ಕಾಲಿನ ಫೋಟೊ ತೋರಿಸಿ ಮುಖ ತೋರಿಸಲು ನಿರ್ಧರಿಸಿದ ಸಾಯಿ ಪಲ್ಲವಿ: ಬರ್ತ್‌ಡೇ ದಿನವೇ ಮುಹೂರ್ತ
ಡೌಟೇ ಇಲ್ಲ. ಸಾಯಿ ಪಲ್ಲವಿ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಈಕೆ ಮುಟ್ಟಿದ್ದೆಲ್ಲಾ ಚಿನ್ನ. ದಕ್ಷಿಣ ಭಾರತದಲ್ಲಿ ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅದರಲ್ಲೀ ಇತ್ತೀಚೆಗೆ ತೆಲುಗಿನಲ್ಲಿ ಸಾಯಿ ಪಲ್ಲವಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಿದ್ದರೂ, ಸಾಯಿ ಪಲ್ಲವಿ ಮಾತ್ರ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.
ಇದೇ ಕಾರಣಕ್ಕೆ ಸಾಯಿ ಪಲ್ಲವಿ ಬಗ್ಗೆ ಗಾಳಿಸುದ್ದಿಯೊಂದು ಹರಿದಾಡಿತ್ತು. ಸಾಯಿ ಪಲ್ಲವಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಶೀಘ್ರದಲ್ಲಿಯೇ ಸಿನಿಮಾ ಗುಡ್ ಬೈಟ್ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೀಗ ಈ ಎಲ್ಲಾ ಊಹಾ-ಪೋಹಗಳಿಗೂ ಸಾಯಿ ಪಲ್ಲವಿ ತೆರೆ ಎಳೆಯಲು ನಿರ್ಧರಿಸಿದ್ದಾರೆ.
ಹುಟ್ಟುಹಬ್ಬದಂದೇ ಸರ್ಪ್ರೈಸ್ ನೀಡಲು ಸಜ್ಜಾದ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಮೇ 9 ರಂದು 30ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಂದೇ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಅಚ್ಚರಿ ವಿಷಯ ಹೇಳಲು ಹೊರಟಿದ್ದಾರೆ. ಇಷ್ಟು ದಿನ ಕಾಣೆಯಾಗಿದ್ದು ಯಾಕೆ? ಹೊಸ ಪ್ಲ್ಯಾನ್ ಏನು ಎಂಬುವುದನ್ನು ಸಾಯಿ ಅನೌನ್ಸ್ ಮಾಡಲಿದ್ದಾರೆ.

ಈ ವಿಷಯಕ್ಕೆ ಕುರಿತಂತೆ ಸಾಯಿ ಪಲ್ಲವಿ ಈಗಾಗಲೇ ಟ್ವೀಟ್ ಮಾಡಿದ್ದು, ಮುಖವೇ ಕಾಣದ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, " ಆಕೆ ಒಂದು ಅಚ್ಚರಿ. ಇಷ್ಟು ದಿನ ಕಾಣದಂತೆ ಇದ್ದಳು. ಈ ಸೋಮವಾರ ಅವಳು ನಿಮ್ಮನ್ನು ನೋಡಲು ರೆಡಿಯಿದ್ದಾಳೆ ಎನಿಸುತ್ತದೆ. ಮೇ 9ರಂದು." ಎಂದು ಟ್ವೀಟ್‌ನಲ್ಲಿ ಫೋಟೊ ಮೂಲಕ ಬರೆದುಕೊಂಡಿದ್ದಾರೆ. ಈ ಕಾರಣಕ್ಕೆ ಸಾಯಿ ಪಲ್ಲವಿ ಹೊಸ ಸಿನಿಮಾ ಅನೌನ್ಸ್ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ.
ಜುಲೈ 1 ರಂದು 'ವಿರಾಟ ಪರ್ವಂ' ರಿಲೀಸ್
ಸಾಯಿ ಪಲ್ಲವಿ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದರೆ, ಈಗಾಗಲೇ ನಟಿಸಿರುವ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ರಾಣಾ ದಗ್ಗುಬಾಟಿ ಜೊತೆ ನಟಿಸಿದ್ದ 'ವಿರಾಟ ಪರ್ವಂ' ಸಿನಿಮಾ ಜುಲೈ 1 ರಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಸಾಯಿ ಪಲ್ಲವಿ ನಟಿಸಿದ ಕೊನೆಯ ಸಿನಿಮಾ 'ಶ್ಯಾಮ ಸಿಂಘ ರಾಯ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಕೋವಿಡ್ ಬಳಿಕ ಬಿಡುಗಡೆಯಾಗುತ್ತಿರುವ ಸಿನಿಮಾ ಆದರೂ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದರು.
30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಾಯಿಪಲ್ಲವಿ ಮೇ 9ರಂದು ಅದೇನು ಸರ್ಪ್ರೈಸ್ ಕೊಡುತ್ತಾರೆ ಎನ್ನುವುದನ್ನು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೇಳಿದಂತೆ ಹೊಸ ಸಿನಿಮಾವನ್ನು ಏನಾದರೂ ಅನೌನ್ಸ್ ಮಾಡುತ್ತಾರಾ? ಇಲ್ಲ? ಮದುವೆ ಬಗ್ಗೆ ಮಾಹಿತಿ ನೀಡುತ್ತಾರಾ? ಅನ್ನೋವುದೇ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಸಾಯಿ ಪಲ್ಲವಿ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ.


Click it and Unblock the Notifications










