜೊತೆನೇ ಆರ್‌ಜಿವಿ ಜೊತೆ ಇದ್ದ ಆ ನಟಿ ಯಾರು? ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೆ, ಸ್ವತ: ಆರ್‌ಜಿವಿನೇ ಆ ನಟಿಗೆ ಟ್ಯಾಗ್ ಮಾಡಿ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಆಕೆ ಆಂಧ್ರ ಯುವ ನಟಿ ಇನಯಾ ಸುಲ್ತಾನಾ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. 'ಬುಜ್ಜಿ ಇಲಾ ರಾ' ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗಿದೆ. ಸದ್ಯ ಆರ್‌ಜಿವಿ ಈ ಫೋಟೊವನ್ನು ಡಿಲೀಟ್ ಮಾಡಿದ್ದಾರೆ.

ನಟಿಯ ಬರ್ತ್‌ಡೇ ಪಾರ್ಟಿಯಲ್ಲಿ ಹುಚ್ಚೆದ್ದು ಕುಣಿದಿದ್ದ ಆರ್‌ಜಿವಿ
ಕೆಲವು ತಿಂಗಳುಗಳ ಹಿಂದೆ ಆರ್‌ಜಿವಿ ಇದೇ ನಟಿಯೊಂದಿಗೆ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಆಗಲೂ ಸೋಶಿಯಲ್ ಮೀಡಿಯಾದಲ್ಲಿ ಜನರು ಆರ್‌ಜಿವಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದರು. ಬಳಿಕ ಆರ್‌ಜಿವಿ ಆ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ, ಇನಯಾ ಸುಲ್ತಾನಾ ತನ್ನ ಬರ್ತ್‌ಡೇ ಸೆಲೆಬ್ರೆಷನ್ ಪೋಟೊವನ್ನು ಟ್ವೀಟ್ ಮಾಡಿದ್ದರು. ಆ ಫೋಟೊದಲ್ಲಿ ಆರ್‌ಜಿವಿ ಕಾಣಿಸಿಕೊಂಡಿದ್ದರು.


Click it and Unblock the Notifications











