ನನ್ನ ದೇಹವನ್ನು ಮುಟ್ಟಲು ಯುವಕರು ವೈದ್ಯರಾಗುತ್ತಿದ್ದಾರೆ: 'ಆಚಾರ್ಯ' ವಿವಾದ ಸೃಷ್ಟಿಸಿದ 'ಆಚಾರ್ಯ'

ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಟಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ನೋಡಲು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕಾಜಲ್ ಅಗರ್ವಾಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿರು ಪುತ್ರ ರಾಜ್‌ಚರಣ್ ತೇಜಾ ಕೂಡ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ತೆರೆಮೇಲೆ ಅಬ್ಬರಿಸಲಿದ್ದಾರೆ.

ಟಾಲಿವುಡ್‌ನಲ್ಲಿ ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವ 'ಆಚಾರ್ಯ' ಸಿನಿಮಾ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಅದೂ ಒಂದು ಐಟಂ ಸಾಂಗ್‌ನಿಂದ ಕಾಂಟ್ರವರ್ಸಿಗೆ ಸಿಲುಕಿದೆ. ಇಲ್ಲಿನ ವೈದ್ಯರ ಸಂಘ ಚಿರಂಜೀವಿಯ 'ಆಚಾರ್ಯ' ಸಿನಿಮಾದ ವಿರುದ್ಧ ಕಿಡಿಕಾರುತ್ತಿದ್ದಾರೆ. 'ಸಾನ ಕಷ್ಟಂ' ಐಟಂ ಸಾಂಗಿನ ಒಂದು ಸಾಲು ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಈ ವಿವಾದಕ್ಕೆ ಕಾರಣವೇನು? ಅಂತ ತಿಳಿಯಲು ಮುಂದೆ ಓದಿ.

 'ಆಚಾರ್ಯ' ವಿರುದ್ಧ ವೈದರು ಕಿಡಿ

'ಆಚಾರ್ಯ' ವಿರುದ್ಧ ವೈದರು ಕಿಡಿ

'ಆಚಾರ್ಯ' ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಇತ್ತೀಚೆಗೆ ಒಂದು ಐಟಂ ಸಾಂಗ್‌ನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. 'ಸಾನ ಕಷ್ಟಂ' ಎನ್ನುವ ಹಾಡಿನಲ್ಲಿ ಚಿರಂಜೀವಿ ಸರ್ಜಾ ಹಾಗೂ ನಟಿ ರೆಜಿನಾ ಕ್ಯಾಸೆಂಟ್ರಾ ಹೆಜ್ಜೆ ಹಾಕಿದ್ದಾರೆ. ಇದೇ ಐಟಂ ಸಾಂಗಿನ ಒಂದು ಹಾಡು ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಈ ಹಾಡಿನಲ್ಲಿ ಬರುವ ಒಂದು ಸಾಲಿನ ವಿರುದ್ಧ ಕಾರ್ಯನಿರತ ವೈದ್ಯರ ಸಂಘ ಆಕ್ಷೇಪಣೆ ವ್ಯಕ್ತಪಡಿಸಿದ್ದು ನಿರ್ದೇಶಕ ಕೊರಟಾಲ ಶಿವ ಹಾಗೂ ಸಿನಿ ಸಾಹಿತಿ ಭಾಸ್ಕರಬಾಟ್ಲಾ ವಿರುದ್ಧ ದೂರು ದಾಖಲಿಸಿದ್ದಾರೆ.

'ಆಚಾರ್ಯ' ಹಾಡಿನಲ್ಲಿ ಅಂತಹದ್ದೇನಿದೆ?

'ಆಚಾರ್ಯ' ಹಾಡಿನಲ್ಲಿ ಅಂತಹದ್ದೇನಿದೆ?

'ಆಚಾರ್ಯ' ಸಿನಿಮಾದ ಐಟಂ ಸಾಂಗಿನ ಲಿರಿಕಲ್ ವಿಡಿಯೋ ನೋಡಿ ಸಿನಿಪ್ರಿಯರು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಆಂಧ್ರದ ಕಾರ್ಯನಿರತ ವೈದ್ಯರು ಮಾತ್ರ ಈ ಹಾಡಿನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಭಾಸ್ಕರಭಾಟ್ಲ ಬರೆದ ಈ ಹಾಡಿನ ಒಂದು ಸಾಲು. ಅಷ್ಟಕ್ಕೂ ಆ ಸಾಲಿನಲ್ಲಿ ಅಂತಹದ್ದೇನಿದೆ ಅಂದರೆ, " ನನ್ನ ದೇಹದ ಕೆಲವು ಭಾಗಗಳನ್ನು ಮುಟ್ಟಲು ಅವಕಾಶ ಸಿಗಲೆಂದೇ ಯುವಕರು ರೆಗ್ಯೂಲರ್ ವೈದ್ಯರಾಗುತ್ತಿದ್ದಾರೆ." ಎಂದು ಐಟಂ ಸಾಂಗಿನಲ್ಲಿ ಬರೆಯಲಾಗಿದೆ. ಇದೇ ಸಾಲಿನ ವಿರುದ್ಧ ಆರ್‌ಎಂಪಿ ವೈದ್ಯರು ಕಿಡಿಕಾರುತ್ತಿದ್ದಾರೆ.

ಆಚಾರ್ಯ ವಿರುದ್ಧ ದೂರು ನೀಡಿದ್ದು ಯಾರು?

ಆಚಾರ್ಯ ವಿರುದ್ಧ ದೂರು ನೀಡಿದ್ದು ಯಾರು?

'ಸಾನ ಕಷ್ಟಂ' ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಆರ್‌ಎಂಪಿ ಸಂಘ ಮುಜುಗರಕ್ಕೆ ಒಳಗಾಗಿದೆ. ಹೀಗಾಗಿ 'ಆಚಾರ್ಯ' ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದಾರೆ. ಆರ್‌ಎಂಪಿ ವೈದ್ಯ ಪಸುನೂರಿ ಸತ್ಯನಾರಾಯಣ ಎಂಬುವವರು ಐಟಂ ಸಾಂಗಿನ ಸಾಹಿತಿ ಭಾಸ್ಕರಭಾಟ್ಲ ಹಾಗೂ ನಿರ್ದೇಶಕ ಕೊರಟಾಲ ಶಿವ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಇದರಿಂದ 'ಆಚಾರ್ಯ' ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ.

ಫೆಬ್ರವರಿಗೆ ಆಚಾರ್ಯ ರಿಲೀಸ್

ಫೆಬ್ರವರಿಗೆ ಆಚಾರ್ಯ ರಿಲೀಸ್

'ಆಚಾರ್ಯ' ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ರಾಮ್‌ ಚರಣ್, ಸೋನು ಸೂದ್ ಸೇರಿದಂತೆ ಹಲವು ಮಂದಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯ ಫೆಬ್ರವರಿ 4ರಂದು ಬಿಡುಗಡೆಗೆ ಸಜ್ಜಾಗಿದೆ. ಆದರೆ, ಹೆಚ್ಚುತ್ತಿರುವ ಕೊರೊನಾ ಹಾವಳಿಯಿಂದ ಈ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ 'ಆಚಾರ್ಯ' ಸಿನಿಮಾ ವಿವಾದಕ್ಕೀಡಾಗಿದ್ದು, ಚಿತ್ರತಂಡಕ್ಕೆ ತಲೆ ನೋವಾಗಿದೆ.

More from Filmibeat

English summary
RPM doctors association complaint on Chiranjeevi Regina starrer Acharya movie item song. The RMP association objected the Acharya song Saana Kashtam, filed a complaint against lyricist Bhaskarabhatla and director Koratala Siva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X