'ಕೆಜಿಎಫ್ ಚಾಪ್ಟರ್ 2' ಬಿಡುಗಡೆ ಬಗ್ಗೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನು?

ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದನ್ನು ಕಣ್ಣಾರೆ ನೋಡಿದ್ದೇವೆ. ಕೆಜಿಎಫ್ ಬಿಡುಗಡೆ ಬಳಿಕ ರಾಕಿಂಗ್ ಸ್ಟಾರ್ ದಿಢೀರನೇ ನ್ಯಾಷನಲ್ ಸ್ಟಾರ್ ಆಗಿದ್ದನ್ನೂ ಕಂಡಿದ್ದೇವೆ. ಇದೇ ವೇಳೆ 'ಕೆಜಿಎಫ್' ಗಿಂತ 'ಕೆಜಿಎಫ್ 2' ದಪ್ಪಟ್ಟು ಸದ್ದು ಮಾಡುತ್ತೆ ಅಂತ ಅಂದೇ ಯಶ್ ಹೇಳಿದ್ದರು. ಇದೊಂದೇ ಮಾತಿಗಾಗಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾದು ಕೂತಿದ್ದಾರೆ. ಆದರೆ, ಕೊರೊನಾದಿಂದಾಗಿ ಸಿನಿಮಾ ಬಿಡುಗಡೆ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಯಶ್ ಹಾಗೂ ಸಂಜಯ್ ದತ್ ಸಂಘರ್ಷವನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇಡೀ ವಿಶ್ವವೇ 'ಕೆಜಿಎಫ್ 2' ಸಿನಿಮಾ ನೋಡುವುದಕ್ಕೆ ಕಾದು ಕೂತಿದೆ. ಯಶ್ ಅಭಿಮಾನಿಗಳಂತೂ 'ಕೆಜಿಎಫ್ 2'ಗಾಗಿ ಮೂರು ವರ್ಷದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಘೋಷಣೆ ಮಾಡಿದ್ದಾರೆ. ಹೀಗಿದ್ದರೂ ಟಾಲಿವುಡ್‌ನಲ್ಲಿ ಕಳೆದೆರಡು ದಿನಗಳಿಂದ ಸಿನಿಮಾ ಮುಂದೂಡಿಕೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಟಾಲಿವುಡ್‌ನಲ್ಲಿ 'ಕೆಜಿಎಫ್ 2' ಬಗ್ಗೆ ಗಾಳಿ ಸುದ್ದಿ

ಟಾಲಿವುಡ್‌ನಲ್ಲಿ 'ಕೆಜಿಎಫ್ 2' ಬಗ್ಗೆ ಗಾಳಿ ಸುದ್ದಿ

'ಕೆಜಿಎಫ್ 2' ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಎಂದು ಘೋಷಿಸಿದೆ. ಆದರೆ, ಟಾಲಿವುಡ್‌ ಅಂಗಳದಲ್ಲಿ ಯಶ್ ಸಿನಿಮಾ ಏಪ್ರಿಲ್‌ಗೆ ರಿಲೀಸ್ ಆಗುವುದು ಅನುಮಾನ ಸುದ್ದಿಗಳು ಹರಿದಾಡುತ್ತಿದೆ. 'ಕೆಜಿಎಫ್ 2' ತಂಡ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವುದನ್ನು ಮುಂದೂಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ವತ: ಯಶ್ ಕೆಜಿಎಫ್ 2 ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಿದ್ದರೂ ಗಾಳಿಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿವೆ.

ಕೆಜಿಎಫ್ 2 ಬಿಡುಗಡೆ ಅಷ್ಟು ಸುಲಭವಲ್ಲ

ಕೆಜಿಎಫ್ 2 ಬಿಡುಗಡೆ ಅಷ್ಟು ಸುಲಭವಲ್ಲ

'ಕೆಜಿಎಫ್ 2' ಸಿನಿಮಾ ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬರುತ್ತೇವೆ ಎನ್ನುತ ಚಿತ್ರಮಂದಿರಕ್ಕೆ ಬರುವುದಕ್ಕೆ ಸಜ್ಜಾಗಿದೆ. ಆದರೆ, 'ಕೆಜಿಎಫ್ 2' ಏಪ್ರಿಲ್‌ನಲ್ಲಿ ರಿಲೀಸ್ ಆಗುವುದು ಅಷ್ಟು ಸುಲಭವಲ್ಲ ಎನ್ನುತ್ತಿದೆ ಟಾಲಿವುಡ್. ಯಾಕಂದ್ರೆ, ರಾಜಮೌಳಿ ನಿರ್ದೇಶನದ 'RRR', ಪ್ರಭಾಸ್ 'ರಾಧೆ ಶ್ಯಾಮ್', ಅಜಿತ್ 'ವಲಿಮೈ' ಸಿನಿಮಾಗಳು ಈಗಾಗಲೇ ಪೋಸ್ಟ್‌ಪೋನ್ ಆಗಿವೆ. ಹೀಗಾಗಿ ಈ ಎಲ್ಲಾ ಸಿನಿಮಾಗಳ ಬಿಡುಗಡೆ ಬಳಿಕ 'ಕೆಜಿಎಫ್ 2' ರಿಲೀಸ್ ಆಗಬೇಕು. ಹೀಗಾಗಿ ಏಪ್ರಿಲ್‌ನಲ್ಲಿ ಭಾರೀ ದೊಡ್ಡ ಕ್ಲ್ಯಾಶ್ ಆಗಬಹುದು ಎನ್ನುತ್ತಿವೆ.

ಏಪ್ರಿಲ್ ತಿಂಗಳಲ್ಲಿ ಮಹಾ ಸಮರ

ಏಪ್ರಿಲ್ ತಿಂಗಳಲ್ಲಿ ಮಹಾ ಸಮರ

ಕೊರೊನಾ ಮೂರನೇ ಅಲೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಹೆಚ್ಚು ಇರುತ್ತೆ ಎಂದು ಊಹಿಸಲಾಗಿದೆ. ಹೀಗಾಗಿ ಇನ್ನು ಮೂರು ತಿಂಗಳು ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ, ಈ ವೇಳೆ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಸಹಜವಾಗಿಯೇ ಏಪ್ರಿಲ್‌ಗೆ ಪೋಸ್ಟ್ ಪೋನ್ ಆಗುತ್ತವೆ. ಒಂದು ವೇಳೆ ಇಂತಹ ಸನ್ನಿವೇಶ ಎದುರಾದರೆ, ಏಪ್ರಿಲ್‌ನಲ್ಲಿ ಚಿತ್ರಮಂದಿರಕ್ಕಾಗಿ ಕಾದಾಟ ಶುರುವಾಗುವುದು ಪಕ್ಕಾ ಅಂತಿದೆ ಟಾಲಿವುಡ್.

'ಕೆಜಿಎಫ್ 2' ನೋಡಲು ಫ್ಯಾನ್ಸ್ ಕಾತುರ

'ಕೆಜಿಎಫ್ 2' ನೋಡಲು ಫ್ಯಾನ್ಸ್ ಕಾತುರ

ಒಂದಲ್ಲ, ಎರಡಲ್ಲ ಮೂರು ವರ್ಷಗಳಿಂದ ಯಶ್ ನಟಿಸಿದ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ 'ಕೆಜಿಎಫ್ 2' ಎದುರು ಅದೆಷ್ಟೇ ದೊಡ್ಡ ಸಿನಿಮಾ ಎದುರಾದರೂ, ಏಪ್ರಿಲ್ 14ಕ್ಕೆ ಬಿಡುಗಡೆ ಆಗೇ ಆಗುತ್ತೆ ಎನ್ನಲಾಗುತ್ತಿದೆ. ಸಿನಿಮಾವನ್ನು 8 ತಿಂಗಳು ಪೋಸ್ಟ್‌ಪೋನ್ ಮಾಡಿದ್ದ ತಂಡ ಇನ್ನು ಹಿಂದೇಟು ಹಾಕುವುದಿಲ್ಲ. ಆದರೆ, ಮೂರನೇ ಅಲೆ ಸಂಪೂರ್ಣ ಕಡಿಮೆ ಆಗಬೇಕು ಅಷ್ಟೇ.

More from Filmibeat

English summary
Rumour going around in tollywood that KGF 2 movie will not be releasing in April. RRR, Radhe Shyam and many movies postponed due covid. All these movies releasing in April. For that reason KGF 2 has no space for release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X