'ದಂಗಲ್' ಸಾಧನೆ ಮೀರಿಸಿದ 'ಸಾಹೋ': ಲಾಕ್ ಡೌನ್ ನಡುವೆಯೂ ದಾಖಲೆ

ಕೊರೊನಾ ವೈರಸ್ ಸೋಂಕಿನ ಆರ್ಭಟದಿಂದ ಜಗತ್ತಿನಾದ್ಯಂತ ತಲ್ಲಣ ಉಂಟಾಗಿದೆ. ಕೆಲವೇ ದೇಶಗಳನ್ನು ಹೊರತುಪಡಿಸಿ ಉಳಿದೆಡೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಸಂಪೂರ್ಣ ಬಂದ್ ಆಗಿದೆ. ಕೊರೊನಾ ವೈರಸ್‌ನ ಮೂಲ ಚೀನಾದಲ್ಲಿ ಆರು ತಿಂಗಳ ಬಳಿಕ ಸೋಮವಾರ ಕೆಲವೆಡೆ ಚಿತ್ರಮಂದಿರಗಳು ತೆರೆದಿವೆ. ಇನ್ನು ಸೋಂಕಿನ ಪ್ರಮಾಣ ಇಳಿಕೆಯಾದ ಕೆಲವು ದೇಶಗಳಲ್ಲಿ ಕೂಡ ಅಲ್ಲಲ್ಲಿ ಸಿನಿಮಾ ಪ್ರದರ್ಶನಗಳು ಪುನರಾರಂಭವಾಗಿದೆ. ಈ ಸಂಕಷ್ಟದ ನಡುವೆಯೂ ತೆಲುಗಿನ ಪ್ರಭಾಸ್ ನಟನೆಯ 'ಸಾಹೋ' ವಿಶಿಷ್ಟ ಸಾಧನೆ ಮಾಡಿದೆ.

Recommended Video

Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

ಜಪಾನ್‌ನಲ್ಲಿ ಕೂಡ ಹಂತ ಹಂತವಾಗಿ ಸಿನಿಮಾ ಪ್ರದರ್ಶನ ಶುರುವಾಗುತ್ತಿದ್ದು, ಪ್ರೇಕ್ಷಕರು ಕೂಡ ಸಿನಿಮಾ ವೀಕ್ಷಿಸುವ ಮೂಲಕ ತಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಜಪಾನಿ ಸಿನಿಮಾಗಳು ಮಾತ್ರವಲ್ಲದೆ, ಜಗತ್ತಿನ ಬೇರೆ ಬೇರೆ ಭಾಷೆಯಿಂದ ಡಬ್ ಆಗಿರುವ ಸಿನಿಮಾಗಳೂ ಬೆಳ್ಳಿ ಪರದೆಯ ಮೇಲೆ ಮೂಡಲು ಆರಂಭಿಸಿವೆ. ಮುಂದೆ ಓದಿ...

ಮರುಬಿಡುಗಡೆಯಲ್ಲಿ ಭರ್ಜರಿ ರೆಸ್ಪಾನ್ಸ್

ಮರುಬಿಡುಗಡೆಯಲ್ಲಿ ಭರ್ಜರಿ ರೆಸ್ಪಾನ್ಸ್

ಸುಜೀತ್ ನಿರ್ದೇಶನದ ಪ್ರಭಾಸ್ ನಟನೆಯ 'ಸಾಹೋ' ಕೂಡ ಜಪಾನಿ ಭಾಷೆಯಲ್ಲಿ ಲಾಕ್ ಡೌನ್ ಸಂಕಷ್ಟದ ನಡುವೆಯೂ ಮತ್ತೊಮ್ಮೆ ಬಿಡುಗಡೆಯಾಗಿದೆ. ಜನವರಿಯಲ್ಲಿ ಸಾಹೋದ ಡಬ್ಬಿಂಗ್ ಆವೃತ್ತಿ ಮೊದಲು ಬಿಡುಗಡೆಯಾಗಿತ್ತು. ಎರಡನೆಯ ಬಾರಿ ಬಿಡುಗಡೆಯಾದಾಗಲೂ ಭರ್ಜರಿ ಓಪನಿಂಗ್ ಸಿಕ್ಕಿದೆ.

ದಂಗಲ್ ದಾಖಲೆ ಮುರಿದ ಸಾಹೋ

ದಂಗಲ್ ದಾಖಲೆ ಮುರಿದ ಸಾಹೋ

ವರದಿಗಳ ಪ್ರಕಾರ 'ಸಾಹೋ' ಚಿತ್ರವು ಜಪಾನ್‌ನಲ್ಲಿ ಭಾರತೀಯ ಚಿತ್ರವೊಂದು ಮಾಡಿದ ಅತ್ಯಧಿಕ ಆರಂಭಿಕ ಗಳಿಕೆಯ ದಾಖಲೆಯನ್ನು ಮುರಿದಿದೆ. ಈ ದಾಖಲೆಯು ಅಮೀರ್ ಖಾನ್ ನಟನೆಯ 'ದಂಗಲ್' ಹೆಸರಿನಲ್ಲಿತ್ತು. ಮರುಬಿಡುಗಡೆಯಾದ 'ಸಾಹೋ'ಗೆ ಜಪಾನಿ ಪ್ರೇಕ್ಷಕರು ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ಐದು ಸಿನಿಮಾಗಳ ಪಟ್ಟಿ

ಐದು ಸಿನಿಮಾಗಳ ಪಟ್ಟಿ

'ಸಾಹೋ'ದ ಆರಂಭಿಕ ಗಳಿಕೆಯು 110 ಸಾವಿರ ಡಾಲರ್ ದಾಟಿದೆ. ಈ ಮೂಲಕ ಅದು ಜಪಾನ್‌ನಲ್ಲಿ ಅತಿ ಹೆಚ್ಚು ಸಾರ್ವಕಾಲಿಕ ಗಳಿಕೆ ಕಂಡ ಐದು ಸಿನಿಮಾಗಳ ಪಟ್ಟಿಯನ್ನು ಸೇರಿಕೊಂಡಿದೆ. ಇಂಗ್ಲಿಷ್ ವಿಂಗ್ಲಿಷ್, 3 ಈಡಿಯಟ್ಸ್, ಮುತ್ತು ಮತ್ತು ಬಾಹುಬಲಿ 2 ಚಿತ್ರಗಳು ಮೊದಲ ನಾಲ್ಕು ಸ್ಥಾನದಲ್ಲಿವೆ.

ಮೊದಲ ದಿನದ ದಾಖಲೆ

ಮೊದಲ ದಿನದ ದಾಖಲೆ

ಸಾಹೋ 2019ರಲ್ಲಿ ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ 68 ಕೋಟಿ ರೂ ಗಳಿಕೆ ಕಂಡು ದಾಖಲೆ ಬರೆದಿತ್ತು. ಜಗತ್ತಿನಾದ್ಯಂತ 130 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ '2.0' ಚಿತ್ರದ ದಾಖಲೆಯನ್ನು ಮುರಿದಿತ್ತು. ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಚಿತ್ರ ವಿದೇಶದಲ್ಲಿ ದಾಖಲೆಯ ಗಳಿಕೆಯತ್ತ ಸಾಗಿದೆ.

More from Filmibeat

English summary
Prabhas starrer Saaho re-release has broke the box office record of Aamir Khan's Dangal in Japan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X