RRR Day 2 Box Office Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?
ರಾಜಮೌಳಿ ನಿರ್ದೇಶನದ ಮತ್ತೊಂದು ಮೆಗಾ ಮೂವಿ RRR. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಭಿನಯದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಮತ್ತೆ ರಾಜಮೌಳಿ ಮುಂದೆ ಬಾಲಿವುಡ್ ಸಿನಿಮಾ ಏನೂ ಇಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾಗಿದೆ. ಮೊದಲ ದಿನ ಹುಬ್ಬೇರಿಸುವಂತೆ ಬಾಕ್ಸಾಫೀಸ್ ಲೂಟಿ ಮಾಡಿದ್ದ ಜಕ್ಕಣ್ಣ ಎರಡೇ ದಿನವೂ ಚಿಂದಿ ಉಡಾಯಿಸಿದ್ದಾರೆ.
ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿದೆ. ಮೊದಲ ದಿನ ಸಿನಿಮಾ ಬಿಡುಗಡೆಯಾದ ಎಲ್ಲಾ ರಾಜ್ಯಗಳ ಬಾಕ್ಸಾಫೀಸ್ ಅನ್ನೇ ಲೂಟಿ ಮಾಡಿದೆ. ಮತ್ತೊಂದು ರಾಜಮೌಳಿ ಬಾಕ್ಸಾಫೀಸ್‌ಗೆ ಬಾಸ್ ಅನ್ನುವುದನ್ನು ಸಾಬೀತು ಮಾಡಿದ್ದಾರೆ.
RRR ಇಡಿ ವಿಶ್ವದದ್ಯಾಂತ ಬಿಡುಗಡೆಯಾಗಿದೆ. ಇದೇ ಮೊದಲ ಭಾರಿಗೆ ವಿದೇಶದಲ್ಲೆಡೆ ಮೊದಲ ದಿನವೇ ಕೋಟಿ ಕೋಟಿ ಲೂಟಿ ಮಾಡಿದೆ. ಇದು ರಾಜಮೌಳಿ ಸಿನಿಮಾದ ಮತ್ತೊಂದು ದಾಖಲೆ. ಈಗ ಎರಡನೇ ದಿನವೂ ಕೇವಲ ಆಂಧ್ರ, ತೆಲಂಗಾಣದಲ್ಲಿಯೆ ಅದ್ಭುತ ಕೆಲಕ್ಷನ್ ಮಾಡಿದೆ. ಯಾವುದೇ ಬಾಲಿವುಡ್ ಸಿನಿಮಾ ಮಾಡದಷ್ಟು ಗಳಿಕೆ ಕಂಡಿದೆ. ಅದರ ಡಿಟೈಲ್ ರಿಪೋರ್ಟ್ ಇಲ್ಲಿದೆ.

RRR ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೀಪಟ
'ಬಾಹುಬಲಿ' ಬಳಿಕ ಮತ್ತೆ ಬಾಕ್ಸಾಫೀಸ್‌ನಲ್ಲಿ ಹೊಸ ಹುಮ್ಮಸ್ಸು ಕಾಣಿಸುತ್ತಿದೆ. ರಾಜಮೌಳಿ ಭಾರತದ ಯಾವುದೇ ಸಿನಿಮಾ ಜೊತೆನೂ ಅಲ್ಲ, ಸ್ವತ: ತಮ್ಮ ಸಿನಿಮಾದೊಂದಿಗೆ ಕಾಂಪಿಟೇಷನ್‌ಗೆ ಇಳಿಸಿದ್ದಾರೆ. ಧೂಳೀಪಟ ಮೊದಲ ದಿನ ಯಾರೂ ಊಹಿಸದಷ್ಟು ಗಳಿಕೆ ಮಾಡಿತ್ತು. ಎರಡನೇ ದಿನ ಆ ಕಲೆಕ್ಷನ್‌ನಲ್ಲ ಇಳಿಕೆ ಕಂಡಿದ್ದರೂ, ಇದು ದಾಖಲೆ ಎನ್ನಬಹುದು. ಕೊರೊನಾ ಬಳಿಕ ಭಾರತದ ಮತ್ತೆ ಬಾಕ್ಸಾಫೀಸ್‌ಗೆ ಹೊಸ ಹುರುಷು ನೀಡಿದೆ. ಅದರಲ್ಲೂ ಆಂಧ್ರ, ತೆಲಂಗಾಣ ಗಲ್ಲಾಪೆಟ್ಟಿಗೆ ಗಲ ಗಲ ಅಂತಿದೆ.

RRR 2ನೇ ದಿನ ಗಳಿಕೆ ಎಷ್ಟು?
RRR ಎರಡನೇ ದಿನವೂ ಭರ್ಜರಿ ಗಳಿಕೆ ಕಂಡಿದೆ. ಸದ್ಯ ಆಂಧ್ರ ಹಾಗೂ ತೆಲಂಗಾಣದ ಕಲೆಕ್ಷನ್ ಅಷ್ಟೇ ಲಭ್ಯವಿದೆ. ಎಲ್ಲಾ ಸಿನಿಮಾಗಳಂತೆ RRR ಕೂಡ ಮೊದಲ ದಿನಕ್ಕಿಂತ ಕೊಂಚ ಇಳಿಕೆ ಕಂಡಿದೆ. ಮೂಲಗಳ ಪ್ರಕಾರ, RRR ಎರಡನೇ ದಿನ ಬರೋಬ್ಬರಿ 30 ಕೋಟಿಯಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಈ ಮೂಲಕ RRR ಕೇಲವ ಎರಡು ದಿನಗಳಲ್ಲೇ, ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಲೂಟಿ ಮಾಡಿದಂತಾಗಿದೆ. ಮೊದಲ ದಿನ 75 ಕೋಟಿ ಗಳಿಸಿದ್ರೆ, ಎರಡನೇ ದಿನ 30 ಕೋಟಿ ಗಳಿಸಿದೆ. ಒಟ್ಟು ಸೇರಿದರೆ 105 ಕೋಟಿ ಲೂಟಿ ಮಾಡಿದಂತಾಗಿದೆ.

RRR ವಿಶ್ವದಾದ್ಯಂತ ಗಳಿಸಿದ್ದೆಷ್ಟು?
RRR ಸಿನಿಮಾ ಮೊದಲ ವಿಶ್ವದಾದ್ಯಂತ ಎಲ್ಲೆಲ್ಲಿ ಎಷ್ಟೆಷ್ಟು ಲೂಟಿ ಮಾಡಿದೆ ಅಂತ ನೋಡಿದರೆ, ಆಶ್ಚರ್ಯ ಆಗುತ್ತೆ. ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೂ ಈ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ವಿಶ್ವದಾದ್ಯಂತ ಎಲ್ಲೆಲ್ಲಿ ಎಷ್ಟೆಷ್ಟು? ಲೂಟಿ ಮಾಡಿದೆ ಅನ್ನುವುದರ ಡಿಟೈಲ್ಸ್ ಇಲ್ಲಿದೆ.
AP/TG - 75 ಕೋಟಿ
Nizam- 27.5 ಕೋಟಿ
Karnataka- 14.5 ಕೋಟಿ
Tamil Nadu- 10 ಕೋಟಿ
Kerala- 04 ಕೋಟಿ
North India- 25 ಕೋಟಿ
USA 42 ಕೋಟಿ
Non USA 25 ಕೋಟಿ
Total- 223 ಕೋಟಿ
Recommended Video


RRR 3ನೇ ದಿನದ ಗಳಿಕೆ ಲೆಕ್ಕವೇನು?
RRR ಸಿನಿಮಾ ರಜೆಗಳಿಲ್ಲದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಒಂದು ಲೆಕ್ಕದ ಪ್ರಕಾರ, ಇದೇ ಸಿನಿಮಾ ದೀಪಾವಳಿ, ಸಂಕ್ರಾಂತಿ ಅಂತಹ ಹಬ್ಬದ ರಜೆ ಇರುವ ದಿನಗಳಲ್ಲಿ ರಿಲೀಸ್ ಆಗಿದ್ದರೆ, ಕಲೆಕ್ಷನ್ ಇನ್ನೂ ಹೆಚ್ಚಾಗುತ್ತಿತ್ತು. ಆದರೂ, RRR ಕಲೆಕ್ಷನ್ ಹೊಸ ದಾಖಲೆ ಎನ್ನಲಾಗುತ್ತಿದೆ. ಸದ್ಯ, RRR ಮೂರನೇ ದಿನದ ಕಲೆಕ್ಷನ್ ಶನಿವಾರ(ಮಾರ್ಚ್ 26) ಕ್ಕಿಂತ ಹೆಚ್ಚಿರುತ್ತೆ ಎಂದು ಅಂದಾಜಿಸಲಾಗಿದೆ.


Click it and Unblock the Notifications











