ಕಾಲೇಜ್‌ನಲ್ಲಿ 'ಶೀಲಾ ಕಿ ಜವಾನಿ' ಹಾಡಿಗೆ ಸಾಯಿ ಪಲ್ಲವಿ ಭರ್ಜರಿ ಡ್ಯಾನ್ಸ್; ಹಳೇ ವಿಡಿಯೋ ವೈರಲ್
ಸಾಯಿ ಪಲ್ಲವಿ ದಕ್ಷಿಣ ಭಾರತದ ಜನಪ್ರಿಯ ನಟಿ. ಸಿನಿಮಾಗಳಲ್ಲಿ ಹೆಚ್ಚಾಗಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸೌತ್ ನಟಿಗೆ ಈಗ ಬಾಲಿವುಡ್‌ಗೂ ಲಗ್ಗೆ ಇಡುತ್ತಿದ್ದಾರೆ. 'ರಾಮಾಯಣ'ದಲ್ಲಿ ಸೀತೆಯ ಪಾತ್ರದಲ್ಲಿ ಮಿಂಚಲಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಇಂತಹದ್ದೊಂದು ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಗ್ಯಾಪ್‌ನಲ್ಲಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ.
'ಪ್ರೇಮಂ' ಸಿನಿಮಾ ಮೂಲಕ ಹುಡುಗರ ನಿದ್ದೆ ಕದ್ದಿರುವ ಈ ನಟಿ ಅಭಿನಯದಲ್ಲಷ್ಟೇ ಅಲ್ಲ, ಡ್ಯಾನ್ಸ್‌ನಲ್ಲೂ ಅಷ್ಟೇ ಫೇಮಸ್. ಇದು ಮೊದಲ ಸಿನಿಮಾದಲ್ಲೇ ಸಾಬೀತಾಗಿತ್ತು. ಈ ಸಿನಿಮಾಗಳ ಬಳಿಕ ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡೂ ಭಾಷೆಯ ಕೆಲವು ಸಿನಿಮಾಗಳ ಹಾಡಿನಲ್ಲಿ ಹೆಜ್ಜೆ ಹಾಕಿ ಶಿಳ್ಳೆಗಳನ್ನು ಗಿಟ್ಟಿಸಿಕೊಂಡಿದ್ದೂ ಇದೆ.

ಈಗ ಸಾಯಿ ಪಲ್ಲವಿ ಕಾಲೇಜ್‌ನ ಕಾರ್ಯಕ್ರಮವೊಂದರಲ್ಲಿ ಹೆಜ್ಜೆ ಹಾಕಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟ್ಟಿಗರೊಬ್ಬರು ಹಳೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಹಳೆ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.
"ಶೀಲಾ ಕಿ ಜವಾನಿ.." ಹಾಡು ಯಾರಿಗೆ ಗೊತ್ತಿಲ್ಲ. ಕತ್ರಿನಾ ಕೈಫ್ ಹೆಜ್ಜೆ ಹಾಕಿರೋ ಈ ಹಾಡು ಇಂದಿಗೂ ಯುವಕ-ಯುವತಿಯ ಬಾಯಲ್ಲಿ ಹರಿದಾಡುತ್ತಲೇ ಇರುತ್ತೆ. ಇದೇ ಹಾಡಿಗೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಸಾಯಿ ಪಲ್ಲವಿ ಹೆಜ್ಜೆ ಹಾಕಿದ್ದರು. ಕಾರ್ಯಕ್ರಮದಲ್ಲಿ ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ಆ ವಿಡಿಯೋ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.
ದೂರದಿಂದ ವಿಡಿಯೋ ಮಾಡಿದ್ದರಿಂದ ಅಸ್ಪಷ್ಟವಾಗಿ ಕಾಣುತ್ತಿದ್ದರೂ, ಅದು ಸಾಯಿ ಪಲ್ಲವಿ ಅನ್ನೋದನ್ನು ಆರಾಮಾಗಿ ಗುರುತಿಸಬಹುದು. ಅಷ್ಟೇ ಅಲ್ಲದೆ ಸಾಯಿ ಪಲ್ಲವಿ ಹಾಗೂ ತಂಡ ಕೊಟ್ಟ ಪರ್ಫಾಮೆನ್ಸ್‌ಗೆ ಕಾರ್ಯಕ್ರಮಕ್ಕೆ ಬಂದಿದ್ದ ಸ್ನೇಹಿತರು ಕೂಡ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದ್ದರು. ಈ ವಿಡಿಯೋಗೆ ನೆಟ್ಟಿಗರು ಮಸ್ತ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇದೀಗ ಸಾಯಿ ಪಲ್ಲವಿ ಹಳೇ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. "ಸಾಯಿ ಪಲ್ಲವಿ ಡ್ಯಾನ್ಸ್‌ಗೆ ಸರಿಸಾಟಿನೇ ಇಲ್ಲ" ಅಂತ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು "ಲೇಡಿ ಮೈಕಲ್ ಜಾಕ್ಸನ್ ಎಂದು ಕಾಮೆಂಟ್" ಮಾಡುತ್ತಿದ್ದಾರೆ. ಹೀಗೆ ಮಸ್ತ್ ಕಾಮೆಂಟ್‌ಗಳು ಬರುತ್ತಿವೆ.
ಸಾಯಿ ಪಲ್ಲವಿ ಡ್ಯಾನ್ಸ್‌ಗೆ ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಅಭಿಮಾನಿಗಳು ಇದ್ದಾರೆ. ಸದ್ಯ ಸಾಯಿ ಪಲ್ಲವಿ ತೆಲುಗು ಹೀರೊ ನಾಗ ಚೈತನ್ಯ, ತಮಿಳಿನ ಶಿವ ಕಾರ್ತಿಕೇಯನ್ ಜೊತೆ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಹಾಗೇ ಆಮಿರ್ ಖಾನ್ ಪುತ್ರ ಜುನೈದ್ ಖಾನ್‌ಗೆ ಜೋಡಿಯಾಗಿ ನಟಿಸುತ್ತಿರೋ ಬಗ್ಗೆನೂ ಸುದ್ದಿಯಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ನಟಿಸುತ್ತಿರುವ 'ರಾಮಾಯಣ' ಸಿನಿಮಾದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











