Payal Rajput: 'RX 100' ನಟಿಯ ಮತ್ತೊಂದು ಬೋಲ್ಡ್ ಸಿನಿಮಾ 'ಮಂಗಳವಾರಂ' ರಿಲೀಸ್ ಯಾವಾಗ?

'RX 100' ಸಿನಿಮಾ ನೋಡಿದವರಿಗೆ ಪಾಯಲ್ ರಜಪೂತ್ ಯಾರು ಅಂತ ಹೇಳಬೇಕಿಲ್ಲ. ಉತ್ತರ ಭಾರತದ ಈ ನಟಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದರು. 'RX 100' ಒಂದೇ ಒಂದು ಸಿನಿಮಾ ದಕ್ಷಿಣ ಭಾರತದಲ್ಲಿ ಸ್ಟಾರ್ ಮಾಡಿತ್ತು. ಅದೇ ನಟಿಯ ಹೊಸ ಸಿನಿಮಾ 'ಮಂಗಳವಾರಂ' ಬಿಡುಗಡೆಗೆ ಸಜ್ಜಾಗಿದೆ.

'RX 100' ಅಂತಹ ಸಿನಿಮಾದಲ್ಲಿ ಸೆನ್ಸೇಷನಲ್ ಪಾತ್ರದಲ್ಲಿ ನಟಿಸಿದ ಬಳಿಕ ಪಾಯಲ್ ರಜಪೂತ್‌ಗೆ ಒಂದೊಳ್ಳೆ ಸಕ್ಸಸ್ ಸಿಕ್ಕಿಲ್ಲ. ಹಾಗಂತ ಈ ನಟಿಗಿರೋ ಹವಾ ಮಾತ್ರ ಕಮ್ಮಿಯಾಗಿಲ್ಲ. ಈಗ ಮತ್ತೆ ಅದೇ ಜೋಷ್‌ನಲ್ಲಿ 'ಮಂಗಳವಾರಂ' ಸಿನಿಮಾ ಮೂಲಕ ಸದ್ದು ಮಾಡುವುದಕ್ಕೆ ಸಜ್ಜಾಗಿದ್ದಾರೆ.

payal-rajput-mangalavaaram-movie

ಪಾಯಲ್ ರಜಪೂತ್ ನಟಿಸಿದ 'ಮಂಗಳವಾರಂ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ವಿಶೇಷ ಅಂದರೆ, 'RX 100' ಸಿನಿಮಾದ ನಿರ್ದೇಶಕ ಅಜಯ್ ಭೂಪತಿನೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಫಸ್ಟ್ ಲುಕ್‌ನಿಂದಲೇ ಗಮನ ಸೆಳೆದಿತ್ತು. ಈಗ ಸಿನಿಮಾ ಹೇಗಿರುತ್ತೋ ಅಂತ ಎದುರು ನೋಡುತ್ತಿದ್ದಾರೆ.

ಮತ್ತೆ ಪಾಯಲ್ ರಜಪೂತ್ ಹವಾ

ಪಾಯಲ್ ರಜಪೂತ್ ನಟಿಸಿದ ಸಿನಿಮಾ ಹೆಚ್ಚೇನು ಸದ್ದು ಮಾಡಲಿಲ್ಲ. ಇನ್ನೇನು ನಟಿಗೆ ಅವಕಾಶಗಳು ಕಡಿಮೆ ಆದವು ಅನ್ನುವಾಗಲೇ 'ಮಂಗಳವಾರಂ' ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಆಕ್ಟೀವ್ ಆಗಿದ್ದಾರೆ. ಕೇವಲ ಫಸ್ಟ್ ಲುಕ್ ಮೂಲಕವೇ ಮತ್ತೆ 'RX 100' ಸಿನಿಮಾವನ್ನು ನೆನಪಿಸಿದ್ದರು.

'RX 100' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಅಜಯ್ ಭೂಪತಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಮತ್ತೊಂದು ಸೆನ್ಸೇಷನಲ್ ಸಿನಿಮಾ ನೋಡೋಕೆ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಟಾಲಿವುಡ್ ಮಂದಿ ಇದ್ದಾರೆ.

ಇದೊಂದು ಪ್ಯಾನ್ ಇಂಡಿಯಾ ಸಿನಿಮಾ

'ಮಂಗಳವಾರಂ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್ 17ರಂದು ದೇಶಾದ್ಯಂತ ಸಿನಿಮಾ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಲಾಗಿದೆ. 'ಮಂಗಳವಾರಂ' ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.

ಅಂದ್ಹಾಗೆ ಈ ಸಿನಿಮಾವನ್ನು ಅಜಯ್ ಭೂಪತಿ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಇವರೊಂದಿಗೆ ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿಂದ 'ಮಂಗಳವಾರಂ' ಸಿನಿಮಾದ ಅಧಿಕೃತ ಪ್ರಚಾರ ಆರಂಭ ಆದಂತೆ ಆಗಿದೆ.

payal-rajput-mangalavaaram-movie

'ಮಂಗಳವಾರಂ' ರಸ್ಟ್ರಿಕ್ ಆಕ್ಷನ್ ಥ್ರಿಲ್ಲರ್

ಪಾಯಲ್ ರಜಪೂತ್ ಇದ್ಮೇಲೆ ಸಿನಿಮಾ ರಗಡ್ ಆಗಿಯೇ ಇರುತ್ತೆ. 'ಮಂಗಳವಾರಂ' ಮಂಗಳವಾರಂ ರಸ್ಟ್ರಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾದಲ್ಲಿ ಪಾಯಲ್ ರಜಪೂತ್, ಶ್ರೀತೇಜ್, ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್ ಹಲವರು ನಟಿಸಿದ್ದಾರೆ..

'ಮಂಗಳವಾರಂ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ, 'ಕಾಂತಾರ' ಸಿನಿಮಾ ಮೂಲಕ ಪರಭಾಷೆಯಲ್ಲೂ ಮಿಂಚುತ್ತಿರುವ ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ದಾಶರಥಿ ಶಿವೇಂದ್ರ ಅವರ ಕ್ಯಾಮರಾವರ್ಕ್ ಇದ್ದರೆ, ರಘು ಕುಲಕರ್ಣಿ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ.

More from Filmibeat

English summary
RX 100 fame Payal Rajput movie Mangalavaaram releasing on November 17th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X