"ಕೋಮಾದಲ್ಲಿದ್ದಾಗ 'ಸ್ಟೀರಾಯ್ಡ್' ನೀಡಿದ್ರು.. ಅದೀಗ ನನ್ನ ದೇಹವನ್ನು ಬಾಧಿಸುತ್ತಿದೆ"-ಸಾಯಿ ಧರಂ ತೇಜ್

ಮೆಗಾ ಕುಟುಂಬದ ಹೀರೊ ಸಾಯಿ ಧರಂ ತೇಜ್ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತೆಲುಗು ಚಿತ್ರರಂಗದ ಈ ಸುಪ್ರೀಂ ಹೀರೊ ಇತ್ತೀಚೆಗೆಷ್ಟೇ 'ವಿರೂಪಾಕ್ಷ'ದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಅಧಿಕ ಗಳಿಕೆ ಕಂಡಿತ್ತು.

'ವಿರೂಪಾಕ್ಷ' ಸಿನಿಮಾ ಬಿಡುಗಡೆಗೂ ಮುನ್ನ ಸಾಯಿ ಧರಂ ತೇಜ್ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿ ಗುಣಪಡಿಸಲಾಗಿತ್ತು. ಅಪಘಾತದ ಬಳಿಕ ಚೇತರಿಸಿಕೊಂಡು ನಟಿಸಿದ ಸಿನಿಮಾ 'ವಿರೂಪಾಕ್ಷ' ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡಿತ್ತು.

Sai Dharam Tej, Bike Accident

ಈಗ ಪವರ್‌ಸ್ಟಾರ್ ಪವನ್ ಕಲ್ಯಾಣ್ ಜೊತೆ ನಟಿಸಿರೋ 'ಬ್ರೋ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಸಿನಿಮಾ 'ಬ್ರೋ' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಆ ಹಾಡನ್ನು ನೋಡಿದ ಬಳಿಕ ಅಭಿಮಾನಿಗಳು ಸ್ಟೆಪ್ ಚೆನ್ನಾಗಿಲ್ಲ ಎಂದು ಕಮೆಂಟ್ ಮಾಡಿದ್ದರು. ಅದಕ್ಕೆ ಸಾಯಿ ಧರಂ ತೇಜ್ ಪ್ರತಿಕ್ರಿಯೆ ನೀಡಿದ್ದಾರೆ.

ಸಾಯಿ ಧರಂ ತೇಜ್ ಡ್ಯಾನ್ಸ್‌ಗೆ ಕೆಮಂಟ್

ಮೆಗಾ ಕುಟುಂಬದ ಸುಪ್ರೀಂ ಹೀರೊ ಸಾಯಿ ಧರಂ ತೇಜ್ ಬೈಕ್ ಅಪಘಾತದ ಬಳಿಕ ಡ್ಯಾನ್ಸ್ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಸಾಯಿ ಧರಂ ತೇಜ್‌ನ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದರು. ಡ್ಯಾನ್ಸ್ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದರು.

Sai Dharam Tej, Bike Accident

ಅಭಿಮಾನಿಗಳ ಈ ಕಮೆಂಟ್‌ಗೆ ಸಾಯಿ ಧರಂ ತೇಜ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ನನಗೂ ಅದು ಗೊತ್ತಿದೆ. ನನ್ನ ಡ್ಯಾನ್ಸ್ ಅನ್ನು ನೋಡಿದರೆ ನನಗೆ ನಾಚಿಕೆಯಾಗುತ್ತಿದೆ. ಅಪಘಾತದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ, ಚಿಕಿತ್ಸೆ ಬಳಿಕ ದೇಹದಲ್ಲಿ ಒಂದಿಷ್ಟು ಸಮಸ್ಯೆಗಳಾಗಿವೆ. ಅದರಿಂದ ಡ್ಯಾನ್ಸ್ ಮಾಡುವುದಕ್ಕೆ ಕಷ್ಟವಾಗುತ್ತಿದೆ" ಎಂದು ಸಾಯಿ ಧರಂ ತೇಜ್ ಹೇಳಿದ್ದಾರೆ.

ಕೋಮಾದಲ್ಲಿದ್ದಾಗ ಸ್ಟೀರಾಯ್ಡ್ ನೀಡಿದ್ದೇ ಸಮಸ್ಯೆ

ಡ್ಯಾನ್ಸ್ ಮಾಡುವುದಕ್ಕೆ ಕಷ್ಟ ಪಡುತ್ತಿರುವ ಸಾಯಿ ಧರಂ ತೇಜ್ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆಲ್ಲ ಅಪಘಾತಗಳಿಂದ ಉಂಟಾದ ಗಾಯಗಳು ಕಾರಣವಲ್ಲ. ಆದರೆ, ಕೋಮಾದಲ್ಲಿ ಇದ್ದಾಗ ಸ್ಟೀರಾಯ್ಡ್ ನೀಡಲಾಗಿತ್ತು. ಅದು ತನ್ನ ದೇಹವನ್ನು ಇಂದಿಗೂ ಬಾಧಿಸುತ್ತಿದೆ" ಎಂದು ಸಂದರ್ಶನದಲ್ಲಿ ಸಾಯಿ ಧರಂ ತೇಜ್ ಹೇಳಿದ್ದಾರೆ.

ದೇಹಕ್ಕೆ ಸ್ಟೀರಾಯ್ಡ್ ನೀಡಿದ್ದರಿಂದ ಮೊದಲಿನಂತೆ ವರ್ಕ್‌ಔಟ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಾಯಿ ಧರಂ ತೇಜ್ ಹೇಳಿಕೆ ನೀಡಿದ್ದಾರೆ. ಆದರೆ, ಇದೆಲ್ಲವನ್ನೂ ಮೀರಿಸಿ ಮತ್ತೆ ಸಹಜ ಸ್ಥಿತಿಗೆ ಮರುಳುವುದಾಗಿಯೂ ಟಾಲಿವುಡ್‌ ನಟ ತನ್ನ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದ್ದಾರೆ.

'ಬ್ರೋ' ರಿಲೀಸ್ ಮೇಲೆ ಗಮನ

ಅಪಘಾತದ ಬಳಿಕ ನಟಿಸಿದ 'ವಿರೂಪಾಕ್ಷ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಈಗ 'ಬ್ರೋ' ಸಿನಿಮಾ ಮೇಲೂ ಅದೇ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಅಲ್ಲದೆ ಪವನ್ ಕಲ್ಯಾಣ್ ಕೂಡ ಸೋದರಳಿಯನ ಜೊತೆ ನಟಿಸಿದ್ದರಿಂದ 'ಬ್ರೋ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದು ಅನ್ನೋ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

'ಬ್ರೋ' ಸಿನಿಮಾವನ್ನು ಸಮುಥಿರ ಕಣಿ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಮೂಲಕ ಸಾಯಿ ಧರಂ ತೇಜ್ ಅಪಘಾತದ ಬಳಿಕ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.

More from Filmibeat

English summary
Bro actor Sai Dharam Tej said steroids causing more trouble after bike accident, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X