ಕನ್ನಡದಲ್ಲಿ ಡೈಲಾಗ್ ಬಿಟ್ಟು 'ಗಾರ್ಗಿ' ಲುಕ್ ಕೊಟ್ಟ ಸಾಯಿ ಪಲ್ಲವಿ ಖದರ್‌ಗೆ ಕನ್ನಡಿಗರು ಫುಲ್ ಖುಷ್

ದಕ್ಷಿಣದ ಸುಂದರಿ ಸಾಯಿ ಪಲ್ಲವಿಗೆ ಇಂದು( ಮೇ 9) ಹುಟ್ಟುಹಬ್ಬದ ಸಂಭ್ರಮ. 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ ತನ್ನ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ಸಾಯಿ ಪಲ್ಲವಿ ಕೊಟ್ಟ ಈ ಶಾಕಿಂಗ್ ಗಿಫ್ಟ್‌ಗೆ ಅದ್ಯಾರು ಎಷ್ಟು ಖುಷಿಯಾಗಿದ್ದಾರೋ ಗೊತ್ತಿಲ್ಲ. ಆದರೆ, ಕನ್ನಡಿಗರಂತೂ ದಿಲ್ ಖುಷ್ ಆಗಿದ್ದಾರೆ.

ಸಾಯಿ ಪಲ್ಲವಿ ಒಂದು ದಿನ ಮುಂಚೆನೇ ಸರ್ಪ್ರೈಸ್ ಕೊಡುವುದಾಗಿ ಅನೌನ್ಸ್ ಮಾಡಿದ್ದರು. ಬರೀ ಕಾಲು ಕಾಣುವ ಫೋಟೊವೊಂದನ್ನು ಶೇರ್ ಮಾಡಿ ಸಿನಿ ಪ್ರಿಯರ ತಲೆಗೆ ಹುಳಬಿಟ್ಟಿದ್ದರು. ಈ ಫೋಟೊ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಮದುವೆ ರೂಮರ್‌ಗೆ ಟಾಂಗ್ ಕೊಡಲೆಂದೇ ಹಾಕಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಸಾಯಿ ಪಲ್ಲವಿ 'ಗಾರ್ಗಿ' ಅನ್ನುವ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಹೌದು.. ಸಾಯಿ ಪಲ್ಲವಿ ತನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಹೊಸ ಸಿನಿಮಾದ ಗಿಫ್ಟ್ ಇದು. ಈ ಮೂಲಕ ಸಿನಿಮಾದಿಂದ ದೂರ ಸರಿಯುತ್ತಾರೆ ಎನ್ನುವ ಸುದ್ದಿಗೆ ಬ್ರೇಕ್ ಹಾಕಿದ್ದಾಗಿದೆ. ವಿಶೇಷ ಅಂದರೆ, 'ಗಾರ್ಗಿ'ಯಲ್ಲಿ ಸಾಯಿ ಪಲ್ಲವಿ ಡಿಗ್ಲಾಮರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತಲೂ ವಿಶೇಷ ಅಂದರೆ, ಸ್ವತ: ಸಾಯಿ ಪಲ್ಲವಿನೇ ಕನ್ನಡದಲ್ಲೂ ಡಬ್ ಮಾಡಿದ್ದಾರೆ. ಹಾಗಿದ್ದರೆ, ಈ ಸಿನಿಮಾದ ವಿಶೇಷತೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಗಾರ್ಗಿ' ಸಾಯಿ ಪಲ್ಲವಿ ಹೊಸ ಸಿನಿಮಾ

'ಗಾರ್ಗಿ' ಸಾಯಿ ಪಲ್ಲವಿ ಹೊಸ ಸಿನಿಮಾ

ಸೌತ್ ಬ್ಯೂಟಿ ಸಾಯಿ ಪಲ್ಲವಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾದ ಟೈಟಲ್ 'ಗಾರ್ಗಿ'. ಸಾಯಿ ಪಲ್ಲವಿ ಬರ್ತ್‌ಡೇಗೆ ಅಂತ ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋಗಳನ್ನು ನೋಡಿದರೆ, ಇದು ಪಕ್ಕಾ ಮಹಿಳಾ ಪ್ರಧಾನ ಸಿನಿಮಾ ಅನ್ನೋದನ್ನು ಹೇಳಬಹುದು. ಸೀರೆ, ಚೂಡಿದಾರದಲ್ಲಿ ಪಕ್ಕಾ ಭಾರತೀಯ ಮಹಿಳೆಯ ಅವತಾರವೆತ್ತಿರುವ ಸಾಯಿ ಪಲ್ಲವಿ ಪಾತ್ರದ ಬಗ್ಗೆ ಕುತೂಹಲ ಕೆರಳಿಸುತ್ತಿದೆ. ಗಾರ್ಗಿ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.

ಕನ್ನಡದಲ್ಲಿ ಡಬ್ ಮಾಡಿದ ಸಾಯಿ ಪಲ್ಲವಿ

ಕನ್ನಡದಲ್ಲಿ ಡಬ್ ಮಾಡಿದ ಸಾಯಿ ಪಲ್ಲವಿ

'ಗಾರ್ಗಿ' ಮೂರು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತಮಿಳು ಮೂಲ ಭಾಷೆಯಾಗಿದ್ದರೂ, ತೆಲುಗು ಹಾಗೂ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಗಾಗಲಿದೆ. ಈ ಕಾರಣಕ್ಕೆ ಸ್ವತ: ಸಾಯಿ ಪಲ್ಲವಿ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಡಬ್ ಮಾಡಿದ್ದಾರೆ. ಕಷ್ಟ ಪಟ್ಟು ಕನ್ನಡದಲ್ಲಿ ಡಬ್ ಮಾಡಿದ ವಿಡಿಯೋವನ್ನು ಮೇಕಿಂಗ್ ವಿಡಿಯೋ ಮೂಲಕ ಶೇರ್ ಮಾಡಿಕೊಳ್ಳಲಾಗಿದೆ. "ನಾನು ಹೇಳುವುದು ಯಾವುದನ್ನೂ ಸೀರಿಯಸ್‌ ಆಗಿ ತಗೋಳೋದಿಲ್ಲ ಅಲ್ವಾ?" ಇದೊಂದು ಡೈಲಾಗ್ ಕನ್ನಡಿಗರ ದಿಲ್ ಖುಷ್‌ಗೆ ಕಾರಣವಾಗಿದೆ.

ಸಾಯಿ ಪಲ್ಲವಿ ಬಗ್ಗೆ ಕನ್ನಡಿಗರು ಏನಂದ್ರು?

ಸಾಯಿ ಪಲ್ಲವಿ ಬಗ್ಗೆ ಕನ್ನಡಿಗರು ಏನಂದ್ರು?

ಕನ್ನಡದಲ್ಲಿ ಸಾಯಿ ಪಲ್ಲವಿ ಧ್ವನಿಯನ್ನು ಕೇಳಿ ಕನ್ನಡಿಗರು ಪುಲ್ ಖುಷಿಯಾಗಿದ್ದಾರೆ. ಕನ್ನಡದಲ್ಲಿ ಡಬ್ ಮಾಡುವುದಕ್ಕಾಗಿ ಸಾಯಿ ಪಲ್ಲವಿ ಹಾಕಿದ ಎಫರ್ಟ್‌ ಕಂಡು ಕನ್ನಡಿಗರು ಹಿರಿಹಿರಿ ಹಿಗ್ಗಿದ್ದಾರೆ. ಮೇಕಿಂಗ್ ವಿಡಿಯೋ ನೋಡಿ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. " ಸಾಯಿ ಪಲ್ಲವಿ ಕನ್ನಡದಲ್ಲೂ ಡಬ್ ಮಾಡಿದ್ದನ್ನು ನೋಡಿ ಖುಷಿಯಾಗಿದೆ. ಮೇಡಂ ನಿಮ್ಮ ಪ್ರಯತ್ನಕ್ಕೆ ನಿಮ್ಮ ಅಭಿನಂದನೆಗಳು. ನಾವೀಗ ಸಿನಿಮಾವನ್ನು ಎದುರು ನೋಡುತ್ತಿದ್ದೇವೆ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. " ಕನ್ನಡಕ್ಕೆ ಡಬ್ ಆದ ಸಿನಿಮಾ ಅದ್ಭುತ ಅಂತ ಅನಿಸುತ್ತೆ." ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಗಾರ್ಗಿ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದೇನು?

'ಗಾರ್ಗಿ' ಸಿನಿಮಾ ಬಗ್ಗೆ ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದು, ಅಭಿಮಾನಿಗಳಿಗೆ ಸಂದೇಶವನ್ನೂ ರವಾನಿಸಿದ್ದಾರೆ. " ಒಂದು ತಿಂಗಳಿನಿಂದ ಈ ಸಿನಿಮಾ ಬಗ್ಗೆ ಮಾತಾಡಲು ನಾನು ಕಾಯುತ್ತಿದ್ದೆ. ಕೊನೆಗೂ, ಹಠಮಾರಿ ತಂಡ ನನ್ನ ಹುಟ್ಟುಹಬ್ಬದಂದೇ ಇದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ನಾನೀಗ ಗಾರ್ಗಿಯನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ಇದು ನಿರ್ದೇಶಕ ಗೌತಮ್ ರಾಮಚಂದ್ರನ್ ಅವರ ಬ್ರೈನ್ ಚೈಲ್ಡ್." ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ.

More from Filmibeat

English summary
Sai Pallavi Dubbed in Kannada for her New Movie Gargi Making Released for Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X