Prashanth Neel: "ಸಲಾರ್ 1 ಖುಷಿ ಕೊಟ್ಟಿಲ್ಲ.. ಪಾರ್ಟ್ 2 ನನ್ನ ಲೈಫ್‌ನ ಬೆಸ್ಟ್ ಸಿನಿಮಾ"; ಪ್ರಶಾಂತ್ ನೀಲ್

ಭಾರತೀಯ ಚಿತ್ರರಂಗದ ಟಾಪ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೈ ತುಂಬಾ ಸಿನಿಮಾಗಳಿವೆ. ಒಂದರ ಹಿಂದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿದ ಸಿನಿಮಾ ಆ ಮಟ್ಟಿಗೆ ಯಶಸ್ಸು ಕಾಣದೇ ಹೋದರೂ, ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಕೊಂಡಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿರುವ ಮೊದಲ ಸಿನಿಮಾ ಇದು.

'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿದ 'ಸಲಾರ್: ಸೀಜ್ ಫೈಯರ್' ರಿಲೀಸ್ ಆಗಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ 'ಸಲಾರ್ 1' ತನಗೆ ತೃಪ್ತಿ ಕೊಟ್ಟಿಲ್ಲ. 'ಕೆಜಿಎಫ್ 2' ಬಳಿಕ ತಾನು 'ಸಲಾರ್' ಅನ್ನು ಲೈಟ್ ಆಗಿ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ. ಹಾಗೇ 'ಸಲಾರ್ 2' ತನ್ನ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಆಗುತ್ತೆ ಅಂತಾನೂ ಹೇಳಿಕೊಂಡಿದ್ದಾರೆ.

Salaar 1 disappointed part 2 will be my best film says Prashanth Neel

'ಸಲಾರ್ 1' ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ನೀಡಿದ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. 'ಸಲಾರ್ 2' ಮಾಡುವುದಕ್ಕೆ ಕಾರಣವೇನು? ಈಶ್ವರಿ ರಾವ್ ನಟಿಸಿದ ಒಂದು ಸೀನ್ ಅನ್ನು ಇಟ್ಟಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಆ ಸಂದರ್ಶನದ ಒಂದು ಝಲಕ್ ಇಲ್ಲಿದೆ.

'ಸಲಾರ್ 2' ಮಾಡುವುದಕ್ಕೆ ಇದೇ ಕಾರಣ

'ಸಲಾರ್ 1' ಈ ಹಿಂದೆ ಅವರೇ ನಿರ್ದೇಶಿಸಿದ 'ಉಗ್ರಂ' ಸಿನಿಮಾ ಅಪ್‌ಡೇಟೆಡ್ ವರ್ಷನ್ ಅನ್ನೋದು ಗೊತ್ತಿದೆ. ಒಂದೇ ಪಾರ್ಟ್‌ನಲ್ಲಿ ಮುಗಿದು ಹೋಗಬೇಕಿದ್ದ ಸಿನಿಮಾವನ್ನು ಇನ್ನೊಂದು ಪಾರ್ಟ್‌ನಲ್ಲಿ ತೋರಿಸಲು ಹೊರಟಿದ್ದು ಏಕೆ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಸಲಾರ್ 2 ಸಿನಿಮಾ ಮಾಡುವುದಕ್ಕೆ ವರದ ಮತ್ತು ದೇವ ಇಬ್ಬರು ವೈರಿಗಳಾಗಿದ್ದೇ ಕಾರಣ. ಸಲಾರ್ ಚಾಪರ್ 1 ಸಕ್ಸಸ್ ಆಯ್ತು. ಅದಕ್ಕೆ ಸಲಾರ್ 2 ಮಾಡುತ್ತಿದ್ದೇನೆ. ಈ ಫ್ರಾಂಚೈಸಿಯನ್ನು ಕಂಟಿನ್ಯೂ ಮಾಡಬೇಕು ಅಂತಲ್ಲ. ಇಬ್ಬರೂ ವೈರಿಗಳಾದ ಆ ಸನ್ನಿವೇಶವನ್ನು ನಾನು ತೆರೆಮೇಲೆ ಹೇಳಬೇಕು. ಉಳಿದಿದ್ದು ಅವರವರ ಕಲ್ಪನೆಗೆ ಬಿಟ್ಟಿದ್ದು" ಎಂದಿದ್ದಾರೆ.

ತಾಯಿಯ ಆ ದೃಶ್ಯ ಯಾಕೆ?

ಪ್ರಭಾಸ್ ತನ್ನ ತಾಯಿಗೆ ಪ್ಲಾಸ್ಟಿಕ್ ಚಾಕು ನೀಡುವ ದೃಶ್ಯವನ್ನು ಹಾರರ್ ಫೀಲ್‌ನಲ್ಲಿ ತೋರಿಸಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ದೇವ ಪ್ಲಾಸಿಕ್‌ ಚಾಕುವನ್ನು ಎತ್ತಿಕೊಂಡಾಗ ಆತನ ತಾಯಿ ಆ ದೃಶ್ಯವನ್ನು ಹಾರರ್ ಸೀನ್‌ನಂತೆ ನೋಡುತ್ತಾಳೆ. ಇದು ಅತಿ ಆಯ್ತಾ ಅಂತ ಕೇಳಿದರೆ ಖಂಡಿತಾ ಇಲ್ಲ. ತಾಯಿ ಯಾಕೆ ಹಾಗೆ ಮಾಡ್ತಾಳೆ ಅನ್ನೋದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನೀವು ಪಾರ್ಟ್ 2ಗಾಗಿ ಕಾಯಬೇಕು. ನನಗೆ ಇದು ಸಲಾರ್ 2ನಲ್ಲಿ ಇರುವ ಅದ್ಭುತ ದೃಶ್ಯ ಅಂತ ಅನಿಸುತ್ತೆ." ಎಂದು ಪ್ರಶಾಂತ್ ನೀಲ್ಲ ಹೇಳಿದ್ದಾರೆ.

Salaar 1 disappointed part 2 will be my best film says Prashanth Neel

'ಸಲಾರ್‌ 1' ತಪ್ಪುಗಳಿಗೆ ಕಾರಣ ನಾನೇ?

"ನಿಮಗೆ ಸಲಾರ್‌ನಲ್ಲಿ ಏನೇ ತಪ್ಪುಗಳು ಕಂಡಿದ್ದರೂ ಅದಕ್ಕೆ ನಾನೇ ಕಾರಣ. ಯಾಕಂದರೆ, ಅದನ್ನು ಮಾಡುವುದಕ್ಕೆ ಹೇಳಿದ್ದೇ ನಾನು. ಈಶ್ವರಿ ರಾವ್ ಅವರು ಒಬ್ಬ ಅದ್ಭುತ ನಟಿ. ಆ ಸೀನ್‌ನಲ್ಲಿ ಅವರು ತಪ್ಪು ಮಾಡಬಾರದು. ತಪ್ಪು ಮಾಡುವುದಕ್ಕೆ ನಾನೂ ಬಿಡಬಾರದು." ಎಂದು ಪ್ರಶಾಂತ್ ನೀಲ್ ಸಂದರ್ಶನದಲ್ಲಿ ಹೇಳಿದ್ದಾರೆ.

"ಸಲಾರ್ 1 ನನಗೆ ಖುಷಿಕೊಟ್ಟಿಲ್ಲ"

"ನನಗೆ ಸಂಪೂರ್ಣವಾಗಿ ಖುಷಿಯಾಗಿಲ್ಲ. ನಾನು ಸಲಾರ್ ಪಾರ್ಟ್ 1ಕ್ಕೆ ಹಾಕಿದ ಶ್ರಮದಿಂದ ಸ್ವಲ್ಪ ನಿರಾಸೆಯಾಗಿದೆ. 'ಕೆಜಿಎಫ್ 2' ಬಳಿಕ ನನಗೆ ಸಂಪೂರ್ಣ ತೃಪ್ತಿಯಾಗಿದೆ ಅಂತ ಅನಿಸಿತ್ತು. ಹೀಗಾಗಿ ಸಲಾರ್ ಅನ್ನು ಲೈಟ್ ಆಗಿ ತೆಗೆದುಕೊಂಡೆ. ಆದಲ್ಲಿಂದ 'ಸಲಾರ್ 2' ಅನ್ನು ನನ್ನ ಬೆಸ್ಟ್ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದೆ. ಸಲಾರ್ 2 ನನ್ನ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಆಗಬಹುದು ಅಂತ ಬರೆದುಕೊಡಬಲ್ಲೆ." ಎಂದು ಪ್ರಶಾಂತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪ್ರಶಾಂತ್ ಕೈಯಲ್ಲಿರುವ ಪ್ರಾಜೆಕ್ಟ್

'ಸಲಾರ್ 2', 'ಕೆಜಿಎಫ್ 3' ಸಿನಿಮಾ ಬಳಿಕ ಪ್ರಶಾಂತ್ ನೀಲ್ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳು ಇವೆ. ಅದರಲ್ಲೊಂದು ಪೌರಾಣಿಕ ಸರಣಿಗಳು ಕೂಡ ಸೇರಿಕೊಂಡಿದೆ. "ಪೌರಾಣಿಕ ಸರಣಿಗಳನ್ನು ಮಾಡುವ ಪ್ಲ್ಯಾನ್ ಇದೆ. ಅದು ಈಗಲೇ ಆಗಲ್ಲ. ಜೂ.ಎನ್‌ಟಿಆರ್ ಜೊತೆ ಮಾಡುತ್ತಿರುವುದು ಐತಿಹಾಸಿಕ ಸಿನಿಮಾ. ಈಗ ಪೌರಾಣಿಕ ಸಿನಿಮಾ ಬಗ್ಗೆ ಮಾತಾಡುವುದಿಲ್ಲ." ಎಂದಿದ್ದಾರೆ.

More from Filmibeat

English summary
Salaar 1 disappointed part 2 will be my best film says Prashanth Neel
Read more about: prashanth neel salaar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X