ನಾನಿಯ 'ದಸರಾ' ಟೀಸರ್ ರಿಲೀಸ್ ಮಾಡಿದ ರಾಜಮೌಳಿ, ರಕ್ಷಿತ್ ಶೆಟ್ಟಿ!

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಪ್ಯಾನ್ ಇಂಡಿಯಾದ 'ದಸರಾ' ಸಿನಿಮಾದ ಟೀಸರ್ ರಿಲೀಸ್ ಮಾಡಲು ದಿಗ್ಗಜರು ಸಾಥ್ ನೀಡಿದ್ದಾರೆ.

ತೆಲುಗು ನಟ ನಾನಿಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ'ದ ಮಾಸ್ ಟೀಸರ್ ರಿಲೀಸ್ ಆಗಿದೆ. ಭಾರತೀಯ ಚಿತ್ರರಂಗದ ಮೂವಿ ಮಾಂತ್ರಿಕ ಎಸ್. ಎಸ್ ರಾಜಮೌಳಿ 'ದಸರಾ' ಸಿನಿಮಾ ಮಾಸ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.

ಎಸ್‌ ಎಸ್‌ ರಾಜಮೌಳಿಯೊಂದಿಗೆ ಕನ್ನಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕನ್ನಡದ ಟೀಸರ್, ಹಿಂದಿ ಟೀಸರ್ ಅನ್ನು ಶಾಹಿದ್ ಕಪೂರ್, ಮಲಯಾಳಂ ಟೀಸರ್ ಅನ್ನು ದುಲ್ಕರ್ ಸಲ್ಮಾನ್, ತಮಿಳು ಟೀಸರ್ ಅನ್ನು ಧನುಷ್ ಬಿಡುಗಡೆ ಮಾಡಿ ಸಿನಿಮಾಗೆ ಶುಭ ಹಾರೈಸಿದ್ದಾರೆ.

S S Rajamouli, Rakshit Shetty,Dhanush Released Nani Starrer Dasara Tesear

ದಸರಾ ಹಬ್ಬವನ್ನು ವಿಶ್ವದೆಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತೆ. ದಷ್ಟರನ್ನು ಸಂಹಾರ ಮಾಡಿ ವಿಜಯ ಸಾಧಿಸುವ ದಸರಾ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಣೆ ಮಾಡಲಾಗುತ್ತೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ 'ದಸರಾ' ಸಿನಿಮಾ ಕೂಡ ಕೆಟ್ಟವರ ಮೇಲೆ ವಿಜಯ ಸಾಧಿಸುವ ಕಥೆಯೇ 'ದಸರಾ'.

ನ್ಯಾಚುರಲ್ ಸ್ಟಾರ್ ನಾನಿ ಗೆಟಪ್, ರಗಡ್ ಲುಕ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಗೋದಾವರಿ ಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ತೋರಿಸಲಾಗಿದೆ. ಸದ್ಯ ಈ ಟೀಸರ್ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.

ಕಳೆದ ವರ್ಷ ತೆಲುಗಿನಲ್ಲಿ RRR, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2', 'ಕಾಂತಾರ' ಸಿನಿಮಾಗಳ ಸೂಪರ್ ಹಿಟ್ ಆಗಿವೆ. ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಗೆ ಸೇರಲಿದೆ ಎಂದು ಗರ್ವದಿಂದ ಹೇಳುತ್ತೇನೆ" ಎಂದು ನಾನಿ ಹೇಳಿದ್ದಾರೆ.

S S Rajamouli, Rakshit Shetty,Dhanush Released Nani Starrer Dasara Tesear

'ದಸರಾ' ಸಿನಿಮಾ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಇದೊಂದು ಮೆಗಾ ಪ್ರಾಜೆಕ್ಟ್ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ. ಇದೇ ಸಿನಿಮಾ ಮಾರ್ಚ್ 30ರಂದು 'ದಸರಾ' ಬಿಡುಗಡೆಯಾಗುತ್ತಿದೆ.

ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ ಈ ಚಿತ್ರದಲ್ಲಿದೆ. 'ದಸರಾ' ಸಿನಿಮಾ ಸಂತೋಷ್ ನಾರಾಯಣನ್ ಸಂಗೀತ, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್ ಇದೆ.

More from Filmibeat

English summary
S S Rajamouli, Rakshit Shetty,Dhanush Released Nani Starrer Dasara Tesear, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X