ಮಾರ್ಚ್ 14ರಂದು ಮತ್ತೆ ಪ್ರಚಾರದ ಜಂಡಾ ಹಾರಿಸಲಿದೆ 'RRR' ಟೀಮ್

ಮೆಗಾ ಸಿನಿಮಾ ಮಾಂತ್ರಿಕ ಎಸ್.ಎಸ್ ರಾಜಮೌಳಿ ನಿರ್ದೇಶಿಸಿರುವ 'RRR' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಹಲವು ಬಾರಿ ಈ ಸಿನಿಮಾ ಪೋಸ್ಟ್ ಪೋನ್ ಆಗಿತ್ತು. ಇನ್ನೇನು ಸಿನಿಮಾ ರಿಲೀಸ್ ಆಗೇ ಬಿಟ್ಟಿತು ಅನ್ನುವಾಗಲೇ 'RRR' ಮತ್ತೆ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ ಕೊನೆಗೂ 'RRR' ಮಾರ್ಚ್ 25ಕ್ಕೆ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ. ದಿಗ್ಗಜರೇ ಸೇರಿಕೊಂಡಿರುವ ದುಬಾರಿ ಸಿನಿಮಾ 'RRR' ಮತ್ತೆ ಪ್ರಚಾರ ಆರಂಭ ಮಾಡಲು ಸಜ್ಜಾಗಿ ನಿಂತಿದೆ.

'RRR' ಸಿನಿಮಾ ನೋಡಲು ಸಿನಿಪ್ರಿಯರು ಕಾತುರದಿಂದ ಎದುರು ನೋಡುತ್ತಿದ್ದಾರೆ. 'ಬಾಹುಬಲಿ' ಅಂತಹ ರೆಕಾರ್ಡ್ ಬ್ರೇಕಿಂಗ್ ಸಿನಿಮಾ ನಿರ್ದೇಶಿಸಿದ ಬಳಿಕ ರಾಜಮೌಳಿ ನಿರ್ದೇಶಿಸಿದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಭಾರಿ ನಿರೀಕ್ಷೆಗಳನ್ನು ಹೊತ್ತು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಜೂ ಎನ್ ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಾರ್ಚ್ 14ರಿಂದ ಮತ್ತೆ ಸಿನಿಮಾ ಪ್ರಚಾರ ಆರಂಭ ಆಗಲಿದೆ.

'ಎತ್ತುವ ಜಂಡಾ' ಸಾಂಗ್ ರಿಲೀಸ್

'RRR' ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ರಿಲೀಸ್ ಆಗಬೇಕಿತ್ತು. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಲಾಗಿತ್ತು. ಈಗ ಕೊನೆಗೂ 'RRR' ಮಾರ್ಚ್ 25ಕ್ಕೆ ಬಿಡುಗಡೆಗೆ ಶಪಥ ಮಾಡಿ ನಿಂತಿದೆ. ಹೀಗಾಗಿ ಮತ್ತೆ ಅದ್ಧೂರಿಯಾಗಿ ಪ್ರಚಾರ ಮಾಡಲು ಮುಂದಾಗಿದೆ. ರಾಜಮೌಳಿ ಮಾರ್ಚ್ 14ಕ್ಕೆ 'RRR' ಸಿನಿಮಾದ ಎರಡನೇ ಹಾಡು ಎತ್ತುವ ಜಂಡಾ ಬಿಡುಗಡೆಯಾಗುತ್ತಿದೆ.

RRR Movie to Kick off Promotions With Second Song Etthuva Jenda on March 14th

ರಾಜಮೌಳಿ ಸಿನಿಮಾಗಳಿಗೆ ಬಹುತೇಕ ಸಂಗೀತ ನೀಡುವ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಈಗಾಗಲೇ ದೋಸ್ತಿ ಹಾಗೂ ಹಳ್ಳಿನಾಟು ಹಾಡುಗಳು ರಿಲೀಸ್ ಆಗಿವೆ. ಈ ಹಾಡುಗಳನ್ನು ಕೇಳಿ ಸಂಗೀತ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಇದೀಗ 'RRR' ತಂಡ ಮತ್ತೊಂದು ಪವರ್‌ಫುಲ್ ಸಾಂಗ್‌ ಅನ್ನು ಬಿಡುಗಡೆ ಮಾಡುತ್ತಿದೆ. ಮಾರ್ಚ್ 14ನೇ ತಾರೀಖಿನಂದು ಎತ್ತುವ ಜಂಡಾ ಹಾಡು ರಿಲೀಸ್ ಮಾಡುತ್ತಿದೆ. ಈ ಮೂಲಕ ರಾಜಮೌಳಿ ಪ್ರಚಾರದ ಕಹಳೆ ಮೊಳಗಿಸಲಿದ್ದಾರೆ.

ವಿದೇಶಿ ಭಾಷೆಗಳಲ್ಲೂ 'RRR' ರಿಲೀಸ್

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ. ಈ ಮೂಲಕ 'RRR' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ದೋಚುತ್ತೆ ಎನ್ನುವ ಕುತೂಹಲ ಕೆರಳಿಸಿದೆ. ಹೀಗಾಗಿ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಬಗ್ಗೆ ಅಲರ್ಟ್ ಆಗಿದ್ದಾರೆ.

RRR Movie to Kick off Promotions With Second Song Etthuva Jenda on March 14th

ಇದಷ್ಟೇ ಅಲ್ಲದೆ 'RRR' ಸಿನಿಮಾ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೂ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮಾರ್ಚ್ 25ರಂದು 2022ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 'RRR' ಸಿನಿಮಾವನ್ನು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆಯನ್ನು ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಮಾಡುತ್ತಿದೆ. ಬಾರಿ ಮೊತ್ತಕ್ಕೆ ಕರ್ನಾಟಕದ ಹಕ್ಕುಗಳನ್ನು ಖರೀದಿ ಮಾಡಿದ್ದು, ಕರ್ನಾಟಕ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿದೆ.

More from Filmibeat

English summary
RRR Movie to kick off promotions with second song Etthuva Jenda on March 14th. Rajamouli directed Jr Ntr, Ram Charan, Alia Bhatt, Ajay Devagan acted movie will be releasing on march 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X