ಸೋಲಿನ ಕಹಿ ಉಂಡ ವಿಜಯ್‌ಗೆ ಪವನ್ ಕಲ್ಯಾಣ್ ನಿರ್ದೇಶಕನಿಂದ ಸಿನಿಮಾ: ಯಾರದು?

'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದನ್ನು ವಿಶೇಷವಾಗಿ ಹೇಳಬೇಕಿಲ್ಲ. ಬಹಳ ನಿರೀಕ್ಷೆ ಹುಟ್ಟಿಸಿದ್ದ 'ಲೈಗರ್' ಪ್ಯಾನ್ ಇಂಡಿಯಾ ಲೆವೆಲ್‌ಗೆ ಸದ್ದು ಮಾಡುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಲೆಕ್ಕಾಚಾರವೆಲ್ಲ ತಲೆಕೆಳಗಾಗಿತ್ತು.

ವಿಜಯ್ ದೇವರಕೊಂಡ ಹಿಂದೆಂದೂ ಈ ಮಟ್ಟಿಗೆ ಸೋಲುಂಡಿರಲಿಲ್ಲ. ಟಾಲಿವುಡ್‌ನ ಡೇರಿಂಗ್ ಡೈರೆಕ್ಟರ್ ಹಾಗೂ ವಿಜಯ್ ದೇವರಕೊಂಡ ಮೊದಲ ಕಾಂಬಿನೇಷನ್ ವರ್ಕ್‌ಔಟ್ ಆಗಲಿಲ್ಲ. ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿರುವ ವಿಜಯ್ ದೇವರಕೊಂಡ ಕಂಗಲಾಗಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ವಿಜಯ್ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶನ ಮಾಡುತ್ತಾರೆ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಟಾಲಿವುಡ್ ಅಂಗಳದಿಂದ ಸುದ್ದಿಯೊಂದು ಹೊರಬಿದ್ದಿದೆ.

ಸೋಲಿನ ಬಳಿಕ ಹೇಗೆ ವಿಜಯ್ ನಡೆಯೇನು?

ಸೋಲಿನ ಬಳಿಕ ಹೇಗೆ ವಿಜಯ್ ನಡೆಯೇನು?

ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಕೈಕೊಟ್ಟರೆ ಆ ಸ್ಟಾರ್ ನಟನ ಒಂದು ಹೆಜ್ಜೆ ಹಿಂದೆ ಇಟ್ಟಂತೆ. ಸಿನಿಮಾ ಮಾಡಬೇಕು ಅಂದುಕೊಂಡವರೆಲ್ಲ ಹಿಂದೆ ಸರಿದು ಬಿಡುತ್ತಾರೆ. 'ಲೈಗರ್' ಸೋಲಿನ ಬಳಿಕ ವಿಜಯ್ ದೇವರಕೊಂಡಗೆ ಸಿನಿಮಾ ಮಾಡೋರು ಯಾರು? ಗ್ರೀನ್ ಸಿಗ್ನಲ್ ಕೊಟ್ಟವರೆಲ್ಲಾ ಹಿಂದೆ ಸರಿಯುತ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಇನ್ನೊಂದು ಕಡೆ ವಿಜಯ್ ದೇವರಕೊಂಡ ಹೀನಾಯ ಸೋಲಿನಿಂದ ಕಂಗೆಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಪವನ್ ಕಲ್ಯಾಣ್ ನಿರ್ದೇಶಕನಿಂದ ಸಿನಿಮಾ

ಪವನ್ ಕಲ್ಯಾಣ್ ನಿರ್ದೇಶಕನಿಂದ ಸಿನಿಮಾ

'ಲೈಗರ್' ಅಂತಹ ದೊಡ್ಡ ಫ್ಲಾಪ್ ಸಿನಿಮಾ ನೀಡಿದ ಬಳಿಕವೂ ಮಾಸ್ ಡೈರೆಕ್ಟರ್ ಒಬ್ಬರು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಅದೂ ಪವನ್ ಕಲ್ಯಾಣ್ ಅಂತ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಾರೆ ಎಂದು ವರದಿಯಾಗಿದೆ. ಅಂದ್ಹಾಗೆ ಪವನ್ ಕಲ್ಯಾಣ್‌ಗಾಗಿ 'ಗಬ್ಬರ್ ಸಿಂಗ್' ಸಿನಿಮಾ ನಿರ್ದೇಶಿಸಿದ್ದ ಹರೀಶ್ ಶಂಕರ್ ವಿಜಯ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿದೆ.

'ಗೀತ ಗೋವಿಂದಂ' ಬಳಿಕ ಸೆಟ್ಟೇರಬೇಕಿತ್ತು

'ಗೀತ ಗೋವಿಂದಂ' ಬಳಿಕ ಸೆಟ್ಟೇರಬೇಕಿತ್ತು

ವಿಜಯ್ ದೇವರಕೊಂಡ ಹಾಗೂ ಹರೀಶ್ ಶಂಕರ್ ಸಿನಿಮಾ ಈ ಹಿಂದೆನೇ ಸೆಟ್ಟೇರಬೇಕಿತ್ತು. 'ಗೀತ ಗೋವಿಂದಂ' ಬ್ಲಾಕ್‌ ಬಸ್ಟರ್ ಹಿಟ್ ಆಗುತ್ತಿದ್ದಂತೆ ವಿಜಯ್ ಜೊತೆ ಸಿನಿಮಾ ಮಾಡಲು ಹರೀಶ್ ಶಂಕರ್ ಮುಂದಾಗಿದ್ದರು. ಆದರೆ, ಆಗ ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದೀಗ ಪವನ್ ಕಲ್ಯಾಣ್‌ಗೆ ನಿರ್ದೇಶಿಸಬೇಕಿದ್ದ ಸಿನಿಮಾ ತಡವಾಗುತ್ತಿರೋದ್ರಿಂದ ಹರೀಶ್ ಶಂಕರ್ ಟಾಲಿವುಡ್‌ ರೌಡಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

'ಖುಷಿ' ರಿಲೀಸ್ ಆಗಬೇಕಿದೆ

'ಖುಷಿ' ರಿಲೀಸ್ ಆಗಬೇಕಿದೆ

'ಲೈಗರ್' ಬಳಿಕ ಶಿವ ನಿರ್ಮಾಣ ನಿರ್ದೇಶಿಸುತ್ತಿರುವ 'ಖುಷಿ' ಸಿನಿಮಾ ಬಿಡುಗಡೆಯಾಗಲಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಸಿನಿಮಾವಿದು. ಇದೊಂದು ಪಕ್ಕಾ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಅಲ್ಲದೆ 'ಪುಷ್ಪ 2'ಬಳಿಕ ಸುಕುಮಾರ್ ಜೊತೆನೂ ವಿಜಯ್ ದೇವರಕೊಂಡ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಈ ಮಧ್ಯೆ ವಿಜಯ್ ಹಾಗೂ ಹರೀಶ್ ಶಂಕರ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

More from Filmibeat

English summary
Rumors Is That Pawan Kalyan Movie Director Harish Shankar Directing Vijay Devarakonda, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X