Ram Charan:'RRR' ಸಿನಿಮಾದಿಂದ ಹಾಲಿವುಡ್‌ಗೆ ಹಾರಿದ ರಾಮ್ ಚರಣ್: Jr.NTR ಗ್ರೀನ್ ಸಿಗ್ನಲ್ ಕೊಡೋದ್ಯಾವಾಗ?
ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಈಗ ಗ್ಲೋಬಲ್ ಸ್ಟಾರ್.'RRR' ಸಿನಿಮಾ ವೀಕ್ಷಿಸಿದ ಬಳಿಕ ಜಗತ್ತಿನಾದ್ಯಂತ ಈ ಜೋಡಿಯ ಬಗ್ಗೆ ಮೆಚ್ಚುಗೆ ಮಾತುಗಳೇ ಕೇಳಿ ಬರುತ್ತಿವೆ. ಅದರಲ್ಲೂ "ನಾಟು ನಾಟು.." ಹಾಡಿನಲ್ಲಿ ಇವರಿಬ್ಬರ ಹೆಜ್ಜೆಗೆ ಇಡೀ ವಿಶ್ವವೇ ತಲೆದೂಗಿದೆ. ಹಾಲಿವ
ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಈಗ ಗ್ಲೋಬಲ್ ಸ್ಟಾರ್.'RRR' ಸಿನಿಮಾ ವೀಕ್ಷಿಸಿದ ಬಳಿಕ ಜಗತ್ತಿನಾದ್ಯಂತ ಈ ಜೋಡಿಯ ಬಗ್ಗೆ ಮೆಚ್ಚುಗೆ ಮಾತುಗಳೇ ಕೇಳಿ ಬರುತ್ತಿವೆ. ಅದರಲ್ಲೂ "ನಾಟು ನಾಟು.." ಹಾಡಿನಲ್ಲಿ ಇವರಿಬ್ಬರ ಹೆಜ್ಜೆಗೆ ಇಡೀ ವಿಶ್ವವೇ ತಲೆದೂಗಿದೆ. ಹಾಲಿವುಡ್‌ನ ದಿಗ್ಗಜರೆಲ್ಲಾ ಈ ಸಿನಿಮಾ ನೋಡಿ ಭೇಷ್ ಎಂದಿದ್ದಾರೆ.
ಸದ್ಯಕ್ಕೀಗ ಈ ಜೋಡಿ ಆಸ್ಕರ್ ಮೇಲೆ ಕಣ್ಣಿಟ್ಟಿದೆ. "ನಾಟು ನಾಟು.." ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಸ್ಪರ್ಧೆಗೆ ಇಳಿದಿರೋದ್ರಿಂದ ಆ ವಿಭಾಗದಲ್ಲಿ ಗೆದ್ದೇ ಗೆಲ್ಲುತ್ತೇವೆ ಅನ್ನೋ ವಿಶ್ವಾಸದಲ್ಲಿ ಇದ್ದಾರೆ. ಹೀಗಾಗಿ ರಾಮ್ ಚರಣ್ ಸದ್ಯ ಯುಎಸ್‌ಎಯ ಲಾಸ್ ಏಂಜಲೀಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿನ ಮಾಧ್ಯಮಗಳಿಗೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೇ ವೇಳೆ ತಮ್ಮ ಮೊದಲ ಹಾಲಿವುಡ್ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಹುಟ್ಟಾಕಿದೆ.

ಹಾಲಿವುಡ್ ಸಿನಿಮಾಗೆ ರಾಮ್ ಚರಣ್ ಗ್ರೀನ್ ಸಿಗ್ನಲ್
ಸ್ಯಾಮ್ ಫ್ರಗೊಸೊ ಪಾಡ್‌ಕಾಸ್ಟ್ ಜೊತೆಗಿನ ಚರ್ಚೆಯಲ್ಲಿ ರಾಮ್ ಚರಣ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ನಿರೂಪಕ ರಾಮ್ ಚರಣ್‌ಗೆ "ಹಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಯೋಚನೆ ಮಾಡಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆ ಮೆಗಾ ಪವರ್‌ಸ್ಟಾರ್ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, "ಹೌದು.. ಖಂಡಿತವಾಗಿಯೂ ಮಾತುಕತೆಯ ಹಂತದಲ್ಲಿದೆ." ಎಂದು ರಾಮ್ ಚರಣ್ ಉತ್ತರಕೊಟ್ಟಿದ್ದಾರೆ.
" ಈಗ ನಡೆಯುತ್ತಿರುವ ಮಾತುಕತೆ ಹೇಗೆ ಸಿನಿಮಾವಾಗಿ ಬದಲಾಗುತ್ತೆ ಅನ್ನೋದು ನೋಡಬೇಕಿದೆ. ಇನ್ನು ಕೆಲವು ತಿಂಗಳಲ್ಲಿ ಈ ಬಗ್ಗೆ ಸುದ್ದಿ ಹೊರಬೀಳಲಿದೆ" ಎಂದು ರಾಮ್ ಚರಣ್ ತೇಜಾ ಹೇಳಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಾಮ್ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
"ಹಾಲಿವುಡ್ ತಾರೆಯೊಂದಿಗೆ ಕೆಲಸ ಮಾಡ್ಬೇಕು"
ಇದೇ ವೇಳೆ ರಾಮ್ ಚರಣ್ ಹಾಲಿವುಡ್ ಸೆಲೆಬ್ರೆಟಿಗಳ ಜೊತೆ ಕೆಲಸ ಮಾಡಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದಲ್ಲದೆ, ಪಟ್ಟಿಯೊಂದನ್ನು ಮುಂದಿಟ್ಟಿದ್ದಾರೆ. ಹಾಲಿವುಡ್‌ನ ಜನಪ್ರಿಯ ತಾರೆಯರಾದ ಜೂಲಿಯಾ ರಾಬರ್ಟ್ಸ್, ಟಾಮ್ ಕ್ರೂಸ್ ಹಾಗೂ ಬ್ರಾಡ್ ಪಿಟ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆನೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

'RRR' ಸಿನಿಮಾ ಬಳಿಕ ಹಾಲಿವುಡ್ ಸಿನಿಮಾ ಮಂದಿಗೆ ರಾಮ್ ಚರಣ್ ತೀರ ಆತ್ಮೀಯರಾಗಿದ್ದಾರೆ. ಈ ಕಾರಣಕ್ಕೆ ಇತ್ತೀಚೆಗೆ ನಡೆದ ಟಾಕ್ ಶೋ ಒಂದರಲ್ಲಿ ಇವರನ್ನು ಭಾರತದ ಬ್ರಾಡ್ ಪಿಟ್ ಎಂದು ಕರೆದಿದ್ದರು. ರಾಮ್ ಚರಣ್ ಜೊತೆಗೆ ಜೂ.ಎನ್‌ಟಿಆರ್ ಕೂಡ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಜೂ.ಎನ್‌ಟಿಆರ್ ಕೂಡ ಇಂತಹ ಖುಷಿ ಕೊಡುವಂತಹ ಪ್ರಾಜೆಕ್ಟ್ ಅನೌನ್ಸ್ ಮಾಡಲಿ ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Jr.NTR ಗ್ರೀನ್ ಸಿಗ್ನಲ್ ಕೊಡೋದ್ಯಾವಾಗ?
'RRR' ಸಿನಿಮಾ ರಿಲೀಸ್ ಆದಲ್ಲಿಂದ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ನಿರ್ದೇಶಕ ರಾಜಮೌಳಿ ವಿರುದ್ಧ ಜೂ.ಎನ್‌ಟಿಆರ್ ಅಭಿಮಾನಿಗಳು ಅಸಮಧಾನ ಹೊರಹಾಕಿದ್ದರು. ಒಬ್ಬರ ಕಣ್ಣಿಗೆ ಬೆಣ್ಣೆ,ಇನ್ನೊಬ್ಬರ ಕಣ್ಣಿಗೆ ಸುಣ್ಣ ಹಚ್ಚಿದ್ದಾರೆಂದು ಆರೋಪಿಸಿದ್ದರು. ಈಗ ರಾಮ್ ಚರಣ್ ಅಂತೆಯೇ ಜೂ.ಎನ್‌ಟಿಆರ್ ಕೂಡ ಹಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಅಂತ ಆಸೆ ಪಡುತ್ತಿದ್ದಾರೆ.
ಜೂ.ಎನ್‌ಟಿಆರ್ ಸದ್ಯ ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಜೂ.ಎನ್‌ಟಿಆರ್ ನಟಿಸುತ್ತಿರುವ 30ನೇ ಸಿನಿಮಾ. ಈಗಾಗಲೇ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಕೂಡ ತಂಡವನ್ನು ಸೇರಿಕೊಂಡಿದ್ದಾಗಿದೆ. ಈ ಮಧ್ಯೆ ಜೂ.ಎನ್‌ಟಿಆರ್ ಕೂಡ ಹಾಲಿವುಡ್ ಸಿನಿಮಾ ಅನೌನ್ಸ್ ಮಾಡಲಿ ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











