'RX 100' ನಿರ್ದೇಶಕನ ಹೊಸ ಸಿನಿಮಾಗೆ ಅರೆ ಬೆತ್ತಲಾದ ಪಾಯಲ್ ರಜಪೂತ್: ಕಮೆಂಟ್ಸ್ ಮಾತ್ರ ಓದ್ಬೇಡಿ
ಟಾಲಿವುಡ್‌ನ ಬೋಲ್ಡ್ ಬ್ಯೂಟಿ ಪಾಯಲ್ ರಜಪೂತ್ ಸಿನಿಪ್ರಿಯರಿಗೆ ಚೆನ್ನಾಗೇ ಗೊತ್ತು. ಅದರಲ್ಲೂ ತೆಲುಗು ಸಿನಿಮಾ ನೋಡೋರಿಗೆ ತುಂಬಾನೇ ಪರಿಚಯ. 'ಆರ್‌ಎಕ್ಸ್ 100' ಅಂತಹ ಸಿನಿಮಾದಲ್ಲಿ ಸೆನ್ಸೇಷನಲ್ ರೋಲ್ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.
'ಆರ್‌ಎಕ್ಸ್ 100' ಬಳಿಕ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೇ ಹೋದರೂ, ಈಕೆಯ ಹವಾ ಮಾತ್ರ ಕಮ್ಮಿಯಾಗಿಲ್ಲ. ಒಂದರ ಹಿಂದೊಂದು ಆಫರ್‌ಗಳು ಈಕೆಯನ್ನು ಹುಡುಕಿಕೊಂಡು ಬರುತ್ತಲೇ ಇವೆ. ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಕನ್ನಡ ಸಿನಿಮಾ 'ಹೆಡ್‌ಬುಷ್'ನಲ್ಲೂ ನಟಿಸಿದ್ದರು.

ಪಾಯಲ್ ರಜಪೂತ್ ಈಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಆರ್‌ಎಕ್ಸ್ 100' ನಿರ್ದೇಶಕ ಅಜಯ್ ಭೂಪತಿನೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೇ ಸಿನಿಮಾ ಹೆಸರು 'ಮಂಗಳವಾರಂ'. ಇಲ್ಲಿ ಟೈಟಲ್ ಅಷ್ಟೇ ಗಮನ ಸೆಳೆಯುತ್ತಿಲ್ಲ. ಬದಲಿಗೆ ಫಸ್ಟ್ ಲುಕ್ ಕೂಡ ವೈರಲ್ ಆಗುತ್ತಿದೆ. ಜೊತೆ ಕಮೆಂಟ್ಸ್ ಕೂಡ ಹಾಗೇ ಬರುತ್ತಿದೆ.
'ಮಂಗಳವಾರ'ವೇ ಅರೆ ಬೆತ್ತಲಾದ ಪಾಯಲ್
'ಆರ್‌ಎಕ್ಸ್ 100' ಸಿನಿಮಾದಲ್ಲೂ ಪಾಯಲ್ ರಜಪೂತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ಇದು ಟಾಲಿವುಡ್ ಮಂದಿಯ ನಿದ್ದೆ ಕೆಡಿಸಿತ್ತು. ಈಗ ಮತ್ತೊಂದು ಅಷ್ಟೇ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಮಂಗಳವಾರಂ' ಸಿನಿಮಾ ಫಸ್ಟ್ ಲುಕ್‌ನಲ್ಲಿ ಅರೆ ಬೆತ್ತಲಾಗಿ ಮತ್ತೊಂದು ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

'ಆರ್ ಎಕ್ಸ್ 100' ಸಿನಿಮಾದ ಮೂಲಕ ಅಜಯ್ ಭೂಪತಿ ಸಕ್ಸಸ್ ಕಂಡಿದ್ದರು. ಬಳಿಕ ಮಲ್ಟಿಸ್ಟಾರರ್ ಸಿನಿಮಾ 'ಮಹಾಸಮುದ್ರಂ' ಮಕಾಡೆ ಮಲಗಿಬಿಡ್ತು. ಹೀಗಾಗಿ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ನಿರ್ದೇಶಕ ಮತ್ತೆ ಪಾಯಲ್ ರಜಪೂತ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಫಸ್ಟ್ ಲುಕ್‌ನಲ್ಲೇ ಸಿನಿಪ್ರಿಯರನ್ನು ಸೆಳೆದು ಬಿಟ್ಟಿದ್ದಾರೆ.
ಅರೆಬೆತ್ತಲೆ ಪೋಸ್ಟರ್‌ಗೆ ಕಮೆಂಟ್ಸ್, ಟೀಕೆ
ಸಿನಿಮಾದಲ್ಲಿ ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದಕ್ಕೂ ಧೈರ್ಯಬೇಕು. ಇಂತಹ ಪೋಸ್ಟರ್ ರಿಲೀಸ್ ಆದಾಗ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡುತ್ತಾರೆ. 'ಮಂಗಳವಾರಂ' ಫಸ್ಟ್ ಲುಕ್ ಹೊರಬಿದ್ದಾಗಲೂ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವು ಕಮೆಂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಓದುವುದಕ್ಕೂ ಸಾಧ್ಯವಿಲ್ಲ.
ಅದೇ ಕೆಲವೆಡೆ ಈ ಫಸ್ಟ್ ಲುಕ್ ವಿರುದ್ಧ ಟೀಕೆಗಳು ಬರಲಾರಂಭಿಸಿವೆ. 'ಮಂಗಳವಾರಂ' ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಆದರೆ, ಕನ್ನಡದಲ್ಲೂ ಟೈಟಲ್ 'ಮಂಗಳವಾರಂ' ಅಂತಲೇ ಇದೆ. ಅದಕ್ಕೆ ಕನ್ನಡಿಗರು ಟೈಟಲ್ ಬದಲಾಯಿಸುವಂತೆ ಕಮೆಂಟ್ ಮಾಡುತ್ತಿದ್ದಾರೆ. ಹಾಗೇ ಸಿನಿಮಾದ ಪೋಸ್ಟರ್ ವಿರುದ್ಧವೂ ತೀವ್ರ ಟೀಕೆಗಳು ಕೇಳಿ ಬರುತ್ತಿವೆ.
'ಮಂಗಳವರಂ' ಮತ್ತೆ ಹಲ್‌ಚಲ್
ಪಾಯಲ್ ರಜಪೂತ್ ಇನ್ನೇನು ಅವಕಾಶಗಳು ಕಡಿಮೆ ಆದವು ಅನ್ನುವಾಗಲೇ ಮತ್ತೆ ತನ್ನ ಬೋಲ್ಡ್ ಲುಕ್‌ನಿಂದ ಸುದ್ದಿಯಲ್ಲಿದ್ದಾರೆ. ಸದ್ಯ ಬರೀ ಫಸ್ಟ್ ಲುಕ್ ಅಷ್ಟೇ ರಿಲೀಸ್ ಆಗಿದೆ. ಇನ್ನೂ ಸಿನಿಮಾ ಬರಬೇಕಿದೆ. ಆಗ ಅದ್ಯಾವ ಮಟ್ಟಿಗೆ ಸಂಚಲನ ಹುಟ್ಟಾಕುತ್ತಾರೋ ಗೊತ್ತಿಲ್ಲ.
ಅಜಯ್ ಭೂಪತಿ ನಿರ್ದೇಶಿಸುತ್ತಿರುವ ಈ ಸಿನಿಮಾಗೆ 'ಕಾಂತಾರ' ಮೂಲಕ ತೆಲುಗಿನಲ್ಲೀ ಜನಪ್ರಿಯರಾಗಿರೋ ಅಜನೀಶ್ ಬಿ ಲೋಕನಾಥ್ ಟ್ಯೂನ್ ಹಾಕುತ್ತಿದ್ದಾರೆ. ಇನ್ನು RX100 ಸಿನಿಮಾದಲ್ಲಿ ಬೋಲ್ಡ್ ಕಂಟೆಂಟ್ ಮೂಲಕ ಸದ್ದು ಮಾಡಿದ್ದ ಪಾಯಲ್‌ಗೆ ಈ ಸಿನಿಮಾ ಮತ್ತೊಮ್ಮೆ ಸಕ್ಸಸ್ ತಂದುಕೊಡುತ್ತಾ ಅನ್ನೋದೇ ಈಗ ಇರುವ ಕುತೂಹಲ.


Click it and Unblock the Notifications











