100 ಕೋಟಿ ಕ್ಲಬ್ ನಾಯಕರ ಗುಂಪು ಸೇರಿದ ಮೆಗಾಸ್ಟಾರ್ ಸೋದರಳಿಯ: ಬಾಕ್ಸಾಫೀಸ್‌ನಲ್ಲಿ 'ವಿರೂಪಾಕ್ಷ' ವೀರಾವೇಷ

ಮೆಗಾಸ್ಟಾರ್ ಕುಟುಂಬದ ಒಬ್ಬೊಬ್ಬರೇ ಹೀರೊಗಳು ಬಾಕ್ಸಾಫೀಸ್‌ನಲ್ಲಿ ಮತ್ತೆ ಸದ್ದು ಮಾಡಲು ಶುರು ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಯಿ ಧರಂ ತೇಜ್ ಚೇತರಿಸಿಕೊಂಡು 'ವಿರೂಪಾಕ್ಷ' ಸಿನಿಮಾ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.

ಸುಪ್ರೀಂ ಹೀರೊ ಸಾಯಿ ಧರಂ ತೇಜ ಹಲವು ದಿನಗಳಿಂದ ಬ್ಲಾಕ್‌ ಬಸ್ಟರ್ ಸಿನಿಮಾಗಾಗಿ ಎದುರು ನೋಡುತ್ತಿದ್ದರು. ಒಂದರ ಹಿಂದೊಂದು ಸಿನಿಮಾಗಳು ಸೋತಿದ್ದರಿಂದ ಕಂಗಾಲಾಗಿದ್ದರು. ಆದ್ರೀಗ ಕೊನೆಗೂ ಸಾಯಿ ಧರಂ ತೇಜ್‌ಗೆ ಸೂಪರ್‌ ಸಕ್ಸಸ್ ಸಿಕ್ಕಿದೆ.

Sai Dharam Tej Samyuktha Menon Starrer Virupaksha Movie Box Office Collection Rs. 100 crore

ಏಪ್ರಿಲ್ 21 ರಂದು 'ವಿರೂಪಾಕ್ಷ' ಸಿನಿಮಾ ರಿಲೀಸ್ ಆಗಿತ್ತು. ರಿಲೀಸ್ ಆದ ದಿನದಿಂದಲೇ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಮುಂದೆ ಸಾಗಿದೆ. ಬಿಡುಗಡೆಯಾದ ಒಂದು ತಿಂಗಳೊಳಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಲೂಟಿ ಮಾಡಿದೆ.

100 ಕೋಟಿ ಕ್ಲಬ್‌ನಲ್ಲಿ ಸಾಯಿ ಧರಂ ತೇಜ್ ಸಿನಿಮಾ

ಆರಂಭದಲ್ಲಿ ಸಾಯಿ ಧರಂ ತೇಜ್ ಸಿನಿಮಾ 'ವಿರೂಪಾಕ್ಷ' ಈ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋ ನಿರೀಕ್ಷೆಯಿರಲಿಲ್ಲ. ಆದರೆ, ಬಿಡುಗಡೆಯಾದ ಮೊದಲ ವಾರವೇ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡಕ್ಕೆ ಹೊಸ ಭರವಸೆಯನ್ನು ನೀಡಿತ್ತು. ಆದರೂ, 100 ಕೋಟಿ ಕ್ಲಬ್ ಸೇರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಕೊನೆಗೂ ಆ ಆಸೆ ಈಡೇರಿದೆ.

ಸ್ವತ: 'ವಿರೂಪಾಕ್ಷ' ಚಿತ್ರತಂಡ 100 ಕೋಟಿ ಕ್ಲಬ್ ಸೇರಿದ ವಿಷಯವನ್ನು ಬಹಿರಂಗ ಪಡಿಸಿದೆ. "ಸುಪ್ರೀಂ ಹೀರೊ ಸಾಯಿ ಧರಂ ತೇಜ್ 'ವಿರೂಪಾಕ್ಷ' ಭರ್ಜರಿ ಬ್ಯುಸಿನೆಸ್ ಮಾಡಿ ಯಶಸ್ಸು ಕಂಡಿದೆ. ಈ ಬ್ಲಾಕ್ ಬಸ್ಟರ್ ಸಿನಿಮಾ ಪ್ರೇಕ್ಷಕರ ಅಪಾರ ಪ್ರೀತಿಯಿಂದ 100 ಕೋಟಿ ಕ್ಲಬ್ ಸೇರಿದೆ" ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಇದೇ ವೇಳೆ ಸಿನಿಮಾದ ವಿಶೇಷ ವಿಡಿಯೋ ಹಾಗೂ 100 ಕೋಟಿ ಕ್ಲಬ್ ಸೇರಿದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಮೆಗಾ ಸೋದರಳಿಯ 100 ಕೋಟಿ ಹೀರೊ

ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಸಾಯಿ ಧರಂ ತೇಜ್ 'ಪಿಲ್ಲ ನುವ್ವು ನೇನಿ ಜೀವಿತಂ' ಸಿನಿಮಾ ಮೂಲಕ ನಾಯಕನಾಗಿ ಟಾಲಿವುಡ್‌ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಾಯಿ ಧರಂ ತೇಜಾ ಇಷ್ಟು ಹರಸಾಹಸ ಪಟ್ಟಿದ್ದರು. 'ವಿರೂಪಾಕ್ಷ' ಸಿನಿಮಾಗೂ ಮುನ್ನ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ.

ಇದೇ ಕುಟುಂಬದ ಹೀರೊ, 'ಉಪ್ಪೆನ' ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಪಂಜ ವೈಷ್ಣವ್ ತೇಜ್ ಮೊದಲ ಸಿನಿಮಾದಲ್ಲೇ 100 ಕೋಟಿ ಕ್ಲಬ್ ಸೇರಿದ್ದರು. ಆದರೆ, ಸಾಯಿ ಧರಂ ತೇಜ್‌ಗೆ ಅದು ಸಾಧ್ಯವಾಗಿರಲಿಲ್ಲ. ಅದು ಈಗ ವಿರೂಪಾಕ್ಷ ಸಿನಿಮಾ ಮೂಲಕ ಸಾಧ್ಯವಾಗಿದೆ.

ಟೈರ್ 2 ಹೀರೊ ಲಿಸ್ಟ್‌ನಲ್ಲಿ ಸಾಯಿ ಧರಂ ತೇಜಾ

ಟಾಲಿವುಡ್‌ನ ಟೈರ್ 2 ಹೀರೊಗಳ ಪಟ್ಟಿಯಲ್ಲಿ ಸಾಯಿ ಧರಂ ತೇಜಾ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮಾಸ್ ಮಹಾರಾಜ ರವಿತೇಜ, ನ್ಯಾಚುರಲ್ ಸ್ಟಾರ್ ನಾನಿ, ನಿಖಿಲ್ ಸಿದ್ಧಾರ್ಥ್ ಹಾಗೂ ವೈಷ್ಣವ್ ತೇಜ್ ಇದ್ದರು. ಇದೀಗ 100 ಕೋಟಿ ಕ್ಲಬ್‌ನಲ್ಲಿ ಸಾಯಿ ಧರಮ್ ತೇಜ್ ಕೂಡ ಸೇರಿಕೊಂಡಿದ್ದಾರೆ. ಈ ಮೂಲಕ ಮೆಗಾ ಕುಟುಂಬದ ಮತ್ತೊಬ್ಬ ಹೀರೊ ಈ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

'ವಿರೂಪಾಕ್ಷ' ಸಿನಿಮಾ ಬೇರೆ ಭಾಷೆಯಲ್ಲಿ ರಿಲೀಸ್ ಆಗಿದ್ದರೂ, ತೆಲುಗಿನಲ್ಲಿ ಸೂಪರ್ ಹಿಟ್ ಆಗಿತ್ತು. ಕೇವಲ ತೆಲುಗಿನಲ್ಲಿ ಮೂರು ವಾರಕ್ಕೆ 91 ಕೋಟಿ ರೂ. ಗಳಿಸಿತ್ತು. ನಾಲ್ಕನೇ ವಾರದಲ್ಲಿ 9 ಕೋಟಿ ರೂ.ಗೂ ಅಧಿಕ ಗಳಿಸುವ ಮೂಲಕ 'ವಿರೂಪಾಕ್ಷ' 100 ಕೋಟಿ ರೂ. ಕ್ಲಬ್ ಸೇರಿದೆ.

More from Filmibeat

English summary
Sai Dharam Tej Samyuktha Menon Starrer Virupaksha Movie Box Office Collection Rs. 100 crore, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X